ದೊಡ್ಡಬಳ್ಳಾಪುರ: ಟಿಎಂಸಿ ಬ್ಯಾಂಕಿನ ಮಾಜಿ ನಿರ್ದೇಶಕ ಎ.ಎಸ್.ಕೇಶವ (A.S.Keshava) ಅವರು ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಕೇಶವ ಅವರು ಇಂದು ಬೆಳಗ್ಗೆ ಸ್ವಗೃಹದಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ.
ಮೃತರು ಮಡದಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3ಗಂಟೆಗೆ ದೇವಾಂಗ ಮಂಡಲಿ ಮುಕ್ತಿಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದೊಡ್ಡಬಳ್ಳಾಪುರ ಟಿಎಂಸಿ ಬ್ಯಾಂಕಿನಲ್ಲಿ 15 ವರ್ಷ ಸೇವೆ ಸಲ್ಲಿಸಿದ ಕೇಶವ ಅವರಿಗೆ. ಟಿಎಂಸಿ ಬ್ಯಾಂಕಿನ ಆಡಳಿತ ಮಂಡಳಿ, ದೇವಾಂಗ ಮಂಡಳಿ ಸದಸ್ಯರು, ಮಿತ್ರರಾದ ಎಸ್.ಎನ್.ಶಿವರಾಮ್, ಜನಾರ್ಧನ್ ಕಟಾಣಿ, ಕೆಎಸ್ ಗೋಪಿ ಕಂಬನಿ ಮಿಡಿದಿದ್ದಾರೆ.