ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ನಳಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ದೇವನಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆಯ ಕಬ್ಸ್ ಮತ್ತು ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
ಬೆಳ್ಳಿ ಪದಕವನ್ನು ಪಡೆದ ವಿದ್ಯಾರ್ಥಿಗಳನ್ನು ಶಾಲಾ ಕಾರ್ಯದರ್ಶಿ ಅನುರಾಧ ಕೆ.ಆರ್ ಅವರು ಅಭಿನಂದಿಸಿ, ಮುಂಬರುವ ಡಿವಿಷನ್ ಮತ್ತು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡುವಂತಾಗಲೆಂದು ಶುಭ ಹಾರೈಸಿದ್ದಾರೆ.
ವಿದ್ಯಾರ್ಥಿಗಳ ಈ ಯಶಸ್ಸನ್ನು ಶಾಲಾ ಮುಖ್ಯ ಶಿಕ್ಷಕರಾದ ಅನಿತಾ ಕೆ.ಪಿ ಮತ್ತು ಸುನೀತಾ.ಪಿ ರವರು ಹೆಮ್ಮೆಯಿಂದ ಶ್ಲಾಘಿಸಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: Doddaballapura: ನಳಂದ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ
ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳ ವಿವರ
ಗೈಡ್ಸ್ ವಿದ್ಯಾರ್ಥಿಗಳು: 10ನೇ ತರಗತಿಯ ಗಾನವಿ.ಎಸ್.ಎಂ., ವರ್ಷ.ಎನ್.,
ವರ್ಷ.ಕೆ.ಆರ್., ಪ್ರಿಯ.ಪಿ., 9ನೇ ತರಗತಿಯ ಚೈತನ್ಯ.ಎನ್.ಬಿ., ರಮ್ಯಾ.ಕೆ., ದೀಕ್ಷಾ.ಆರ್., ಮೋನಿಕಾ.ಪಿ.ಎಸ್.
ಬುಲ್ ಬುಲ್ಸ್ ವಿದ್ಯಾರ್ಥಿಗಳು; 4ನೇ ತರಗತಿಯ ಪೂರ್ವಿ ಕಲ್ಯಾಣಿ, ಶ್ರೀಖುಷಿ.ಜಿ., ಶ್ವೇತಾ.ಎಸ್.ಎಂ., ನಯನತಾರ.ಡಿ.ಜಿ., ಕವನ.ವಿ., ವಂದನ.ವಿ.
ಕಬ್ಸ್ ವಿದ್ಯಾರ್ಥಿಗಳು: 4ನೇ ತರಗತಿ
ಭವಿಷ್ ರಾಜ್ ಎಸ್.ಡಿ., ಕೆ ಸುಧನ್ವ ಜಿ ಭಟ್ಟ, ಶರತ್ ಕುಮಾರ್.ಕೆ., ಭುವನ್.ಎನ್.,
ರೋಹಿತ್.ಎಚ್.ಎಸ್., ಜತಿನ್.ವಿ.