ಬೆಂಗಳೂರು: ಬಿಜೆಪಿಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಅವರಿಗೆ ಗುಜರಾತಿನ ಪ್ರತಿಷ್ಠಿತ ಇಂಡಸ್ ವಿಶ್ವವಿದ್ಯಾಲಯ (INDUS UNIVERSITY) ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.
ಕದಂಬ ಸಂಸ್ಥೆಯ ವತಿಯಿಂದ ತಯಾರಿಸಿರುವ ರಾಸಾಯನಿಕ ರಹಿತ ಹಾಗೂ ಸಂಪೂರ್ಣ ಆರ್ಗ್ಯಾನಿಕ್ green nano technology ಉತ್ಪನ್ನಗಳ ಯಶಸ್ವಿ ಪ್ರಯೋಗ ಮತ್ತು ಸಮರ್ಪಣೆ ಸಲುವಾಗಿ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಗೌರವ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ. ಸಂದೀಪ್ ಚಕ್ರವರ್ತಿ, ಉಪಕುಲಪತಿ ಡಾ. ವೇದವ್ಯಾಸ ಜಯಪ್ರಕಾಶ್ ನಾರಾಯಣ್ ದ್ವಿವೇದಿ ಮತ್ತಿತರರಿದ್ದರು.