ಬೆಂಗಳೂರು: ಕಿರುತೆರೆ ಹಾಸ್ಯನಟ, ಕಾಮಿಡಿ ಕಿಲಾಡಿಗಳು ಸೀಸನ್-3 ರ ವಿಜೇತ ರಾಕೇಶ್ ಪೂಜಾರಿ (Rakesh Poojary) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಾಂತಾರಾ ಚಾಪ್ಟರ್ 1 ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ರಾಕೇಶ್ ಪೂಜಾರಿ ಅವರು, ಮಿತ್ರನ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸಂಭವಿಸಿರುವುದಾಗಿ ವರದಿಯಾಗಿದೆ.
ಮೂಲತಃ ರಂಗಕಲಾವಿದರಾಗಿದ್ದ ರಾಕೇಶ್ ಪೂಜಾರಿ, ಕಾಮಿಡಿ ಕಿಲಾಡಿಗಳು ಕಿರುತೆರೆ ಕಾರ್ಯಕ್ರಮದಿಂದ ಪ್ರಸಿದ್ದರಾಗಿದ್ದರು.
ತುಳು ನಾಟಕದ ಮೂಲಕ ಕಲಾವಿದರಾಗಿ ಪಾದಾರ್ಪಣೆ ಮಾಡಿದ್ದ ರಾಕೇಶ್ ತಮ್ಮ ಆಂಗಿಕ ಅಭಿನಯ, ಸರಳ ವ್ಯಕ್ತಿತ್ವದಿಂದ ಜನರ ಮನಗೆದ್ದಿದ್ದರು.
ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಹಲವು ಮಂದಿ ನಟನಟಿಯರು ರಾಕೇಶ್ ಪೂಜಾರಿ ಅವರ ಅಕಾಲಿಕ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.