ಬೆಳಗಾವಿ: ಗೃಹಲಕ್ಷ್ಮಿ (Gruhalakshmi) ಯೋಜನೆಯ ದುಡ್ಡು ಮೂರ್ನಾಲ್ಕು ತಿಂಗಳುಗಳಿಂದ ಬಂದಿಲ್ಲವೆಂದು ರಾಜ್ಯದಾದ್ಯಂತ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಪಘಾತದ ಕಾರಣ ಚಿಕಿತ್ಸೆ ನಂತರ ವಿಶ್ರಾಂತಿ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (lakshmi hebbalkar gruhalakshmi) ಅವರು ಇಂದು ಖಾಸಗಿ ಸುದ್ದಿವಾಹಿನಿಗೆ ಗೃಹಲಕ್ಷ್ಮೀ ಯೋಜನೆ ವಿಳಂಬದ ಕುರಿತು ಮಾತಾಡಿದ್ದಾರೆ.
ತಾನು ಕಾರು ಅಪಘಾತದಿಂದಾಗಿ ಒಂದು ತಿಂಗಳಿಗೂ ಹೆಚ್ಚು ಅವಧಿ ಆಸ್ಪತ್ರೆ ಮತ್ತು ಮನೆಯಲ್ಲೇ ಉಳಿಯುವಂತಾಗಿದ್ದರಿಂದ ಹಣ ವರ್ಗಾವಣೆ ವಿಳಂಬವಾಗಿರುವುದಕ್ಕೆ ಒಂದು ಕಾರಣವಾಗಿದೆ.
ನಾನು ಕಚೇರಿಯಲ್ಲಿದಿದ್ದರೆ ಹಣಕಾಸು ಇಲಾಖೆ ಮೇಲೆ ನಿರಂತರವಾಗಿ ಒತ್ತಡ ಹಾಕಿ ಹಣ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಿದ್ದೆ, ಆದರಿಂದ ಹಣ ಹಾಕವಲ್ಲಿ ವಿಳಂಭವಾಗಿದೆ.
ಇಷ್ಟು ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಬಿಡುಗಡೆ ಮಾಡಲಾಗುತ್ತಿತ್ತು.. ಈಗಲೂ ಕೂಡ ಬೆಂಗಳೂರು ಸಮೀಪವಿರುವ ನಾಲ್ಕು ತಾಲೂಕು ಪಂಚಾಯಿತಿಗೆ ಹಣವನ್ನು ಹಾಕಿ, ಅಲ್ಲಿಂದ ಸಿಡಿಪಿಒ ಮೂಲಕ ಹಣ ಬಿಡುಗಡೆ ಮಾಡುತ್ತಿರುವುದರಿಂದ ಹೆಚ್ಚು ಕಡಿಮೆ ಆಗಿದೆ. ಆದರೆ ಈಗ ಎಲ್ಲ ಸರಳಗೊಳಿಸಲಾಗಿದೆ. ಒಂದು ವಾರ ಹತ್ತು ದಿನಗಳಲ್ಲಿ ದುಡ್ಡು ಮಹಿಳೆಯರಿಗೆ ತಲುಪಲಿದೆ.
ಹಣಕಾಸು ಇಲಾಖೆ ಈಗ ಎರಡು ತಿಂಗಳಿನ ಹಣವನ್ನು ಹಾಕಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಹೋಗುತ್ತಿರುವೆ, ಎಲ್ಲಾ ಡೈರೆಕ್ಟ್ ಆಗಿ ಗೃಹಲಕ್ಷ್ಮೀಯರಿಗೆ ಹಣವನ್ನು ಹಾಕಿಸುತ್ತೇನೆ.
ಆಕ್ಸಿಡೆಂಟ್ ಕಾರಣ ವಿಳಂಭ ಆಗಿದೆ. ಗೃಹಲಕ್ಷ್ಮಿಯರು ಆತಂಕಪಡುವ ಅಗತ್ಯವಿಲ್ಲ, ನಿಮ್ಮ ಕಾಳಜಿ ನಮಗಿದೆ. ಸರ್ಕಾರ ವಾಗ್ಸಾನ ಮಾಡಿದೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೀಡಿರುವ ಭಾಷೆಯನ್ನು ಈಡೇರಿಸಲು ನಾನು ಜೊತೆ ಸೇರಿ ಎಂಟ್ಹತ್ತು ದಿನಗಳಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಿಸುವುದಾಗಿ ಹೇಳಿದರು.