A story for the day: A loan brought by a monkey

ಹರಿತಲೇಖನಿ ದಿನಕ್ಕೊಂದು ಕಥೆ: ಮಂಗ ತಂದ ಸಾಲ

Harithalekhani Daily Story; ಒಂದು ಮಂಗ (Monkey) ಮದುವೆಯಾಯಿತು. ಮಕ್ಕಳಾದವು. ಹರಕು ‘ಮುರುಕು ಮನೆಯೊಂದನ್ನು ಕಟ್ಟಿತು. ಮಳೆಗಾಲದಲ್ಲಿ ರಭಸದಿಂದ ಮಳೆ ಸುರಿಯುವಾಗ ಮನೆಯಿಡೀ ಸೋರುತ್ತಿತ್ತು.

ಹೆಣ್ಣು ಮಂಗ ಸಿಟ್ಟಿನಿಂದ. ‘ಎಂಥ ಸೋಮಾರಿ ನೀನು! ಒಳ್ಳೆಯ ಮನೆಯನ್ನೂ ಕಟ್ಟಲಿಲ್ಲ. ಮಳೆಗೆ ನೆನೆಯುವ ಶಿಕ್ಷೆಯ ಜೊತೆಗೆ ತಿನ್ನಲು ಏನೂ ಆಹಾರವಿಲ್ಲ. ಏನಾದರೂ ಸಂಪಾದಿಸಿ ತರದಿದ್ದರೆ ಮಕ್ಕಳೊಂದಿಗೆ ನಾನು ಉಪವಾಸ ಸಾಯುತ್ತೇನೆ. ಹೋಗು, ಎಲ್ಲಿಂದಾದರೂ ಅಕ್ಕಿಯಿದ್ದರೆ ತೆಗೆದುಕೊಂಡು ಬಾ’ ಎಂದು ಕೋಪದಿಂದಲೇ ಹೇಳಿತು.

ಗಂಡು ಮಂಗನಿಗೆ ದುಡಿಯಲು ಮನಸ್ಸಿಲ್ಲ. ರೈತರು ಬೆಳೆದ ಕಾಯಿಪಲ್ಲೆಯೋ ಹಗ್ಗೋ ಸಿಗುವುದೇ ಎಂದು ಹುಡುಕಿಕೊಂಡು ಹೊರಟಿತು. ಏನೂ ಸಿಗಲಿಲ್ಲ. ಆಗ ಅದಕ್ಕೆ ಕೋಳಿಯ ನೆನಪಾಯಿತು.

ಬೇಸಿಗೆ ಕಾಲದಲ್ಲಿ ಕೋಳಿ ತಿಪ್ಪೆಯನ್ನು ಕೆದಕಿ ಕೆದಕಿ ಒಂದೊಂದೇ ಕಾಳು ಆರಿಸಿ ಮಳೆಗಾಲದಲ್ಲಿ ಮಕ್ಕಳು ಮರಿಗಳಿಗೆ ತಿನ್ನಲು ಜೋಪಾನ ಮಾಡುತ್ತದೆ. ಅದರ ಬಳಿಗೆ ಹೋಗಿ ಸಾಲ ಕೇಳಿ ತರುವುದೆಂದು ಕೋಳಿಯ ಮನೆಗೆ ಹೋಯಿತು. ‘ಕೋಳಿಯಕ್ಕಾ, ಒಂದು ಸೇರಕ್ಕಿ ಸಾಲ ಕೊಡುತ್ತೀಯಾ?’ ಎಂದು ಅಂಗಲಾಚಿತು.

ಕೋಳಿಯು, ‘ಸಾಲ ಕೊಡುತ್ತೇನೆ. ಆದರೆ ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ನಿನ್ನ ಮನೆಗೆ ಬಂದು ಕೇಳಿದಾಗ ಬಡ್ಡಿ ಸಹಿತ ಮರಳಿ ಕೊಡಬೇಕು, ಆಗಬಹುದೆ?’ ಎಂದು ಕೇಳಿತು. ‘ಅಯ್ಯೋ ದೇವರೇ, ಹೇಳಿದ ಮಾತಿಗೆ ತಪ್ಪುವುದುಂಟೆ? ನಾನು ಕೊಟ್ಟಿ ಸಾಲದ ಅಕ್ಕಿ ಬೇಕಾದಷ್ಟು ಇದೆ.

