ತುಮಕೂರು: ಸೆರೆ ಹಿಡಿಯುವ ವೇಳೆ ಪರಾರಿಯಾಗುತ್ತಿದ್ದ ಚಿರತೆಯನ್ನು (Leopard) ಯುವಕನ್ನೊಬ್ಬ ಅದರ ಬಾಲ ಹಿಡಿದು ಬೋನಿಗೆ ಹಾಕಲು ನೆರವಾಗುವ ಮೂಲಕ ಸಾಹಸ ಮೆರೆದಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ರಂಗಾಪುರ ಗ್ರಾಮದ ಸುತ್ತಮುತ್ತ ಹಲವಾರು ದಿವಸಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್‌ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿತ್ತು.
ಸ್ಥಳೀಯರು ಈ ವಿಷಯ ವನ್ನು ಅರಣ್ಯ ಇಲಾಖೆಗೆ ತಿಳಿಸಿದರು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಸಲಕರಣೆಗಳೊಂದಿಗೆ ಬಂದರು. ಬಲೆ ಹಾಕಿ ಹಿಡಿಯಲು ಯತ್ನಿಸಿದಾಗ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿತ್ತು. ಕೂಡಲೇ ಅಲ್ಲೇ ಇದ್ದ ಆನಂದ್ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿ ಸಾಹಸ ಮೆರೆದಿದ್ದಾನೆ.
Indeed, a filmy capture of a leopard in Karnataka. pic.twitter.com/0tKtRqKlFF
— Ajay Kumar (@ajay_kumar31) January 7, 2025
ಯುವಕನ ಧೈರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಭೇಷ್ ಎಂದಿದ್ದಾರೆ.