ಉದಯಪುರ (ಜೈಪುರ): ದೇವರಿಗೆ ‘ಆರತಿ’ ಮಾಡುತ್ತಿದ್ದಾಗ ಅಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಟ್ಟಗಳಿಗೆ ಒಳಗಾಗಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಕೇಂದ್ರದ ಮಾಜಿ ಸಚಿವೆ ಡಾ.ಗಿರಿಜಾ ವ್ಯಾಸ್ (Dr.Girija Vyas) ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಉದಯಪುರದಲ್ಲಿರುವ ತಮ್ಮ ಮನೆಯಲ್ಲಿ ಮಾರ್ಚ್ 31ರಂದು ದೇವರಿಗೆ ‘ಆರತಿ’ ಮಾಡುತ್ತಿದ್ದಾಗ ಹೊತ್ತಿಕೊಂಡ ಅಚಾನಕ್ ಬೆಂಕಿ ಪರಿಣಾಮ ಗಿರಿಜಾ ವ್ಯಾಸ್ ಅವರಿಗೆ ಸುಟ್ಟ ಗಾಯಗಳಾಗಿದ್ದವು.
ಕೂಡಲೇ ಕುಟುಂಬಸ್ಥರು ಅವರನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್ಗೆ ಕರೆದೊಯ್ಯಲಾಯಿತು.
ವ್ಯಾಸ್ ದೇವರಿಗೆ ‘ಆರತಿ’ ಮಾಡುತ್ತಿದ್ದಾಗ ಉರಿಯುತ್ತಿರುವ ದೀಪದಿಂದ ದುಪ್ಪಟ್ಟಾಗೆ ಬೆಂಕಿ ಹೊತ್ತಿಕೊಂಡಿದ್ದು, ದೇಹವೆಲ್ಲಾ ಸುಟ್ಟ ಗಾಯಗಳಾಗಿತ್ತು ಎಂದು ಅವರ ಸಹೋದರ ಗೋಪಾಲ್ ಶರ್ಮಾ ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ವ್ಯಾಸ್ ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ನಡು ರಸ್ತೆಯಲ್ಲಿ ಮತ್ತೆ ಹರಿದ ನೆತ್ತರು..!| ವಿಜಯೇಂದ್ರ ಕಿಡಿ
ಸದ್ಯ ವ್ಯಾಸ್ ನಿಧನಕ್ಕೆ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.