ದೊಡ್ಡಬಳ್ಳಾಪುರ; ಪ್ರತಿಷ್ಠಿತ ಶಾಲೆಗಳಾದ ನಳಂದ ಪ್ರೌಢಶಾಲೆ (Nalanda High school) ಹಾಗೂ ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ (Little Angels Anantha School) ಇಂದು ಸ್ಕೌಟ್ಸ್ ಮತ್ತು ಗೈಡ್ಸ್ ನ. (Scouts and Guides) ಸಂಸ್ಥಾಪನ ದಿನವನ್ನು ಆಚರಿಸಲಾಯಿತು.

ಈ ವರ್ಷದ ಥೀಮ್ “ಸ್ಕೌಟ್ಸ್ ಫಾರ್ ಎ ಬೆಟರ್ ವರ್ಲ್ಡ್” ನ ಅನುಸಾರ ಯುಕೆಜಿ ವಿದ್ಯಾರ್ಥಿಗಳನ್ನು ಕಬ್ಸ್ ಮತ್ತು ಬುಲ್ ಬುಲ್ಸ್ ಹಾಗೂ ಐದನೇ ತರಗತಿಯ ವಿದ್ಯಾರ್ಥಿಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಗೆ Investiture ceremony ಮೂಲಕ ಬರಮಾಡಿಕೊಳ್ಳಲಾಯಿತು.
ಗೈಡ್ಸ್ ಕ್ಯಾಪ್ಟನ್ ಸುನಿತಾ ಪಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಫೆಬ್ರವರಿ 22 ಸ್ಕೌಟ್ಸ್ ಸಂಸ್ಥಾಪಕರಾದ ಲಾರ್ಡ್ ರಾಬರ್ಟ್ ಬೆಡನ್ ಪಾವಲ್ ಅವರ ಜನ್ಮದಿನವಾಗಿದ್ದು, ಇಡೀ ಜೀವನವನ್ನು ಸ್ಕೌಟ್ ಚಳುವಳಿಗಾಗಿ ಮೀಸಲಿಟ್ಟಿದ್ದರು.

ಆದುದರಿಂದ ಅವರ ಜನ್ಮದಿನದ ನೆನಪಿನಲ್ಲಿ ಪ್ರಪಂಚದ ಸುಮಾರು 176 ದೇಶಗಳಲ್ಲಿ ಇರುವ ಸ್ಕೌಟ್ಸ್ ಸಂಸ್ಥೆಗಳು ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಈ ದಿನ ಹಮ್ಮಿಕೊಂಡಿದ್ದು ಸುಮಾರು ಆರು ಕೋಟಿ ಜನರು ಭಾಗವಹಿಸುತ್ತಿದ್ದಾರೆ.
ಈ ದಿನದ ಥೀಮ್ ನ ಅನುಸಾರ ಇನ್ವೆಸ್ಟಿಚುರ್ ಸೆರಮನಿ, ಟ್ರಾಫಿಕ್ ಸಿಗ್ನಲ್, ಸರ್ವಿಸ್ ಟು ದ ಸೊಸೈಟಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಕೆ.ಪಿ., ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.