ದೊಡ್ಡಬಳ್ಳಾಪುರ (Doddaballapura): ಅನಾರೋಗ್ಯದ ಕಾರಣ ಕೋತಿಯೊಂದು ಸಾವನಪ್ಪಿರುವ ಘಟನೆ ತಾಲೂಕಿನ ಆರೂಢಿ ಗ್ರಾಮದ ಬಳಿ ನಡೆದಿದೆ.
ಆರೂಢಿ ಗ್ರಾಮದ ಬ್ಯಾಂಕ್ ಮುಂಭಾಗದಲ್ಲಿನ ಅರಳಿ ಮರದ ಕೆಳಗೆ ಕೋತಿ ಸಾವನಪ್ಪಿದೆ.
ಆದರೆ ಸಾಯುವ ಮುನ್ನ ಈ ಕೋತಿಯು ಮರದ ಬುಡದ ಬಳಿ ಇಟ್ಟಿರುವ ಆಂಜನೇಯ ಸ್ವಾಮಿ ಪೋಟೋ ಬಳಿಯೇ ಬಂದು ಸಾವನಪ್ಪಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಹಿಂದೂ ಧರ್ಮದಲ್ಲಿ ಕೋತಿಯನ್ನು ಅಥವಾ ಮಂಗನನ್ನು ಆಂಜನೇಯ ಸ್ವಾಮಿಯ ರೂಪವೆಂದು ಪೂಜಿಸಲಾಗುತ್ತದೆ.
ಮಂಗಗಳಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಕನಸಿನಲ್ಲಿ ಮಂಗನನ್ನು ನೋಡಿದರೆ ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಇನ್ನೂ ಮೃತಪಟ್ಟ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಲು ಸ್ಥಳೀಯ ಯುವಕರು ಮುಂದಾಗಿದ್ದಾರೆ.