ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಟೈಮ್ ಸರಿ ಇದ್ದಂತಿಲ್ಲ. ಏಕೆಂದರೆ ದೆಹಲಿಯಲ್ಲಿ ವಾಸಿಸುವ ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಕಳೆದ ತಿಂಗಳಿನಿಂದ ಕೊರೋನಾ ಮಾದರಿಯ ವೈರಲ್ ಜ್ವರ (Covid-like viral fever) ಬಳಲುತ್ತಿದ್ದಾರೆ.
ಇದರ ಪರಿಣಾಮ ಅನಾರೋಗ್ಯದ ಲಕ್ಷಣಗಳನ್ನು ಹೊಂದಿದ್ದು ಸೀಸನ್ ಬದಲಾವಣೆಯ ಕಾರಣ ಜ್ವರ ಮತ್ತು ವೈರಲ್ ಜ್ವರ ಪ್ರಕರಣಗಳಲ್ಲಿ ಇದ್ದಕ್ಕಿದ್ದಂತೆ ಉಲ್ಬಣವಾಗಿದೆ.
ಈ ರೀತಿ ಕನಿಷ್ಠ 54% ಕುಟುಂಬಗಳು ಜ್ವರ, ಕೆಮ್ಮು ತಲೆ ನೋವು ಮತ್ತು ಉಸಿರಾಟದ ಸಮಸ್ಯೆಗಳಂತಹ ರೋಗಲಕ್ಷಣಗಳಿಂದ ಬಳಲುತ್ತಿರುವ ಒಂದು ಅಥವಾ ಹೆಚ್ಚಿನ ಸದಸ್ಯರಿದ್ದಾರೆ ಎಂದು ವರದಿಯಾಗಿದೆ.
ವಯಸ್ಸಾದ ವ್ಯಕ್ತಿಗಳು (50 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು ಚಿಕ್ಕ ಮಕ್ಕಳು ಈ ಸೋಂಕುಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ಈ ಸಮೀಕ್ಷೆ ಸೂಚಿಸುತ್ತದೆ.
ಅಧಿಕ ರಕ್ತದೊತ್ತಡ, ಮಧುಮೇಹ, ಆಸ್ತಮಾ, COPD ಮತ್ತು ಹೃದ್ರೋಗದಂತಹ ಸಮಸ್ಯೆ ಇರುವ ಜನರು ಸಹ ಹೆಚ್ಚಿನ ಅಪಾಯದಲ್ಲಿದ್ದಾರೆ ಎನ್ನಲಾಗಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						