
ದೊಡ್ಡಬಳ್ಳಾಪುರ: ಕರ್ನಾಟಕ ರಕ್ಷಣಾ ವೇದಿಕೆ (Karave) ಪ್ರವೀಣ್ ಕುಮಾರ್ ಶೆಟ್ಟಿ ಬಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕು ಹಾಗೂ ಹೋಬಳಿವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಮೇಶ್ ವಿರಾಜ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಇದರನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿಯಾಗಿ ಎಸ್ಎಲ್ಎನ್ ವೇಣು, ಉಪಾಧ್ಯಕ್ಷರಾಗಿ ಮಲತಳ್ಳಿ ಆನಂದ್ ಅವರನ್ನು ಆಯ್ಕೆ ಮಾಡಲಾಗಿದೆ.
ಉಳಿದಂತೆ ತೂಬಗೆರೆ ಹೋಬಳಿ ಅಧ್ಯಕ್ಷರಾಗಿ ಮಂಜುನಾಥ್, ಮದುರೆ ಹೋಬಳಿ ಗೌರವ ಅಧ್ಯಕ್ಷರಾಗಿ ರಾಜಣ್ಣ, ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷರಾಗಿ ಎನ್ ರಾಜಣ್ಣ (ಜೇಮ್ಸ್) ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಪಾಲನ ಜೋಗಳ್ಳಿ ಘಟಕದ ಗೌರವಾಧ್ಯಕ್ಷರಾಗಿ ಮುನಿಕೃಷ್ಣ, ಅಧ್ಯಕ್ಷರನ್ನಾಗಿ ಮೋಹನ್ ಕುಮಾರ್, ಉಪಾಧ್ಯಕ್ಷರನ್ನಾಗಿ ಅಲ್ತಾಫ್, ಕಾರ್ಯದರ್ಶಿ ಮಂಜುನಾಥ್, ಅಶ್ವಥ್, ಖಜಾಂಚಿ ಭರತ್, ಸಂಘಟನಾ ಕಾರ್ಯದರ್ಶಿ ಅಭಿಲಾಶ್ಣ ಕಸಬಾ ಹೋಬಳಿ ಮುಖಂಡರನ್ನಾಗಿ ಪಾಲನ ಜೋಗಳ್ಳಿ ಪ್ರಕಾಶ್, ರಾಜಣ್ಣ, ಮುನಿಕೃಷ್ಣ, ರಘು, ಉಲ್ಲಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಆನಂದ್, ನಗರಾಧ್ಯಕ್ಷ ಶ್ರೀನಗರ ಬಶೀರ್, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಸಿರಾಜ್, ಶ್ರೀನಿವಾಸ್, ರಘುನಂದನ್ ಮತ್ತಿತರರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						