ಭಿವಾನಿ: ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ಎಂದು ವಿದ್ಯೆ ಕಲಿಸಿದ ಗುರುಗಳನ್ನು ಪೂಜಿಸುತ್ತಿದ್ದ ಸಮಯ ನಮ್ಮ ಕಾಲಘಟ್ಟಕ್ಕೆ ಮುಗಿಯಿತೆ ಎಂಬ ಅನುಮಾನ ಆರಂಭವಾಗಿದೆ.
ಕಾರಣ ಹರಿಯಾಣದ ಭಿವಾನಿ ಜಿಲ್ಲೆಯ ಬೋಪಾರಾ ಗ್ರಾಮದಲ್ಲಿ ಕಾಲೇಜುಯೊಂದರಲ್ಲಿ ವಿಜ್ಞಾನ (ಸೈನ್ಸ್) ಉಪನ್ಯಾಸಕಿ ಕುರ್ಚಿಯ ಕೆಳಗೆ ಬಾಂಬ್ ಇಟ್ಟು ಸ್ಫೋಟಿಸಿದ್ದು, ಪರಿಣಾಮ ಶಿಕ್ಷಕಿ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುತ್ತಿರುವ ಗೌರವದ ಕುರಿತು ಚರ್ಚೆಗೆ ಕಾರಣವಾಗಿದೆ.
ನ.9 ಶನಿವಾರದಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೋಪಾರಾ ಗ್ರಾಮದ ಕಾಲೇಜಿನಲ್ಲಿ 12 ನೇ ತರಗತಿಗೆ ವಿಜ್ಞಾನ ಉಪನ್ಯಾಸಕಿ ಕುರ್ಚಿಯಲ್ಲಿ ಕುಳಿತಿರುವ ವೇಳೆ ವಿಧ್ಯಾರ್ಥಿಯೊಬ್ಬ ರಿಮೋಟ್ ಮೂಲಕ ಬಾಂಬ್ ಬ್ಲಾಸ್ಟ್ ಮಾಡಿದ್ದಾನೆ.
ವರದಿಯ ಅನ್ವಯ, ಉಪನ್ಯಾಸಕಿ ಬರುವ ಮೊದಲೇ ವಿಧ್ಯಾರ್ಥಿಗಳು ಅವರ ಕುರ್ಚಿಯ ಕೆಳಗೆ ಪಟಾಕಿಯಂತಹ ಬಾಂಬ್ ಅನ್ನು ಅಳವಡಿಸಿ ಮಾಡಿ ಬಂದಿದ್ದಾನೆ. ಪ್ಲಾನ್ ಪ್ರಕಾರ ಸೈನ್ಸ್ ಟೀಚರ್ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಇನ್ನೋರ್ವ ವಿಧ್ಯಾರ್ಥಿ ರಿಮೋಟ್ ಮೂಲಕ ಬಟನ್ ಒತ್ತಿ ಬಾಂಬ್ ಸ್ಫೋಟಿಸಿದ್ದಾನೆ.
ಬಾಂಬ್ ಸ್ಪೋಟದಿಂದ ಕುರ್ಚಿಯ ಕೆಳಗೆ ರಂಧ್ರವಾಗಿದ್ದು, ಉಪನ್ಯಾಸಕಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಸದ್ಯ ಈ ಘಟನೆಯ ಸಂಬಂಧ ಬುಧವಾರ ಶಿಕ್ಷಣ ಇಲಾಖೆ ತಂಡ ಶಾಲೆಗೆ ಆಗಮಿಸಿ ತರಗತಿಯಲ್ಲಿ 15 ಮಕ್ಕಳ ಪೈಕಿ ಈ ಕೃತ್ಯದಲ್ಲಿ ಬಾಗಿಯಾಗಿದ್ದ 13 ಮಕ್ಕಳ ವಿರುದ್ಧ ಕ್ರಮ ಕೈಗೊಂಡಿದೆ.
ಆದರೆ ಈ ಘಟನೆಯ ಸಂಬಂಧ ವಿಧ್ಯಾರ್ಥಿಗಳ ಮನೆಯವರು ಲಿಖಿತವಾಗಿ ಕ್ಷಮಾಪಣಾ ಪತ್ರ ನೀಡಿದ್ದು ಮಕ್ಕಳನ್ನು ಕ್ಷಮಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಉಪನ್ಯಾಸಕಿ ಕೂಡ ಮಕ್ಕಳನ್ನು ಕ್ಷಮಿಸಿದ್ದು ಮುಂದೆದು ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಮಕ್ಕಳು ಸೈನ್ಸ್ ಮಾಡೆಲ್ ಮಾಡಿ ಪ್ರಸ್ತುತಪಡಿಸಿದ್ದರೆ ನಾವೇ ಅವರನ್ನು ಸನ್ಮಾನಿಸುತ್ತಿದ್ದೆವು. ಆದರೆ ಇವರು ತಮ್ಮ ಹುಚ್ಚಾಟಕ್ಕೆ ಉಪಯೋಗಿಸಿದ್ದಾರೆ ಎಂದು ಉಪನ್ಯಾಸಕಿ ಗರಂ ಆಗಿದ್ದಾರೆ.