ಚಿಕ್ಕಬಳ್ಳಾಪುರ: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ (SSLC) ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಶೇ. 63.64ರಷ್ಟು ಫಲಿತಾಂಶವನ್ನು ಪಡೆದಿದೆ.
ಚಿಂತಾಮಣಿ ತಾಲೂಕು ಶೇ.70.02, ಚಿಕ್ಕಬಳ್ಳಾಪುರ ತಾಲೂಕು ಶೇ.67.27, ಶಿಡ್ಲಘಟ್ಟ ತಾಲೂಕು ಶೇ. 69.01, ಬಾಗೇಪಲ್ಲಿ ತಾಲೂಕು ಶೇ. 64.10, ಗೌರಿಬಿದನೂರು ತಾಲೂಕು ಶೇ. 50.70 ಹಾಗೂ ಗುಡಿಬಂಡೆ ತಾಲೂಕು ಶೇ. 52.22 ಫಲಿತಾಂಶ ಗಳಿಸಿವೆ.
ಈ ಬಾರಿ ಜಿಲ್ಲೆಯಲ್ಲಿ 14,971 ವಿದ್ಯಾರ್ಥಿಗಳು ಪರೀಕ್ಷೆಗೆ ಪರೀಕೆಗೆ ಹಾಜರಾಗಿದ್ದು, 9462ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 6,440 ಬಾಲಕಿಯರು, 5,132 ಬಾಲಕರು ಉತ್ತೀರ್ಣರಾಗಿದ್ದಾರೆ.
ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಕಳೆದ ವರ್ಷಕ್ಕಿಂತ ಈ ಬಾರು ನಾಲ್ಕು ಸ್ಥಾನ ಕೆಳಗಿಳಿದು ರಾಜ್ಯದಲ್ಲಿ 22ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಆದರೂ ಚಿಕ್ಕಬಳ್ಳಾಪುರ ಹೊರವಲಯದ ಆಗಲಗುರ್ಕಿ ಬಿಜಿಎಸ್ ಶಾಲೆಯ ಮೂರು ವಿದ್ಯಾರ್ಥಿಗಳು, ಬಾಗೇಪಲ್ಲಿಯ ನ್ಯೂ ಹೋರೈಜನ್ ಶಾಲೆಯ ಒಬ್ಬ ವಿದ್ಯಾರ್ಥಿ, ಯಂಗ್ ಇಂಡಿಯಾ ಶಾಲೆಯಿಂದ ಒಬ್ಬರು, ಚಿಂತಾಮಣಿ ರಾಯಲ್ ಶಾಲೆಯ ಒಬ್ಬ ವಿದ್ಯಾರ್ಥಿ ರಾಜ್ಯದಲ್ಲಿಯೇ 2ನೇ ರ್ಯಾಂಕ್ ಪಡೆದಿದ್ದಾರೆ.
ಬಿಜಿಎಸ್ ಅಗಲಗುರ್ಕಿ ಶಾಲೆಯ ಬುವನ್ ಗಣೇಶ್ ಸಿ, ಪೂರ್ವಿ ಎಸ್,ತೇಜಸ್ವಿನಿ ಕೆ.ಆರ್.ಹಾಗೂ ಬಾಗೇಪಲ್ಲಿ ನ್ಯೂ ಹೋರೈಜನ್ ಶಾಲೆಯ ಜಸ್ವಂತ್, ಯಂಗ್ ಇಂಡಿಯಾ ಶಾಲೆಯ ವಿದ್ಯಾರ್ಥಿನಿ ನಾಗಶ್ರೀ.ಎಸ್, ಚಿಂತಾಮಣಿ ರಾಯಲ್ ಶಾಲೆಯ ಮದುಶ್ರೀ 625ಕ್ಕೆ 624 ಅಂಕ ಪಡೆದು ಇಡೀ ಜಿಲ್ಲೆಗೆ ಟಾಪರ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಇನ್ನೂ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 22ನೇ ಸ್ಥಾನಕ್ಕೆ ಕುಸಿದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಗೌರಿಬಿದನೂರು ತಾಲೂಕಿನಲ್ಲಿ ಕಡಿಮೆ ಫಲಿತಾಂಶ ಬಂದಿದೆ ಎಂದು ಕೆರಳಿರುವ ನೆಟ್ಟಿಗರು, ರಾಜಕಾರಣಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರನ್ನು ತರಾಟಗೆ ತೆಗೆದುಕೊಂಡಿದ್ದಾರೆ.
