ದೊಡ್ಡಬಳ್ಳಾಪುರ (Doddaballapura); ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್.ಮುನಿಯಪ್ಪ (KH Muniyappa) ಅವರು ತಾಲೂಕಿನ ತೂಬಗೆರೆಯ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ರಾಜ ಗೋಪುರ ಕುಂಭಾಭಿಷೇಕದಲ್ಲಿ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು.
ನಂತರ ದೇವಸ್ಥಾನದ ಬಳಿ ಕಲ್ಯಾಣ ಮಂಟಪದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.
ಒಂದು ಕೋಟಿ ರೂಗಳನ್ನು ಈ ಭಾಗದ ಗ್ರಾಮ ಪಂಚಾಯತಿಯ ಅಭಿವೃಧ್ದಿಗೆ ಮೀಸಲಿಡಲಾಗಿದ್ದು ಒಂದು ವಾರದಲ್ಲಿ ಶಾಲೆಯ ಅಭಿವೃದ್ಧಿ ಹಾಗೂ ಶಾಲೆಯ ಕಾಂಪೌಂಡ್, ಆಟದ ಮೈದಾನ, ಶೌಚಾಲಯ, ಸುಜ್ಜಿತ ಶಾಲಾ ಕೊಠಡಿಗಳ ಮೇಲ್ದರ್ಜೆಗೆ ಏರಿಸುವ ಹಾಗೂ ಇನ್ಪೋಸಿಸ್ ನವರ ನೇತೃತ್ವದಲ್ಲಿ ಚಾಲನೆಯಾಗಲಿದೆ.
ಮಕ್ಕಳ ಸಮಗ್ರ ಅಭಿವೃದ್ಧಿಗೆ ಈ ವ್ಯವಸ್ಥೆಯು ಸಹಕಾರಿಯಾಗಲಿದ್ದು ಉನ್ನತ ವಿದ್ಯಾಭ್ಯಾಸವನ್ನು ಮಾಡಲು ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ರವರ ನೇತೃತ್ವದಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗಾಲೇ ಈ ಭಾಗದ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಭಾಗಕ್ಕೆ ನೀರು ಬರಬೇಕಾಗಿತ್ತು. ಮುಂದಿನ ಒಂದು ವರ್ಷದಲ್ಲಿ ಈ ಭಾಗಕ್ಕೆ ನೀರು ಬಂದೇ ಬರುತ್ತದೆ.
ಈಗಾಗಲೇ ಡಿಕೆ ಶಿವಕುಮಾರ್ ರವರು ಸ್ಥಳ ಪರಿಶೀಲನೆ ನಡೆಸಿದ್ದು, ಸುಮಾರು 24 ಟಿಎಂಸಿ ನೀರಿದ್ದು ಕುಡಿಯುವ ನೀರು ಬಳಸಿದ್ದಲಿ 16 ಟಿಎಂಸಿ ಯಷ್ಟು ನೀರು ಕೋಲಾರದ ಭಾಗದ ವರೆಗೂ ಒಂದು ವರ್ಷದಲ್ಲಿ ಬಂದೇ ಬರುತ್ತದೆ ಎಂದರು.
ವೃಷಭಾವತಿ ಯೋಜನೆ
ಕೆರೆಗಳಲ್ಲಿ ಹೂಳೆತ್ತುವ ಕೆಲಸವೂ ಚಾಲನೆಯಾಗಿದ್ದು, ವೃಷಭಾವತಿ ಯೋಜನೆಯ ಮೂಲಕ ಸಣ್ಣ ನೀರಾವರಿ ಮೂಲಕ ದೊಡ್ಡಬಳ್ಳಾಪುರ , ದೇವನಹಳ್ಳಿ, ಹೊಸಕೋಟೆಗೆ ಮೊದಲನೇ ಹಂತದಲ್ಲಿ ನೀರನ್ನು ತುಂಬಿಸಳಾಗುತಿದ್ದು, ಎರಡನೇ ಹಂತದಲ್ಲಿ ಉಳಿದ ಪ್ರದೇಶಗಳಿಗೆ ನೀರನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ.
