ಮಂಗಳೂರು: ಕಾಲೇಜು ಮೆಟ್ಟಿಲಿನಿಂದ ಆಕಸ್ಮಿಕವಾಗಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ, ನಗರದ ಖಾಸಗಿ ಪದವಿ ಕಾಲೇಜಿನ ಉಪನ್ಯಾಸಕಿ 23 ವರ್ಷದ ಗ್ಲೋರಿಯಾ ಆಶಾ ರೋಡ್ರಿಗಸ್ ಅವರು ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ.
ಮೃತರು ಬಜ್ಪೆ ಪಡು ಪೆರಾರ ನಿವಾಸಿಯಾಗಿದ್ದು, ಒಂದು ವರ್ಷದ ಹಿಂದಷ್ಟೇ ಖಾಸಗಿ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ಇದೇ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಕಾಮರ್ಸ್ ವಿಷಯದಲ್ಲಿ ಉಪನ್ಯಾಸಕಿಯಾಗಿ ಸೇರ್ಪಡೆಗೊಂಡಿದ್ದರು.
ನ.8ರಂದು ಕಾಲೇಜಿನಲ್ಲಿ ಮೆಟ್ಟಲು ಇಳಿಯುತ್ತಿದ್ದಾಗ ತಲೆಸುತ್ತು ಬಂದು ಬಿದ್ದ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಕೋಮಾ ಸ್ಥಿತಿಯಲ್ಲಿದ್ದ ಗ್ಲೋರಿಯಾ, ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಈ ದುಃಖದ ನಡುವೆಯೂ ಕುಟುಂಬಸ್ಥರು ಅವರ ದೇಹದ ಅಂಗಾಂಗ ದಾನ ಮಾಡಿದ್ದಾರೆ.
ಗ್ಲೋರಿಯಾ ಅಂತ್ಯಕ್ರಿಯೆ ನ.14ರ ಮಧ್ಯಾಹ್ನ ಬಜ್ಪೆಯ ಸೈಂಟ್ ಜೋಸೆಫ್ ಚರ್ಚ್ನಲ್ಲಿ ನೆರವೇರಿತು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						