ದೊಡ್ಡಬಳ್ಳಾಪುರ; ತಾಲೂಕಿನ ಪ್ರಸಿದ್ಧ ರಾಜಘಟ್ಟ ಗ್ರಾಮದ ಶ್ರೀ ಸೀತಾ ರಾಮಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದ ರವಿಪ್ರಕಾಶ್ ಆಚಾರ್ ಅವರು ಹೃದಯಾಘಾತದಿಂದ (heart attack) ನಿಧನ ಹೊಂದಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಮಡದಿ ಹಾಗೂ ಹೆಣ್ಣು ಮಗಳನ್ನು ಅಗಲಿದ್ದಾರೆ.
ಮೃತರ ಅಂತಿಮದ ದರ್ಶನಕ್ಕೆ ರಾಜಘಟ್ಟ ಗ್ರಾಮದ ಸ್ವಗೃಹದ ಬಳಿ ಅವಕಾಶ ಕಲ್ಪಿಸಲಾಗಿದೆ.
ಇಂದು ಮಧ್ಯಾಹ್ನ 12 ಗಂಟೆ ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.