ಈ ಯೋಜನೆಯ ಮೂಲಕ ರೈತರಿಗೆ ಕೃಷಿಗೆ ಅನುಕೂಲಕರವಾಗಲಿದೆ. ನಮ್ಮ ಭಾಗದಲ್ಲಿ ಸಾವಿರ ಅಡಿ ಹೋದರು ನೀರು ಸಿಗುತ್ತಿಲ್ಲ. ಆದ ಕಾರಣ ಎತ್ತಿನಹೊಳೆ, ವೃಷಭಾವತಿ, ಹೆಚ್ ಎನ್ ವ್ಯಾಲಿ, ಮೂಲಕ ನೀರನ್ನು ತುಂಬಿಸಿ ರೈತನ ಬದಕು ಅಸನಾಗಿಸಲು ಸಹಕಾರಿಯಾಗಲಿದೆ ಎಂದರು.
ನೀವೇಶನ ರಹಿತರು ಸುಮಾರು 4500 ಸಾವಿರ ಜನರು ಅರ್ಜಿಗಳನ್ನು ಸಲ್ಲಿಸಿದ್ದು, ಅವರಿಗೆ ಸರ್ಕಾರಿ ಜಮೀನನ್ನು ಗುರುತಿಸಿದ್ದು ಅವರಿಗೆ ಎರಡು ತಿಂಗಳಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ನಮ್ಮ ಸರ್ಕಾರ ರೈತರ, ಬಡವರ ಪರವಾಗಿದ್ದು, ಎಲ್ಲಾ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ನಿವೇಶನಗಳನ್ನು ಹಂಚುವುದು ಹಾಗೂ ಸ್ಮಶಾನಗಳಿಗೆ ದಾರಿ, ರೈತರ ಜಮೀನಿಗಳಿಗೆ ಸರಿಯಾದ ರೀತಿಯಲ್ಲಿ ದಾರಿಗಳನ್ನು ಮಾಡುವುದು ನಮ್ಮ ಧ್ಯೇಯವಾಗಿದೆ.
ನಾನು ಕೇಂದ್ರದಲ್ಲಿ ಕೆಲಸ ಮಾಡಿರುವ ಅನುಭವವಿದ್ದು, ಅಲ್ಲಿನ ಕಂಪನಿಗಳ ನೆರವಿನಿಂದ ಕೋಲಾರದಲ್ಲಿ ಸುಮಾರು ಒಂದು ಲಕ್ಷ ಕುಟುಂಬಗಳು ನೆಮ್ಮದಿಯ ಜೀವನ ಮಾಡಲು ಸಹಕಾರಿಯಾಗಿದೆ.
ಈ ಭಾಗದಲ್ಲಿಯೂ ನಾನು ಮಾಡುವ ಕೆಲಸಗಳು ಶಾಶ್ವತವಾಗಿರಬೇಕು,
ನಾನು ಸಂಸತ್ತಿನ ಸದಸ್ಯನಾಗಿ, ಸಚಿವನಾಗಿ ಕೆಲಸ ಮಾಡಿದ್ದು, ಈ ಕ್ಷೇತ್ರಕ್ಕೆ ಹೈಕಮಾಂಡ್ ಅಭ್ಯರ್ಥಿಯಾಗಿ ಕಳುಹಿಸಿದ್ದು, ಇಲ್ಲಿಯೂ ನಾನು ಗುರುತರವಾದ ಕೆಲಸವನ್ನು ಮಾಡುವ ಸಂಕಲ್ಪ ಹೊಂದಿದ್ದೇನೆ.
ಚೆನ್ನಹಳ್ಳಿ ನನ್ನ ತಾಯಿಯ ತವರು ಮನೆ ದೇವನಹಳ್ಳಿ ಕ್ಷೇತ್ರಕ್ಕೂ ನನಗೆ ಅವಿನಾಭಾವ ಸಂಬಂಧವಿದೆ. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಮರ್ಪಕವಾಗಿ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜಣ್ಣ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಮುಖಂಡ ಮುನಿರಾಜು, ಘಾಟಿ ಸುಬ್ರಮಣ್ಯ ದೇವಸ್ಥಾನ ಪ್ರಾಧಿಕಾರದ ಅಧ್ಯಕ್ಷ ರಂಗಪ್ಪ, ರವಿ ಸಿದ್ದಪ್ಪ, ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.