ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಫಲಿತಾಂಶ ಇಂದು ಶುಕ್ರವಾರ (ಮೇ 2) ಬೆಳಿಗ್ಗೆ 11.30ಕ್ಕೆ ಪ್ರಕಟವಾಗಲಿದೆ. ಮಧ್ಯಾಹ್ನ 12.30ರ ಬಳಿಕ karresults.nic.in ನಲ್ಲಿ ಮೊಬೈಲ್ ಹಾಗೂ ವಿಂಡೋಸ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ಇಂದು ಬೆಳಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರ ಪ್ರಕಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ SSLC ಪರೀಕ್ಷೆ ನಡೆದಿತ್ತು. 2,818 ಕೇಂದ್ರಗಳಲ್ಲಿ 4.34 ಲಕ್ಷ ಬಾಲಕಿಯರು ಸೇರಿ ಒಟ್ಟು 8.95 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
(ವಿದ್ಯಾರ್ಥಿಗಳಿಗೆ ಆತಂಕ ಬೇಡ, ಆತುರ ಬೇಡ, ಅವಕಾಶಗಳು ಅನೇಕ ಇದೆ. ಇದು ಹರಿತಲೇಖನಿ ಮನವಿ)