ದೊಡ್ಡಬಳ್ಳಾಪುರ: ಕೆಂಪೇಗೌಡರ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ಹಾಗೂ ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆವತಿಯಿಂದ ನಗರದ ಒಕ್ಕಲಿಗರ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು (Health camp) ಆಯೋಜಿಸಿತ್ತು.
ಕಾರ್ಯಕ್ರಮಕ್ಕೂ ಮುನ್ನ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರಿಂಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಧಾಕೃಷ್ಣ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ವಿಶ್ವನಾಥ್ ಭಟ್, ಸ್ತ್ರೀ ರೋಗ ತಜ್ಞೆ ಡಾ.ವಿಧ್ಯ ವಿ ಭಟ್, ಡಾ.ಅನ್ವಿತ, ಮೂಳೆ ರೋಗ ತಜ್ಞ ಡಾ.ಸುಹಾಸ್ ಹಾಗೂ ತಜ್ಞ ವೈದ್ಯರುಗಳಾದ ಡಾ.ಬೃಂದಾ, ಡಾ.ಹಿತೈಷಿ ಅವರು ಶಿಬಿರಕ್ಕೆ ಬಂದಿದ್ದ ಸುಮಾರು 500ಕ್ಕು ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಗೆ ನಡೆಸಿದರು.
ಕೆಂಪೇಗೌಡರ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷೆ ರೇವತಿ, ಉಪಾಧ್ಯಕ್ಷೆ ಮಂಗಳ, ಕಾರ್ಯದರ್ಶಿ ಲಕ್ಷ್ಮಿ, ಖಜಾಂಚಿ ರತ್ನಮ್ಮ ಸೇರಿದಂತೆ
ನಿರ್ದೇಶಕರು, ಸಲಹಾ ಸಮಿತಿಯ ಸದಸ್ಯರು ಹಾಗೂ ಸಂಘದ ಸದಸ್ಯರು ಇದರು