ಪಾಲಕ್ಕಾಡ್: ಶಾಲೆಯಲ್ಲಿ ಪಾಠ ಕೇಳುತ್ತಿದ್ದ ವೇಳೆ ಆತ ಬಳಸುತ್ತಿದ್ದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಕ್ಕೆ ವಿದ್ಯಾರ್ಥಿಯೋರ್ವ ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ (shocking incident) ಕೇರಳದ ಪಾಲಕ್ಕಾಡ್ ಜಿಲ್ಲೆಯ ಅನಕ್ಕರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ.
ಜ.17 ರಂದು ಪ್ರಥಮ ಪಿಯು ವಿದ್ಯಾರ್ಥಿ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಈ ಘಟನೆ ಎಲ್ಲೆಡೆ ತೀವ್ರ ಚರ್ಚೆಯ ವಿಷಯವಾಗಿದೆ.
ಪಾಠದ ವೇಳೆ ತರಗತಿಗೆ ಮೊಬೈಲ್ ತರದಂತೆ ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ನಿಯಮವನ್ನ ಉಲ್ಲಂಘಿಸಿ ವಿದ್ಯಾರ್ಥಿ, ಬೋಧನಾ ಸಮಯದಲ್ಲಿ ಮೊಬೈಲನ್ನು ಬಳಸುತ್ತಿದ್ದದ್ದನ್ನು ನೋಡಿದ ಶಿಕ್ಷಕರು ಕೂಡಲೇ ಮೊಬೈಲ್ ವಶಪಡಿಸಿಕೊಂಡು ಪ್ರಾಂಶುಪಾಲರಿಗೆ ನೀಡಿದ್ದಾರೆ.
ಇದರಿಂದ ಕೋಪಗೊಂಡ ಬಾಲಕ ಸೀದಾ ಪ್ರಾಂಶುಪಾಲರ ಕಚೇರಿಗೆ ಹೋಗಿ ಮೊಬೈಲ್ ವಾಪಸ್ ನೀಡುವಂತೆ ಕೇಳಿದ್ದಾನೆ. ಕೊಡಲು ಒಪ್ಪದ ಪ್ರಾಂಶುಪಾಲರಿಗೆ ಹೊರಗೆ ಬಾ ನೋಡ್ಕೋತೀನಿ ಎಂಬಂತೆ ಕೊಲೆ ಬೆದರಿಕೆ ಹಾಕಿದ್ದಾನೆ.
ಇದರಿಂದ ಆತಂಕಗೊಂಡ ಶಿಕ್ಷಕರು ಪಿಟಿಎ ತ್ರಿತಾಲ ಪೊಲೀಸರಿಗೆ ದೂರು ನೀಡಿದ್ದಾರೆ.
Scary !
— നചികേതസ് (@nach1keta) January 21, 2025
+2 Student in Kerala arguing with his teacher for seizing his mobile phone and warns him that he will be finished outside of the school!
No comments on the generational change in respect towards the teachers, but we need a total ban on mobile phones in schools !! pic.twitter.com/4Jl6xlcx2G
ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳ ನೀಡುತ್ತಿರುವ ಗೌರವದ ಕುರಿತು ನಟ್ಟಿಗರು ಕಳವಳ ವ್ಯಕ್ತಪಡಿಸಿದ್ದು, ಶಾಲೆ-ಕಾಲೇಜುಗಳ ಆವರಣದಲ್ಲಿ ಕಡ್ಡಾಯವಾಗಿ ಸಂಪೂರ್ಣ ನಿಷೇಧ ಜಾರಿ ಮಾಡುವಂತೆ ಒತ್ತಾಯಿಸಿದ್ದಾರೆ.