ಪಾಣಿಪತ್; ರೀಲ್ಸ್ ಗಾಗಿ ಯುವಕನೋರ್ವ ಮಹಿಳೆಯ ವೇಷ ಧರಿಸಿ ಮಾಡಿ ಪೇಚಿಗೆ ಸಿಲುಕಿರುವ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿದೆ (Viral video).
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡೋದಕ್ಕೆ ಎಂತಹ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂಬುವುದು ಎಲ್ಲರಿಗೂ ಗೊತ್ತು. ಆದರೆ ಇದೀಗ ಹರಿಯಾಣದ ಪಾಣಿಪತ್‌ನಿಂದ ಜನನಿಬಿಡ ಮಾರುಕಟ್ಟೆಯಲ್ಲಿ ಯುವಕನೊಬ್ಬ ಮಹಿಳೆಯ ವೇಷ ಧರಿಸಿ ರೀಲ್ ಗಾಗಿ ಅಶ್ಲೀಲವಾಗಿ ಡಾನ್ಸ್ ಮಾಡಿದ್ದಾನೆ (Viral video).
ಇದರಿಂದ ಸಿಟ್ಟಾದ ಸ್ಥಳೀಯರು ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವರದಿಯ ಪ್ರಕಾರ, ಪಾಣಿಪತ್‌ನ ಇನ್ಸಾರ್ ಮಾರ್ಕೆಟ್‌ನಲ್ಲಿ ಹೆಣ್ಣಿನ ವೇಷದಲ್ಲಿ ಬ್ರಾ ತೊಟ್ಟು ಬಂದು ಮಾರುಕಟ್ಟೆಯ ನಡುವೆಯೇ ಅಶ್ಲೀಲ ಡಾನ್ಸ್ ಮಾಡಿದ್ದಾನೆ. ಇದರಿಂದ ಅಲ್ಲಿದ್ದ ಮಹಿಳೆಯರಿಗೆ ಇರಿಸು ಮುರಿಸು ಉಂಟಾಗಿದ್ದು ಕೂಡಲೇ ಆತನನ್ನು ಹಿಡಿದು ಥಳಿಸಿದ್ದಾರೆ.
ಈ ವೇಳೆ ಯುವಕ ಬಟ್ಟೆ ಪೂರ್ತಿ ಹರಿದು ಹೋಗಿದ್ದು ಅರೆಬೆತ್ತಲೆಯಾಗಿ ಸ್ತ್ರೀಯರ ಒಳ ಉಡುಪನ್ನು ಮಾತ್ರ ಉಳಿದಿದೆ.
मेरे हिसाब से इनका ठीक इलाज हो रहा है. उम्मीद है रील का भूत इनका उतर गया होगा
— Priya singh (@priyarajputlive) November 26, 2024
ये रीलबाज बीच बाज़ार में नाच अश्लील हरकतें कर रहा था
मौके पर कुछ लोगों ने पकड़ कूट दिया.
मामला हरियाणा के पानीपत का है. pic.twitter.com/o4Vj27KCSS
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇನ್ನೂ ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಯುವಕ ಅಂಗಲಾಚಿ ಬೇಡಿಕೊಂಡಿದ್ದಾನೆ.