Ceasefire: Santosh Lad appeals to BJP youth..!

ಉಗ್ರರ ದಾಳಿ.. ಮಾಧ್ಯಮಗಳು ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯಗಳನ್ನು ಮುಚ್ಚಿ ಹಾಕುತ್ತಿವೆ: ಸಂತೋಷ್ ಲಾಡ್ ವಾಗ್ದಾಳಿ

ಬೆಂಗಳೂರು: ಉಗ್ರರದ ದಾಳಿಯಲ್ಲಿ (Terrorist attack) ಕೇಂದ್ರ ಸರ್ಕಾರ ತನ್ನ ಭದ್ರತಾ ಲೋಪವನ್ನು ಮುಚ್ಚಿಹಾಕಲು ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಕಪೋಕಲ್ಪಿತ ವರದಿ ಮಾಡಿಸುತ್ತಿದೆ ಎಂದು ಸಚಿವ ಸಂತೋಷ್ ಲಾಡ್ (Santosh lad) ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರರ ದಾಳಿ ಬಳಿಕ ಸ್ಥಳಕ್ಕೆ ಭದ್ರತಾ ಪಡೆ ತಲುಪಲು ಎರಡು ಗಂಟೆಯ ಅವಧಿಯ ತಗೆದುಕೊಂಡಿದೆ. ಅಲ್ಲಿಯೇ ಏರ್ಪೋರ್ಸ್ ಇದೆ. ಅಲ್ಲಿಯೇ ಭದ್ರತಾ ಪಡೆಗಳಿಗೆ ಮತ್ಯಾಗ್ಯೂ ಎರಡು ಗಂಟೆ ವಿಳಂಬ ಆಗಿದ್ದು ಏಕೆ..? ಇದನ್ನು ಯಾಕ್ ಚರ್ಚೆ ಆಗಲ್ಲ..? ಯಾರ್ ಮಾಡಬೇಕು ಎಂದು ಪ್ರಶ್ನಿಸಿದರು.

ಉಗ್ರರ ದಾಳಿ ವೇಳೆ ಆಗಿರುವ ಬಹುದೊಡ್ಡ ಭದ್ರತಾ ಲೋಪವನ್ನು ಮುಚ್ಚಿ ಹಾಕಲು ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಪ್ರಕರಣದಿಂದ ಮುಜುಗರ ತಪ್ಪಿಸಲು ಅಜೆಂಡಾ ಸೃಷ್ಟಿದ್ದಾರೆ.

ಅಲ್ರೀ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸಲು ಸಾಧ್ಯ ಇದೆಯಾ‌‌‌‌! ಯಾರೂ ಸನರ್ಪಕ ಚರ್ಚೆ ಮಾಡ್ತಾ ಇಲ..?, ಈ ಒಪ್ಪಂದದಗಳು ಅಂತಾರಾಷ್ಟ್ರೀಯ ಒಪ್ಪಂದಗಳಾಗಿರುತ್ತವೆ ಅಲ್ವಾ.. ಸರ್ಕಾರ ನಿರ್ಣಯ ಆಗುವ ಮುಂಚೆಯೇ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತೆ‌‌..? ಸರ್ಕಾರದ ನಿರ್ಣಯ ಏನು ಅನ್ನೋದು ಜನಕ್ಕೆ ಗೊತ್ತಾಗಲ್ಲ‌‌. ಇದೆಲ್ಲಾ ಮೀಡಿಯಾಗಳ ಸ್ಕೀಂ.

ಉಗ್ರರ ದಾಳಿಯ ಲೋಪವನ್ನು ಮುಚ್ಚಿಹಾಕಲು, ಜನರನ್ನು ದಾರಿ ತಪ್ಪಿಸಲು ಕೇಂದ್ರ ಸರ್ಕಾತ ಮಾಧ್ಯಮಗಳಿಗೆ ಈ ರೀತಿ ಸರಕನ್ನು ನೀಡಿ ಬಳಕೆ ಮಾಡಿಕೊಳ್ಳಲಾಗುತ್ತಿದೆ‌. ಈಗ ಇಂತಹ ಪ್ರೀಸೆಟ್ ನ್ಯೂಸೆನ್ಸ್ ಗಳಿಂದಲೇ ದೇಶ ನಡೆತಯುತ್ತಿದೆ. ಇದು ದೇಶದ ದುರಂತ ಎಂದರು.