ತೀವ್ರ ಚರ್ಚೆಗೆ ಕಾರಣವಾಗಿರುವ ಪೊಸ್ಟ್ಗಳಲ್ಲಿ ಪ್ರಮುಖವಾಗಿ ಗಿರೀಶ್ ರೆಡ್ಡಿ ಎನ್ನುವವರು, GBD ತಾಲ್ಲೂಕಿನ ಇಂದಿನ ಫಲಿತಾಂಶಕ್ಕೆ ನೇರ ಕಾರಣ? ಶಿಕ್ಷಕರು ಶಿಕ್ಷಣ ಬಿಟ್ಟು ರಿಯಲ್ ಎಸ್ಟೇಟ್, ಬಡ್ಡಿ ದಂಧೆ ಇನ್ನೂ ಅನೇಕ ಉಪಕಸುಭುಗಳೇ ಕಾರಣ?? ಏನಂತೀರಾ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರವಾಗಿ ಗುರುಗಳು. ತಮ್ಮ ಕಾಯಕ ಬಿಟ್ಟು ಭವಿಷ್ಯದ ರಾಜಕಾರಣ ಮಾಡಲು ವಿಭಿನ್ನ ರೀತಿಯ ಚಟುವಟಿಕೆಯ ಮೂಲಕ ಶಿಕ್ಷಣ ನೀಡುವ ಇವರು ಈ. ವರ್ತೇನೆ ಖಂಡನೀಯ ಅನೇಕ ವರ್ಷಗಳಿಂದ ಒಂದೇ ಶಾಲೆಯಲ್ಲಿ ಇರುವ ಶಿಕ್ಷಕರಗೇ ವರ್ಗಾವಣೆ ಆದೇಶ ಹೊರಡಿಸಿದೆರೆ. ಉತ್ತಮ ಕೆಲವರು ನೌಕರರ ಸಂಘದ ವತಿಯಿಂದ ನಾವೇ ಎಲ್ಲ ಅಂತ, ಓಡಾಟ. ಮಾಡುತ್ತಿರುವ ಶಿಕ್ಷಕರ ಗೇ ವರ್ಗಾವಣೆ ಆದೇಶ ಒಂದೇ ಇವರಗೇ ಎಚ್ಚರಿಕೆಯ ಸಂದೇಶ,
BEO ತಲೆದಂಡ ಆಗಲೇ ಬೇಕು
ಈ ಮಾತು ನಾನು ಒಪ್ಪೋಲ್ಲ ಗಿರಿ (ಗೆಳೆಯ)
ಯಾಕಂದ್ರೆ ಒಂದು ತರಗತಿ ನಲ್ಲಿ ಇರೋ ಎಲ್ಲಾ ವಿದ್ಯಾರ್ಥಿಗಳಿಗೆ ಯಾರೇ ಆಗಲಿ ಒಬ್ಬ ಶಿಕ್ಷಕ ಒಂದೇ ತರ ಪಾಠ ಮಾಡಿರ್ತಾರೆ….. ಆದ್ರಲ್ಲಿ ಕೆಲವು ವಿದ್ಯಾರ್ಥಿಗಳು ಡಿಸ್ಟಿಂಗಷನ್ ಬರ್ತಾರೆ ಕೆಲವರು ಫಸ್ಟ್ ಕ್ಲಾಸ್ ಆಗ್ತಾರೆ….ಇನ್ನು ಕೆಲವರು ಜಸ್ಟ್ ಪಾಸ್ ಆಗ್ತಾರೆ….ನನ್ನ ಪ್ರಕಾರ ಅವರು ವೈಯುಕ್ತಿಕ ವಿಚಾರ ಏನೇ ಇದ್ರುನು… ಯಾವುದೇ ಬೇಧ-ಭಾವ ಇಲ್ಲದೆ ಪಾಠ ಮಾಡಿರ್ತಾರೆ ಶಿಕ್ಷಕರು.
ಒಳ್ಳೆಯ ವಿಚಾರ ಹೇಳಿದ್ದೀರಿ. ಅಂತಹ ಶಿಕ್ಷಕರನ್ನು ಪಟ್ಟಿಮಾಡಿ ಅಮಾನತು ಮಾಡಿ ಮುಂದಿನ ಶೈಕ್ಷಣಿಕ ವರ್ಷದಿಂದ ಶೇಕಡಾವಾರು ಫಲಿತಾಂಶ ೧೦೦ ಬರಲಿ. ಹಾಗೂ ಶಾಸಕರು ಕೂಡಲೇ ತಾಲೂಕಿನ ಎಲ್ಲಾ ಫ್ರೌಡಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಕರೆದು ಚರ್ಚೆ ನಡೆಸಲಿ. ಫಲಿತಾಂಶ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶಾಸಕರು ಸಹಾಯ ಮತ್ತು ಸಹಕಾರ ನೀಡಲಿ.
