ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಮನವಿ, ಒತ್ತಾಯಕ್ಕೆ ಮಣಿದು ಸಕ್ರಿಯವಾಗಿದ್ದ 108 ಆಂಬುಲೆನ್ಸ್‌ಗಳು (108 ambulances) ಮತ್ತೆ ಸದ್ದಿಲ್ಲದೆ ತಾಲೂಕಿನಿಂದ ಕಾಣೆಯಾಗುತ್ತಿವೆ.
ದೊಡ್ಡಬಳ್ಳಾಪುರ ತಾಲೂಕಿನ ನಗರ, ಘಾಟಿ ಮಧುರೆ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿಯ ಒಟ್ಟು ಐದು 108 ಆಂಬುಲೆನ್ಸ್ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಕಾರ್ಯನಿರ್ವವಹಿಸುತ್ತಿರುವುದು ಮೂರು ಮಾತ್ರ..! ಮತ್ತೆ ಉಳಿದ ಅಂಬುಲೆನ್ಸ್ ಎಲ್ಲಿಗೆ ಹೋದವು..? ಕೇಳೋರ್ ಯಾರು..? ಹೇಳೋರ್ ಯಾರು..? ಎಂಬ ಪ್ರಶ್ನೆ ದೊಡ್ಡಬೆಳವಂಗಲ ಮತ್ತು ಸಾಸಲು ಹೋಬಳಿಯ ಜನರದ್ದಾಗಿದೆ.
ಅಂದು ಕರವೇ ಮುಖಂಡರ ಆಕ್ರೋಶಕ್ಕೆ ಮಣಿದ ದೊಡ್ಡಬಳ್ಳಾಪುರ ತಾಲೂಕು ಆಡಳಿತ ಕೂಡಲೇ ಹೆಚ್ಚೆತ್ತು 5 ಆಂಬುಲೆನ್ಸ್‌ಗಳನ್ನು ರಸ್ತೆಗೆ ಇಳಿಸಿತ್ತು. ಆದರೆ ನಂತರ..?
ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕಾದ 108 ಆಂಬುಲೆನ್ಸ್ ಕಾಣೆಯಾಯಿತು. ಬಳಿಕ ಸಾಸಲು ಹೋಬಳಿಯ ಅಂಬುಲೆನ್ಸ್ ದುರಸ್ತಿಯ ಕಾರಣ ಗ್ಯಾರೇಜ್ ಸೇರಿ ಸುಮಾರು ಎರಡು ತಿಂಗಳಿಗೂ ಹೆಚ್ಚುಕಾಲ ಕಳೆದಿದೆ. ಉಳಿದಿರುವುದು ಮೂರು ಆಂಬುಲೆನ್ಸ್ ಮಾತ್ರ. ಅವು ಕೂಡ ತುರ್ತು ಸಂದರ್ಭದಲ್ಲಿ ಬಡವರಿಗೆ ಸೌಲಭ್ಯ ದೊರಕುತ್ತಿಲ್ಲ ಎಂಬ ಅರೋಪ ಜನರದ್ದು.
108 ಆಂಬುಲೆನ್ಸ್ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತುರ್ತು ಸಂದರ್ಭದಲ್ಲಿ ವರದಾನವಾಗ ಬೇಕಿದ್ದ ಅರೋಗ್ಯ ಸುರಕ್ಷಾ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಹಳ್ಳಹಿಡಿಯುತ್ತಿದೆ ಎಂಬ ಆಕ್ರೋಶ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಟೋಲ್ ಸಂಗ್ರಹ ಕೇಂದ್ರಗಳಿಂದ ಆವೃತವಾಗಿ, ವಾಹನಗಳು ಟೋಲ್‌ಗಳಲ್ಲಿ ಹಣ ಕಟ್ಟದೇ ದೊಡ್ಡಬಳ್ಳಾಪುರ ತಾಲೂಕಿಗೆ ಬರಲಾಗದ ಪರಿಸ್ಥಿತಿ ಜನರಿಗೆ ನಿರ್ಮಾಣವಾಗಿದೆ.