ಬಿಜಿಪಿಗರ ಪ್ರತಿಭಟನೆ ಯಾರ ವಿರುದ್ಧ

ಮೊನ್ನೆ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡ್ತಾರೆ. ಮತ್ತೆ ಇವರದ್ದೇ ಸರ್ಕಾರ ಅಧಿಕಾರದಲ್ಲಿದೆ‌‌. ಇವರಿಂದಲೇ ಭದ್ರತಾ ಲೋಪ ಆಗಿರೋದು, ಇವರದ್ದೇ ಪ್ರಧಾನ ಮಂತ್ರಿ, ಇವರೇ 370 ಮಾಡಿದ್ದು, ಸೈನ್ಯ ಇವರದ್ದೇ ನಿಯಂತ್ರಣದಲ್ಲಿದೆ. 20 ರಾಜ್ಯಗಳಲ್ಲಿ ಇವರೇ ಅಧಿಕಾರದಲ್ಲಿದ್ದಾರೆ.

ನೀವೆ 11 ವರ್ಷ ಆಳ್ವಿಕೆ ಮಾಡಿದ್ದೀರಿ, ಎಲ್ಲಾದಕ್ಕೂ ನೀವೆ ಬಂದ್ ಉತ್ತರ ಕೊಡ್ತೀರಿ, ಬುಲ್ಡೋಜರ್ ತಗೊಂಡ್ ಹೋಗಿ ನೀವೆ ಬಿಲ್ಡಿಂಗ್ ಹೊಡಿತೀರಿ, ಎಲ್ಲಾ ನೀವೆ ಮಾಡ್ತೀರಿ, ಮತ್ ಇವರೇ ಹೇಳ್ತಾರೆ ಹಿಂದೂಗಳಿಗೆ ಸುರಕ್ಷತೆ ಇಲ್ಲ ಅಂತೀರಿ.

11 ವರ್ಷ ಅಧಿಕಾರದಲ್ಲಿ ಇದ್ದರೂ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದರೆ ರಾಜೀನಾಮೆ ಯಾರ್ ಕೊಡಬೇಕು..? ಅದಲ್ವಾ ಪ್ರಶ್ನೆ‌. ನಾ ಅವರನ್ನು ರಾಜೀನಾಮೆ ಕೇಳುವಷ್ಟು ಬೆಳೆದಿಲ್ಲ‌. ಆದರೆ ಪ್ರಧಾನ ಮಂತ್ರಿ ಅವರು ಜಮ್ಮುಕಾಶ್ಮೀರಕ್ಕೆ ತೆರಳಿ ಸುದ್ದಿಗೋಷ್ಠಿ ನಡೆಸದೇ, ಬಿಹಾರ ಚುನಾವಣೆಗೆ ಹೋಗ್ತಾರೆ ದೇಶದ ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು.

ಕೆಲ ಮಾಧ್ಯಮಗಳು ಸರ್ಕಾರ ಉತ್ತರ ನೀಡುವ ಮುನ್ನವೇ ಮೋದಿ ಬಂದ್ ಬಿಟ್ರು, ನುಗ್ ಬಿಟ್ರು, ಹೊಡೆದು ಬಿಟ್ಟರು, ಫೈಟರ್ ಜೆಟ್ ಹೊರಟು ಬಿಡ್ತು, ಏರ್ ಸ್ಟ್ರೈಕ್ ಮಾಡಿಬಿಟ್ರು ಅನ್ನೋದು, ಯಾವುದೋ ಕೆರೆ ನೀರು ತೋರಿಸೋದು‌ ಏನ್ ನಡಿತಾ ಇದೆ.. ಅಂದರೆ ಪಾಕಿಸ್ತಾನದ ಜನ ನೀರು ಕುಡಿತಾ ಇಲ್ವಾ..?

ಈಗ ಹುಡುಕಿ ಹುಡುಕಿ ಮನೆಯನ್ನು ಕೆಡುವುತ್ತಿದ್ದಾರೆ. ಮತ್ತೆ ಮೊದಲೇ ಮಾಹಿತಿ ಇತ್ತಾ.‌? ಅವಾಗ ಯಾಕ್ ಹೊಡಿಲಿಲ್ಲ.. ಅಥವಾ ಮಾಹಿತಿ ಇರಲಿಲ್ವಾ.. ದ್ವಂಸ ನಾಶ, ದ್ವಂಸ ನಾಶ ಇದೇ ಆಯ್ತು..