ತಾಲ್ಲೂಕು ಆಡಳಿತದ ಅಡಿಯಲ್ಲೇ ಶಿಕ್ಷಕರು ಬರೋದು ಒಟ್ಟಾರೆ ತಾಲ್ಲೂಕು ಆಡಳಿತನೇ ಕಾರಣ.
ಕಡಿವಾಣ ಹಾಕುವ ಕೆಲಸ ಮಾಡುವ ಅವಶ್ಯಕ ಇದೆ ಒಂದೇ ಮಾರ್ಗ ಅನೇಕ ವರ್ಷಗಳಿಂದ ಒಂದೇ ಕಡೇ ತಳ ವೂರಿರುವ ಶಿಕ್ಷಕರ ಕಡ್ಡಾಯ ವರ್ಗಾವಣೆ ಮಾಡುವ ಮೂಲಕ ಭವಿಷ್ಯದ ಮಕ್ಕಳ ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಂಡಿಲ್ಲ ಅಂದರೇ ಬರುವ ವರ್ಷ ಇನ್ನು ಕಳಪೆ ಗುಣಮಟ್ಟದ ಶಿಕ್ಷಣ ನೀಡುವ ಸಾಧ್ಯತೆ.
ಶಿಕ್ಷಕರ ಮಕ್ಕಳನ್ನು ಮೊದಲು ಸರ್ಕಾರಿ ಶಾಲೆಗೆ ಕಳುಹಿಸಲು ಹೇಳಿ ರಿಸಲ್ಟ್ ತಾನಾಗಿಯೇ ಬರುತ್ತೆ ಎಲ್ಲ ಎಂದು ಬಂದಿವೆ.
ಇನ್ನೂ ನಮ್ಮ ಗೌರಿಬಿದನೂರು ಫೇಸ್ಬುಕ್ ಪುಟದಲ್ಲಿ SSLC ಫಲಿತಾಂಶದ ಕುರಿತಂತೆ ಅಣ್ಣ ಶಿಕ್ಷಣಾಧಿಕಾರಿಗಳೇ, ರಾಜಕಾರಣಿಗಳೇ ಎಂದು ಒಂದು ವಾಕ್ಯದಲ್ಲಿ ಕೈ ಮುಗಿದಿದ್ದು, ಇಲ್ಲಿ ಕೂಡ ಚರ್ಚೆ ನಡೆದಿದೆ. ಇದರಲ್ಲಿ ಪ್ರಮುಖವಾಗಿ.
ಸಂಬಳ ಕಟ್ ಮಾಡಬೇಕು ಇವರಿಗೆ… ಮೊದಲು.. ಲಕ್ಷ ಲಕ್ಷ ಸಂಬಳ ತಗೊಂಡು.. ಪುಂಗಿ ಪಾಠ ಮಾಡುದ್ರೆ ವಿದ್ಯಾರ್ಥಿಗಳು ಏನು ಬರೆಯಲು ಸಾಧ್ಯ ತರಬೇತಿ.. ಕೊರತೆ ಇದೆ.
ಸರ್ಕಾರಿ ಶಾಲೆ ಮುಚ್ಚಲು ಹುನ್ನಾರ ಇರಬೇಕು.
ಕೇವಲ 30 ಮಾರ್ಕ್ಸ್ ತರಸಕ್ಕೆ ನಿಮ್ಮ ಕೈಲಿ ಆಗಿಲ್ವ ಹೆಂಗೋ ನೀವು 20 ಮಾರ್ಕ್ಸ್ ಇಂಟರ್ನಲ್ ಕೊಡ್ತೀರಾ ಬರೀ 30 ಮಾರ್ಕ್ಸ್ ತಗೊಳೋ ಅಷ್ಟು ವಿದ್ಯಾಭ್ಯಾಸ ಕೊಡಲು ಅನರ್ಹರಾಗಿದಿರ.
ಇಲ್ಲಿಂದ ಮಾನ್ಯ beo ನ್ನು ತೆಗೆದು ಹಾಕಿದೇರ್ ಎಲ್ಲ ಸರಿ ಹೋಗುತ್ತೆ.
Govt teachers waste kata charakke hogtare aste 10 ge school hedre 11 ge bartare kelovane hella mana marede en hella govt school muchodu holledu ಎಂಬ ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.