ಚಿಕ್ಕಬಳ್ಳಾಪುರ: ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ದಕ್ಷಿಣ ಕಾಶಿ ಕ್ಷೇತ್ರ ಎಂದೇ ಪ್ರಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ (bhoga nandishwara) ದೇವಾಲಯಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ
ಕಡೆಯ ಕಾರ್ತಿಕ ಮಾಸ ಶಿವನಿಗೆ ಶ್ರೇಷ್ಠ ಮಾಸವಾಗಿದ್ದು, ಬೆಳಿಗ್ಗೆ ಶ್ರೀಭೋಗನಂದಿಶ್ವರನಿಗೆ ರುದ್ರಾಭಿಷೇಕ ನೇರವೇರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನ ನೇರವೇರಿಸಲಾಯಿತು. ನಂತರ ಶ್ರೀಭೋಗನಂದೀಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆಯುತ್ತಿದೆ.
ಇನ್ನೂ ಇದೇ ದಿನ ಶ್ರೀಭೋಗನಂದೀಶ್ವರನಿಗೆ ಭಕ್ತ ವೆಂಕಟೇಗೌಡ ಎಂಬುವವರು 2 ಕೋಟಿ ವೆಚ್ಚದ ರಥ ನಿರ್ಮಾಣ ಮಾಡಿಸಿದ್ದು, ನೂತನ ಭವ್ಯವಾದ ರಥವನ್ನ ಇಂದು ಬ್ರಹ್ಮರಥೋತ್ಸವ ಮಾಡುವ ಮೂಲಕ ದೇವಾಲಯಕ್ಕೆ ಸಮರ್ಪಣೆ ಮಾಡಲಾಯಿತು.
ಸಾವಿರಾರು ಮಂದಿ ರಥವನ್ನ ಎಳೆಯುವ ಮೂಲಕ ತಮ್ಮ ಕೋರಿಕೆಗಳನ್ನ ತೀರಿಸಿದರೆ, ಇನ್ನೂ ಕೆಲವರು ದವನ ಎಲೆಕ್ಕಿ ಬಾಳೆಹಣ್ಣನ್ನ ರಥಕ್ಕೆ ಎಸೆಯುವ ಮೂಲಕ ಹರಕೆ ತೀರಿಸಿಕೊಂಡರು.
ಆಂದಹಾಗೆ ಪ್ರತಿ ವರ್ಷವೂ ಮಹಾಶಿವರಾತ್ರಿ ಹಬ್ಬದ ಮರುದಿನ ಅದ್ದೂರಿ ಜಾತ್ರಾ ಹಾಗೂ ಜೋಡಿ ಬ್ರಹ್ಮರಥೋತ್ಸವ ನಡೆಯುಯತ್ತಿತ್ತು. ಆದರೆ ಈ ಬಾರಿ ನೂತನ ರಥವನ್ನ ಕಡೆಯ ಕಾರ್ತಿಕ ಸೋಮವಾರವಾದ ಇಂದು ಚಾಲನೆ ನೀಡುವ ಸಲುವಾಗಿ ಬ್ರಹ್ಮರಥೋತ್ಸವ ನಡೆಸಲಾಯಿತು.
ಇಂದು ಇಡೀ ದಿನ ದೇವರ ದರ್ಶನಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಲಿದ್ದು, ರಾತ್ರಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಸಹ ನಡೆಯಲಿದೆ.