ಮೂಟೆಗಟ್ಟಲೆ ಅಕ್ಕಿ ಈ ದಿನ ಸಂಜೆಯೊಳಗೆ ನನ್ನ ಮನೆಗೆ ಮರಳಿ ಬರುತ್ತದೆ’ ಎಂದು ಮಂಗ ಮೀಸೆ ತಿರುವಿತು. ಕೋಳಿ ಕೊಟ್ಟ ಅಕ್ಕಿಯ ಗಂಟನ್ನು ಮನೆಗೆ ಸಾಗಿಸಿತು. ಬಳಿಕ ನರಿಯ ಮನೆಗೆ ಹೋಯಿತು. ನರಿ ಬೇಸಿಗೆಯಲ್ಲಿ ಹೊಲಗಳಿಗೆ ಹೋಗಿ ಕದ್ದು ಗಳಿಸಿದ ಅಕ್ಕಿಯನ್ನು ಜೋಪಾನ ಮಾಡುವುದು ಅದಕ್ಕೆ ಗೊತ್ತಿತ್ತು. ‘ನರಿಯಣ್ಣ, ಒಂದು ಸೇರಕ್ಕಿ ಸಾಲ ಕೊಡುವೆಯಾ?’ ಎಂದು ಹೇಳಿತು.

‘ಸಾಲ ಕೊಡುತ್ತೇನೆ. ಆದರೆ ಬಡ್ಡಿ ಕೊಡಬೇಕು. ಈಗಿನ ಕಾಲದಲ್ಲಿ ಯಾರನ್ನಾದರೂ ನಂಬುವುದು ಕಷ್ಟ. ನಾಳೆ ಮಧ್ಯಾಹ್ನ ಹನ್ನೆರಡೂವರೆ ಗಂಟೆಗೆ ನಿನ್ನ ಮನೆಗೆ ವಸೂಲಿಗೆ ನಾನು ಬರುತ್ತೇನೆ. ಆಗ ಮರಳಿ ಕೊಡದೆ ಇರಬಾರದು’ ಎಂದಿತು ನರಿ. ‘ಛೇ ಛೇ, ಹಾಗೆ ಮೋಸ ಮಾಡುವುದುಂಟೆ? ಒಂದಕ್ಕೆರಡು ಪಾಲು ಕೊಡುತ್ತೇನೆ. ಈ ದಿನ ಸಂಜೆ ನನ್ನ ಮನೆಗೆ ಎಷ್ಟು ಅಕ್ಕಿ ಬರುತ್ತದೋ ನೀನೇ ನೋಡು’ ಎಂದು ಮಂಗವು ನರಿಗೆ ಹೇಳಿತು. ಅದು ಕೊಟ್ಟ ಅಕ್ಕಿಯನ್ನು ಮನೆಗೆ ತಂದಿತು.

ಮಂಗ ಮತ್ತೆ ನಾಯಿಯ ಮನೆಗೆ ಸಾಗಿತು. ನಾಯಿ ಕುರಿಗಳನ್ನು ತೋಳಗಳಿಂದ ರಕ್ಷಿಸಲು ಕಾವಲು ಕಾದು ಯಜಮಾನ ಕೊಟ್ಟ ಅಕ್ಕಿಯನ್ನು ಸಂಗ್ರಹಿಸಿಡುವುದು ಅದಕ್ಕೆ ಗೊತ್ತಿತ್ತು. ‘ನಾಯಿಯಣ್ಣ, ಒಂದು ಸೇರಕ್ಕಿ ಸಾಲ ಕೊಡುತ್ತೀಯಾ? ಬಡ್ಡಿಯೊಂದಿಗೆ ನಾಳೆ ಮಧ್ಯಾಹ್ನ ಒಂದು ಗಂಟೆಗೆ ತಂದು ಕೊಡುತ್ತೇನೆ’ ಎಂದು ಬೇಡಿತು.

ನಾಯಿಯು ಅಕ್ಕಿಯನ್ನು ಕೊಟ್ಟಿತು. ‘ನೀನು ತಂದು ಕೊಡುವೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ನಾಳೆ ಒಂದು ಗಂಟೆಗೆ ನಾನೇ ನಿನ್ನ ಮನೆಗೆ ಬರುತ್ತೇನೆ’ ಎಂದಿತು.

ಮಂಗ ಅಕ್ಕಿಯನ್ನು ತಂದು ಹೆಂಡತಿಗೆ ಕೊಟ್ಟು ಹುಲಿಯ ಗುಹೆಗೆ ಹೋಯಿತು. ‘ಹುಲಿಯಣ್ಣ, ಮರ್ಯಾದೆ ಹೋಗುತ್ತದೆ. ಒಂದು ಸೇರಕ್ಕಿ ಸಾಲ ಬೇಕಿತ್ತು. ಬಡ್ಡಿಯೊಂದಿಗೆ ನಾಳೆ ಮಧ್ಯಾಹ್ನ ಒಂದೂವರೆ ಗಂಟೆಗೆ ವಾಪಾಸು ಕೊಡುತ್ತೇನೆ’ ಎಂದು ಕೇಳಿತು.