ಪುಲ್ವಾಮ ದಾಳಿ ಬಳಿಕ ಫಲಿತಾಂಶ ಏನಾಯ್ತು..? ಕ್ರಮ ಏನಾಯ್ತು..? ನಂತರ ಚುನಾವಣೆ ಗೆದ್ದರು, ಈಗ ಬಿಹಾರ ಚುನಾವಣೆ ಇದೆ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆಯೇ ಹೊರತು ಹಿಂದೂಗಳಿಗೆ ರಕ್ಷಣೆ ಮಾತ್ರ ಮಾಡುತ್ತಿಲ್ಲ.

ಹಿಂದೂ ಪದ ಬಳಕೆ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರದಿಂದ ಬಡ ಹಿಂದೂಗಳಿಗೆ ಯಾವ ಉಪಕಾರವಾಗಿದೆ. ರೈಲ್ವೇ ಟಿಕೆಟ್ ಬೆಲೆ ಏರಿಕೆ ಮಾಡಿ ಇದೇ ಹಿಂದೂಗಳ ಜೀವ ಹಿಂಡುತ್ತಿದೆ ಇದರ ಬಗ್ಗೆ ಯಾಕ್ ಯಾರು ಚರ್ಚೆ ಮಾಡಲ್ಲ..? ಕರೋನಾದಲ್ಲಿ ಜೀವ ಕಳೆದುಕೊಂಡ ಎಷ್ಟು ಜನರಿಗೆ ಪರಿಹಾರ ನೀಡಿದ್ದಾರೆ ಯಾಕೆ ಮಾತೇ ಆಡ್ತಾ ಇಲ್ಲ ಎಂದರು.

ರಾಷ್ಟ್ರೀಯ ಮಾಧ್ಯಮಗಳು ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷಗಳಿಗೆ ಅವಕಾಶ ನೀಡುತ್ತಿಲ್ಲ‌‌ ಎಂದು ಕಿಡಿಕಾರಿದರು.

ರಾಷ್ಟ್ರೀಯ ಮಾಧ್ಯಮಗಳು ಘಟನೆ ಬಳಿಕ ಲೋಪವನ್ನು ಪ್ರಶ್ನೆ ಮಾಡಿ ರಕ್ಷಣೆಯ ಕೂಗು ಎತ್ತದೆ, ಮೋದಿ ಬಂದ್ ಬಿಟ್ರು, ನುಗ್ ಬಿಟ್ರು, ಹೊಡೆದು ಬಿಟ್ಟರು ಎಂದು ಕೇಂದ್ರ ಸರ್ಕಾರ ಯಾವ ನಿರ್ಣಯ ಕೈಗೊಳ್ಳದಿದ್ದರು ಜನರನ್ನು ಮರಳು ಮಾಡುವ ಅಜೆಂಡಾ ಸೃಷ್ಟಿ ಮಾಡಿ ಬಿಟ್ಟಿದ್ದಾರೆ. ಇದೆಲ್ಲ ಆದ ಮೇಲೆ ಎರಡು ದಿನಗಳ ಬಳಿಕ ಲೋಪ ಆಗಿದೆ ಎಂದರು ಜನ ಎಲ್ ಒಪ್ಪುತ್ತಾರೆ.

ಬಿಹಾರ ಚುನಾವಣೆಯಲ್ಲಿ ಹಿಂದೂ ಮುಸ್ಲಿ ಬಿಟ್ಟರೆ ಪ್ರಧಾನಿ ಅವರು ನಾ ಇಂತ ಕೆಲಸ ಮಾಡಿದ್ದೇನೆ ಮತ ನೀಡಿ ಎಂದು ಎಲ್ಲಾದರೂ ಕೇಳ್ತಾರೆಯೇ..? ಬಿಹಾರದಲ್ಲಿನ ಮಾಧ್ಯಮಗಳಲ್ಲಿ ಪ್ರಸಾರ ಆಗ್ತಾ ಇರುವ ವರದಿ ನೋಡಿ ಗೊತ್ತಾಗುತ್ತೆ ಎಂದರು.

