ದೊಡ್ಡಬಳ್ಳಾಪುರ (Doddaballapura): ಗೃಹ ಪ್ರವೇಶ ಮುಗಿಸಿ ಮಲಗಿದ್ದ ವೇಳೆ, ಅಡುಗೆ ಅನಿಲ ಸೋರಿಕೆಯಾದ (Gas leak) ಪರಿಣಾಮ ಬೆಂಕಿ ತಗುಲಿ 6 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಹೊರವಲಯದಲ್ಲಿರುವ ದರ್ಗಾಜೋಗಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ದರ್ಗಾಜೋಗಹಳ್ಳಿಯಲ್ಲಿ ರವಿಕುಮಾರ್ (Ravikumar) ಎನ್ನುವವರು ನೂತನವಾಗಿ ನಿರ್ಮಿಸಿರುವ ಮನೆ ಗೃಹ ಪ್ರವೇಶ ಶುಕ್ರವಾರ ಬೆಳಗ್ಗೆ ನಡೆದಿದೆ.
ಕಾರ್ಯಕ್ರಮದ ಬಳಿಕ ರಾತ್ರಿ ಮಲಗಿದ್ದ ವೇಳೆ ಅಡುಗೆ ಅನಿಲ ಸೋರಿಕೆಯಾಗಿದೆ. ಈ ವೇಳೆ ಬೆಂಕಿ ತಗುಲಿದ ಪರಿಣಾಮ 6 ಮಂದಿ ಗಾಯಗೊಂಡಿದ್ದಾರೆ.
ರವಿಕುಮಾರ್ (41 ವರ್ಷ), ಅನುಸೂಯಾ (37 ವರ್ಷ ), ಭಾಗ್ಯಮ್ಮ (55 ವರ್ಷ), ವರ್ಷಿತಾ (21 ವರ್ಷ), ಮಿಥುನ್ (14 ವರ್ಷ) ಚಿರಂತ್ (11 ವರ್ಷ) ಗಾಯಗೊಂಡವರು ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಸ್ಥಳೀಯರು 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಕೊಡಿಗೇಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.