ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಿನ್ನೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ (Maha Kumbhamela stampede) ಮೃತಪಟ್ಟಿದ್ದ ಬೆಳಗಾವಿ ಮೂಲದ ನಾಲ್ವರ ಮೃತದೇಹವನ್ನು ಏರ್ ಲಿಫ್ಟ್ ಮಾಡಲು ಸಿದ್ಧತೆ ನಡೆದಿದೆ.
ಪ್ರಯಾಗ್ ರಾಜ್ ನಿಂದ ಆಂಬುಲೆನ್ಸ್ ಮೂಲಕ ದಿಲ್ಲಿಗೆ ಮೃತದೇಹಗಳನ್ನು ತಂದು ಅಲ್ಲಿಂದ ಬೆಳಗಾವಿಗೆ ಏರ್ ಲಿಫ್ಟ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳಾದ ASP ಶೃತಿ ಹಾಗೂ KAS ಅಧಿಕಾರಿ ಹರ್ಷ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಬಹುತೇಕ ಇವತ್ತು ಸಂಜೆ ಮೃತದೇಹಗಳು ಬೆಳಗಾವಿ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಯಾತ್ರಿಕರು ಪ್ರಯಾಗರಾಜ್ ಕುಂಭಮೇಳಕ್ಕೆ ಹೋಗಿದ್ದರು. ಏಕಾಏಕಿ ಕೋಟ್ಯಾಂತರ ಭಕ್ತರು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.
ಬೆಳಗಾವಿಯ ನಾಲ್ವರ ಸಾವು
ಬೆಳಗಾವಿ (Belgaum) ಜಿಲ್ಲೆಯಿಂದ ಮಹಾಕುಂಭ ಮೇಳಕ್ಕೆ ತೆರಳಿದ್ದ ತಾಯಿ-ಮಗಳು ಸೇರಿ ನಾಲ್ವರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ.
ಬೆಳಗಾವಿ ನಗರದ ವಡಗಾವಿಯ ಜ್ಯೋತಿ ಹತ್ತರವಾಠ(50 ವರ್ಷ) ಹಾಗೂ ಅವರ ಪುತ್ರಿ ಮೇಘಾ ಹತ್ತರವಾಠ(25 ವರ್ಷ), ಶೆಟ್ಟಿಗಲ್ಲಿ ನಿವಾಸಿ ಅರುಣ ಕೋರ್ಪಡೆ (61 ವರ್ಷ) ಹಾಗೂ ಶಿವಾಜಿ ನಗರದ ಮಹಾದೇವಿ ಭವನೂರು (51 ವರ್ಷ) ಎಂಬುವವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದರು.
Mahakumbh stampede: महाकुंभ में हुई भगदड़ के बाद की तस्वीरें.#MahaKumbh2025 #Mahakumbh_100Million #mahakumbh2025prayagraj #MahakumbhCalling #kumbh2025 #KumbhaMela #mahakumbhstampede #STAMPEDE #inkharbar #BREAKING pic.twitter.com/FnrBfpAu5h
— InKhabar (@Inkhabar) January 29, 2025
13 ಜನರ ಜೊತೆ ಮಹಾ ಕುಂಭಮೇಳಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ ಕುಂಭಮೇಳದಲ್ಲಿ (Kumbhamela) ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು ವಾಪಸ್ಸು ತರಲು ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