ಈ ದೇಶ ಕೇವಲ ಬಿಜೆಪಿ, ಕಾಂಗ್ರೆಸ್ ಮಾತ್ರ ನಮ್ಮೆಲ್ಲರದ್ದಾಗಿದೆ, ಜನರದಲ್ಲಿ ವಾಸ್ತವ ಏನೆಂದು ಅರಿತುಕೊಳ್ಳಬೇಕಿದೆ. 21ಕೋಟಿ ಮೌಲ್ಯದ ಮಾಧಕ ವಸ್ತುಗಳನ್ನು ಎನ್ಐಎ ವಶ ಪಡಸಿಕೊಂಡಿದೆ. ಅದಕ್ಕೂ ಈ ಉಗ್ರರ ದಾಳಿಗೂ ಲಿಂಕ್ ಇದೆ ಇದರ ಬಗ್ಗೆ ಯಾಕ್ ಯಾರು ಚರ್ಚೆ ನಡೆಸುತ್ತಿಲ್ಲ. ಈ ಕುರಿತು ಪ್ರಶ್ನೆ ಮಾಡಿದರೆ ದೇಶ ದ್ರೋಹಿ, ಹಿಂದೂ ವಿರೋಧಿ ಪಟ್ಟಕಟ್ಟುತ್ತಾರೆ, ಏನ್ ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿ ಇರ್ತಾರ.

ಪ್ರಧಾನ ಮಂತ್ರಿ ಮೋದಿ ಅವರು ಏಕೆ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಪ್ರಶ್ನೆ ಕೇಳಲು ಸಿದ್ದರಿಲ್ಲ. ಅದೇ ಮನ್‌ಕಿ ಬಾತ್ ನಲ್ಲಿ ಗಂಟೆ ಗಟ್ಟಲೆ ಮಾತಾಡ್ತಾರೆ ಹೇಗೆ ಇದನ್ನು ಬಿಜೆಪಿ ನಾಯಕರ ಪ್ರಶ್ನೆ ಮಾಡಿ.

ಓರ್ವ ಹೆಣ್ಣು ಮಗಳು ಹೇಳಿದ್ ನಿಜ ಇರಬಹುದು ಹಿಂದೂನ ಎಂದು ಹತ್ಯೆ ನಡೆಸಿರುವ ನೀಚ ಕೃತ್ಯ. ಆದರೆ ಅದೇ ಹೆಣ್ಣು ಮಗಳು ಸ್ಥಳೀಯ ಮುಸ್ಲಿಂ ನೆರವು ನೀಡಿ ನನ್ನ ಹಾಗೂ ನನ್ನ ಮಗನ ಕಾಪಾಡಿ ಕರೆತಂದರು ಎಂದಿದ್ದಾರೆ. ಮತ್ಯಾಕೆ ಮೊದಲ ಸಾಲನ್ನು ಹಿಡಿದುಕೊಂಡು ಹಿಂದೂ ಮುಸ್ಲಿಂ, ಹಿಂದೂ ಮುಸ್ಲಿಂ ಎಂದು ಬಣ್ಣ ಬಳೆಯೋರು ಸ್ಥಳೀಯ ಮುಸ್ಲಿಂ ಕಾಪಾಡಿದ್ದರ ಬಗ್ಗೆ ಯಾಕ್ ಬಾಯೇ ಬಿಡ್ತಾ ಇಲ್ಲ.

ನಾಚಿಕೆ ಆಗಬೇಕು ಬಿಜೆಪಿ ನಾಯಕರಿಗೆ ಎರಡು ಗಂಟೆ ಬೇಕಾಯ್ತು ಭದ್ರಾಪಡೆಗಳು ಸ್ಥಳಕ್ಕೆ ಭೇಟಿ ನೀಡಲು ಯಾಕೆ‌‌.. ಕಾರಣ ಬೇಕಲ್ವಾ..? ಉತ್ತರ ಬೇಕಲ್ವಾ..? ತಪ್ಪನ್ನು ಮುಚ್ಚುಕೊಳ್ಳಲು ಎಷ್ಟು ಬೇಕೋ ಅಷ್ಟೂ ಸ್ಟುಡಿಯೋಗಳಲ್ಲಿ ಇವರದ್ದೇ ಅಜೆಂಡಾ ಸೃಷ್ಟಿ ಮಾಡುತ್ತಿದ್ದಾರೆ.

