ಬೆಂಗಳೂರು; ಹೈಕೋರ್ಟ್ ಆದೇಶದ ಅನ್ವಯ ಬೆಂಗಳೂರು ಹಾಲು ಒಕ್ಕೂಟಕ್ಕೆ (Bamul) ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಬೆಂಗಳೂರು. ಈ ಒಕ್ಕೂಟದ ಆಡಳಿತ ಮಂಡಳಿಯ ಅವಧಿಯು ಮೇ.11.2024 ರಂದು ಮುಕ್ತಾಯಗೊಂಡಿದೆ.
ಅವಧಿಯಲ್ಲಿ ನಿಯಮಾನುಸಾರ ಹೊಸ ಆಡಳಿತ ಮಂಡಳಿ ರಚಿಸದ ಕಾರಣ ನ್ಯಾಯಾಲಯವು ರಿಟ್ ಅರ್ಜಿ ಆದೇಶದಲ್ಲಿ ನಿರ್ದೇಶಿಸಿರುವಂತೆ ಒಕ್ಕೂಟದ ಆಡಳಿತ ಮಂಡಳಿ ಸ್ಥಾನದಲ್ಲಿ ಬಿ.ಆರ್.ಲಿಂಗರಾಜು ಅವರನ್ನು 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.
ಅಡಳಿತಾಧಿಕಾರಿಗಳು ಕೂಡಲೇ ಒಕ್ಕೂಟದ ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡು, ನಿಯಮಾನುಸಾರ ಕೂಡಲೇ ಒಕ್ಕೂಟದ ಅಡಳಿತ ಮಂಡಳಿಗೆ ಚುನಾವಣೆ ನಡೆಸಿ. ಅಧಿಕಾರವನ್ನು ಚುನಾಯಿತ ಆಡಳಿತ ಮಂಡಳಿಗೆ ಹಸ್ತಾಂತರಿಸಿ ವರದಿ ಸಲ್ಲಿಸುವಂತೆ ಸಹಕಾರ ಸಂಘಗಳ ನಿಬಂಧಕ ಟಿ.ಹೆಚ್.ಎಂ. ಕುಮಾರ್ ಆದೇಶಿಸಿದ್ದಾರೆ.