ದಾರಿಯಲ್ಲಿ ಹೋಗುವ ವ್ಯಾಪಾರಿಗಳನ್ನು ಹೆದರಿಸಿ ಹುಲಿ ಮಳೆಗಾಲಕ್ಕಾಗಿ ಅಕ್ಕಿಯನ್ನು ಸಂಗ್ರಹಿಸಿ ಇಡುತ್ತಿತ್ತು. ಅದರಿಂದ ಮಂಗನಿಗೆ ಸಾಲ ಕೊಟ್ಟಿತು. ‘ನಾಳೆ ಮಧ್ಯಾಹ್ನ ನಿನ್ನ ಮನೆಗೆ ಬರುತ್ತೇನೆ. ಆಗ ಏನೂ ನೆಪ ಹೇಳದೆ ಮರಳಿ ಕೊಡದಿದ್ದರೆ ಕೊಂದು ಹಾಕಿಯೇನು’ ಎಂದು ಎಚ್ಚರಿಸಿತು. ಮಂಗ ಅಕ್ಕಿಯನ್ನು ಮನೆಗೆ ತಂದಿತು. ಹೆಂಡತಿ ಮಕ್ಕಳೊಂದಿಗೆ ಹಬ್ಬದ ಊಟ ಮಾಡಿತು.

ಮರುದಿನ ಮಂಗ ಮಕ್ಕಳೊಂದಿಗೆ ಹೆಂಡತಿಯನ್ನು ತವರುಮನೆಗೆ ಹೋಗಿ ಬರಲು ಕಳುಹಿಸಿತು. ತಾನು ಒಂದು ಕಂಬಳಿ ಹೊದ್ದುಕೊಂಡು ಮಂಚದ ಮೇಲಿನ ಹಾಸಿಗೆಯಲ್ಲಿ ನರಳುತ್ತ ಕುಳಿತುಕೊಂಡಿತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಸಾಲ ವಸೂಲಿಗೆ ಕೋಳಿ ಬಂದಿತು. ಹೊರಗಿನಿಂದ, ‘ಮಂಗಣ್ಣಾ ಮಂಗಣ್ಣಾ, ಸಾಲ ಮರಳಿ ತಾ’ ಎಂದು ಕರೆಯಿತು.

ಮಂಗ ನರಳುತ್ತ, ‘ನನಗಿಲ್ಲಿ ಜ್ವರದಿಂದ ಪ್ರಾಣ ಹೋಗುತ್ತಿದೆ. ಸಾಲವೂ ಇಲ್ಲ, ಗೀಲವೂ ಇಲ್ಲ. ಹೋಗಾಚೆ’ ಎಂದು ಗದರಿಸಿತು. ಕೋಳಿಗೆ ಕೋಪ ಬಂತು. ‘ಏನಂದೆ, ಕೊಟ್ಟ ಮಾತಿಗೆ ತಪ್ಪಿದರೆ ಬಿಡುತ್ತೇನಾ?’ ಎನ್ನುತ್ತ ಒಳಗೆ ಬಂದಿತು. ಆಗ ಹೊರಗಿನಿಂದ, ‘ಮಂಗಣ್ಣಾ, ನನ್ನ ಸಾಲ ಹಿಂದೆ ಕೊಡು’ ಎಂದು ನರಿಯ ಧ್ವನಿ ಕೇಳಿಸಿತು. ನರಿ ಬಂದಿರುವುದು ಕೋಳಿಗೆ ಗೊತ್ತಾಯಿತು.

‘ಅಯ್ಯೋ, ನೀನು ಸಾಲ ಮರಳಿ ಕೊಡುವುದು ಬೇಡ. ನರಿಯಿಂದ ನನ್ನನ್ನು ಬಚಾವು ಮಾಡು’ ಎಂದು ಕೋರಿತು. ಮಂಗ ಕೋಳಿಯನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿತು. ‘ಸಾಲ ಮರಳಿ ಕೊಡೋದಿಲ್ಲ. ನನಗೆ ಜ್ವರ ಬರುತ್ತಿದೆ’ ಎಂದು ನರಿಗೆ ಮಂಗ ಕೂಗಿ ಹೇಳಿತು. ‘ಕೊಡದಿದ್ದರೆ ಸುಮ್ಮನೆ ಬಿಡುತ್ತೇನಾ?’ ಎಂದು ನರಿ ಒಳಗೆ ಬಂದಿತು.