ಮಾಂಗಲ್ಯ ತಗೆಸಿದರೆ ಹಿಂದುತ್ವವಾದಿಗಳು ಪ್ರಶ್ನೆ ಮಾಡಲ್ವ..?

ಪರೀಕ್ಷೆ ಸಮಯದಲ್ಲಿ ಜನಿವಾರ ತಗೆದಿದ್ದಾರೆ ಎಂದು ದೇಶದ ಯುವಕರು ದೊಡ್ಡ ಮಟ್ಟದ ಚರ್ಚೆ ಮಾಡಿ, ಪ್ರತಿಭಟನೆ ಮಾಡುದ್ರು. ಆದರೆ ಮಾಂಗಲ್ಯ ಸರ ತಗೆಸಲು ಕೇಂದ್ರ ಸರ್ಕಾರದ ರೈಲ್ವೇ ಪರೀಕ್ಷೆ ಆದೇಶದ ಕುರಿತು ಮಾತೇ ಆಡುತ್ತಿಲ್ಲ..? ಈಗ ಹಿಂದೂ ವಾದಿಗಳು ಕೇಂದ್ರ ಸರ್ಕಾರದ ವಿರುದ್ಧ ಯಾಕ್ ಪ್ರಶ್ನೆ ಮಾಡ್ತಾ ಇಲ್ಲ‌‌..?

ಹಿಂದುತ್ವ ಅಂದರೇನು.. ಎಂಬ ಕುರಿತು ದೊಡ್ಡ ಚರ್ಚೆ ಆಗಬೇಕು.. ನಾನೊಬ್ಬ ಹೆಮ್ಮೆಯ ಹಿಂದೂ, ಮತ್ತೆ ಅಂದೂ ದನಿ ಎತ್ತಿದ ಹಿಂದುತ್ವ ವಾದಿಗಳು ಹೋರಾಟ ಯಾಕ್ ಮಾಡಲ್ಲ, ಕೆಲವಕ್ಕೆ ಮಾತ್ರ ಹೋರಾಟವೇ..? ಎಂದು ಹಿಂದೂತ್ವ ವಾದಿಗಳು ಬಿಜೆಪಿಯ ಹಿಂದೂ ವಿರೋಧ ನೀತಿ ಪ್ರಶ್ನೆ ಮಾಡ್ತಾ ಇಲ್ಲ ಅನ್ನೋದೆ ಅಜೆಂಡಾನ ಮತ್ತೆ ಎಂದು ಪ್ರಶ್ನಿಸಿದರು.

ರಾಜಕೀಯ

ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿ ಚುನಾವಣೆ: ಮುರಿದುಬಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ..!

ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿ ಚುನಾವಣೆ: ಮುರಿದುಬಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ..!

ಡಿ. 21 ರಂದು ನಡೆಯಲಿರುವ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ (Bashettihalli Town Panchayat Election) ನಾಮಪತ್ರಗಳನ್ನು ಹಿಂಪಡೆಯಲು ಶುಕ್ರವಾರ ಕಡೆಯ ದಿನವಾಗಿದ್ದು, 10 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದು, 64 ಅಭ್ಯರ್ಥಿಗಳು ಅಂತಿಮ

[ccc_my_favorite_select_button post_id="117290"]
ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ ಸರ್ಕಾರದಲ್ಲಿ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಬರೋಬ್ಬರಿ 2,84,881 ಹುದ್ದೆಗಳು ಖಾಲಿಯಿರುವ (Bacant Posts) ಮಾಹಿತಿ ಬಯಲಾಗಿದೆ.

[ccc_my_favorite_select_button post_id="117270"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ  ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಡಿಸಿಎಂ

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ತಿಳಿಸಿದರು.

[ccc_my_favorite_select_button post_id="117214"]
ಕಾಲೇಜ್ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ..!: ಕುಟುಂಬಸ್ಥರಿಂದ ಕೊಲೆ ಆರೋಪ

ಕಾಲೇಜ್ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ..!: ಕುಟುಂಬಸ್ಥರಿಂದ ಕೊಲೆ

ಕಾಲೇಜ್ ಹಾಸ್ಟೆಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಶವ ಪತ್ತೆಯಾಗಿರುವ (Student's body found hanging in college hostel) ಘಟನೆ *** ಜಿಲ್ಲೆ *** ಪಟ್ಟಣದಲ್ಲಿ ನಡೆದಿದೆ.

[ccc_my_favorite_select_button post_id="117263"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]