ಆಗ ಹೊರಗೆ ನಾಯಿ ಕರೆಯುವ ಧ್ವನಿ ನರಿಗೆ ಕೇಳಿಸಿತು. ‘ಅಯ್ಯೋ ದೇವರೇ, ನಾಯಿ ಬಂದ ಹಾಗಿದೆ. ನೀನು ಸಾಲ ಮರಳಿಸಬೇಕಾಗಿಲ್ಲ. ನನ್ನ ಜೀವ ಕಾಪಾಡು’ ಎಂದಿತು ನರಿ, ಮಂಗ ನರಿಯನ್ನು ಹಾಸಿಗೆಯ ಕೆಳಗೆ ಅಡಗಿಸಿತು. ನಾಯಿಗೆ, ‘ಹೋಗೋ, ನಿನ್ನ ಸಾಲ ಮರಳಿಸೋದೇ ಇಲ್ಲ’ ಎಂದಿತು.

ನಾಯಿ ಒಳಗೆ ಬರುವಾಗ ಹೊರಗೆ ಹುಲಿಯ ಕರೆ ಕೇಳಿಸಿತು. ನಾಯಿ, ‘ಹುಲಿ ಬಂದ ಹಾಗಿದೆ. ನನ್ನ ಜೀವ ಕಾಪಾಡು. ನಿನ್ನ ಸಾಲ ಮರಳಿಸಬೇಕಾಗಿಲ್ಲ’ ಎಂದು ಕೇಳಿತು. ಮಂಗ ನಾಯಿಯನ್ನು ಹಾಸಿಗೆಯ ಕೆಳಗೆ ಅಡಗಿಸಿಟ್ಟಿತು. ‘ಲೋ ಹುಲಿ, ನಿನ್ನ ಅಕ್ಕಿ ಮರಳಿಸೋದಿಲ್ಲ. ಒಳಗೆ ಬಾ. ಇಲ್ಲಿರುವ ನನ್ನ ಸ್ನೇಹಿತರು ನಿನ್ನನ್ನು ಸೀಳಿ ಹಾಕುತ್ತಾರೆ’ ಎಂದು ಅಬ್ಬರಿಸಿತು.

ಹುಲಿಯನ್ನು ಸೀಳುವ ಸ್ನೇಹಿತರು ಯಾರು ಎಂದು ನೋಡಲು ಹುಲಿ ಒಳಗೆ ಬಂದು ಮಂಚದ ಮೇಲೆ ನೆಗೆಯಿತು. ಮಂಚ ಮುರಿದು ಬಿದ್ದಿತು. ಅದರೊಳಗಿದ್ದ ಕೋಳಿ ಹೊರಗೆ ಬಂದಿತು. ಕೋಳಿಯನ್ನು ಬೆನ್ನಟ್ಟಿ ನರಿ ಓಡಿತು. ನರಿಯನ್ನು ಕಂಡು ನಾಯಿ ಬೆಂಬತ್ತಿತು.

ಮಂಗ ಸದ್ದಿಲ್ಲದೆ ಮನೆಯಿಂದ ಹೊರಗೆ ಜಿಗಿದು ಮರವೇರಿ ಕುಳಿತಿತು. ಹುಲಿಯ ಭಯದಿಂದಾಗಿ ಅದು ಮತ್ತೆ ಮನೆ ಕಟ್ಟಿಕೊಳ್ಳದೆ ಮರವನ್ನು ಮನೆ ಮಾಡಿಕೊಂಡು ಅಲ್ಲೇ ವಾಸಿಸಿತು. (ಬ್ರೆಜಿಲ್ ಕಥೆ)

ಕೃಪೆ: ಪ.ರಾಮಕೃಷ್ಣ ಶಾಸ್ತ್ರಿ (ಸಾಮಾಜಿಕ ಜಾಲತಾಣ)

ಓದುಗರಿಂದ ಪ್ರೋತ್ಸಾಹ ಸಿಗದ ಕಾರಣ ಕೆಲ ದಿನಗಳಿಂದ ನಿಲ್ಲಿಸಲಾಗಿದ್ದ ಹರಿತಲೇಖನಿ ದಿನಕ್ಕೊಂದು ಕಥೆಯನ್ನು, ಮತ್ತೆ ಹರಿತಲೇಖನಿ ಓದುಗ ತಾಯಂದಿರ ಒತ್ತಾಯದ ಮೇರೆಗೆ ಆರಂಭಿಸಲಾಗಿದೆ.

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!