ಇದರ ಬೆನ್ನಲ್ಲೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅಪಘಾತ ಪ್ರಕರಣಗಳು ಕೂಡ ತೀವ್ರವಾಗಿದ್ದು, ಗಾಯದ ಮೇಲೆ ಬರೆ ಹೇಳೆದಂತೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಖಾಸಗಿ ಆಂಬುಲೆನ್ಸ್ ಹಾವಳಿ ವ್ಯಾಪಕವಾಗಿದ್ದು, ಅಪಘಾತವಲಯಗಳಲ್ಲಿ ಬೆಳಿಗ್ಗೆ 8 ರಿಂದ 11 ಗಂಟೆ ಮತ್ತು ಸಂಜೆ 4 ರಿಂದ 8 ಗಂಟೆಗೆ ಸಮಯದಲ್ಲಿ ಕಾದು ನಿಲ್ಲುತ್ತಿವೆ ಎನ್ನಲಾಗುತ್ತಿವೆ ಎನ್ನಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಾರ್ಖಾನೆ ವೃತ್ತ, ರೈಲ್ವೆ ಸ್ಟೇಷನ್ ಸರ್ಕಲ್, ಟಿಬಿ ಸರ್ಕಲ್, ರಾಷ್ಟ್ರೀಯ ಹೆದ್ದಾರಿಯಿಂದ ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಕೊಡಿಗೇಹಳ್ಳಿ ಜಂಕ್ಷನ್, ದಾಬಸ್‌ಪೇಟೆ- ದೇವನಹಳ್ಳಿ ನಡುವಿನ ನಾಗದೇನಹಳ್ಳಿ ಬಳಿ, ಹಿಂದೂಪುರ- ಬೆಂಗಳೂರು ನಡುವಿನ ಗುಂಡಮಗೆರೆ ತಿರುವು, ಮಾಕಳಿ ಬಳಿ ಕಾದು ನಿಂತು ಅಪಘಾತ ಸಂಭವಿಸಿದ ಕೂಡಲೇ ಸರ್ಕಾರಿ 108 ಆಂಬುಲೆನ್ಸ್ ಬರುವ ಮುನ್ನವೇ ಖಾಸಗಿ ಆಸ್ಪತ್ರೆಗೆ ಗಾಯಗೊಂಡವರನ್ನು ದಾಖಲಿಸಲಾಗುತ್ತಿದೆ.
ಇದು ತುರ್ತು ಸಂದರ್ಭದಲ್ಲಿ ಉತ್ತಮ ಕಾರ್ಯವೇ ಆದರೂ, ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ, ಉಚಿತ ಚಿಕಿತ್ಸೆ ದೊರಕುತ್ತಿದ್ದರೂ, ಖಾಸಗಿ ಆಸ್ಪತ್ರೆ ದಾಖಲಿಸಲಾಗುತ್ತಿರುವ ಕಾರಣ, ಅಪಘಾತಕ್ಕೆ ಒಳಗಾದವರ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗಳಿಗೆ ಲಕ್ಷಾಂತರ ರೂ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬ ಆರೋಪ ವ್ಯಾಪಕವಾಗಿದೆ.
ತುರ್ತು ಸಂದರ್ಭದಲ್ಲಿ 108 ಅಂಬುಲೆನ್ಸ್ ಆದರೆ ಸರ್ಕಾರಿ ಆಸ್ಪತ್ರೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಿಗೆ ಹಿನ್ನಡೆಯಾಗುತ್ತದೆ. ಅದೇ ಖಾಸಗಿ ಆಂಬುಲೆನ್ಸ್ ಆದರೆ ಖಾಸಗಿ ಆಸ್ಪತ್ರೆಗಳಿಗೆ ಲಾಭ ಎಂಬ ದುರುದ್ದೇಶದಿಂದ 108 ಆಂಬುಲೆನ್ಸ್ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಲು ಶಡ್ಯಂತ್ರರೂಪಿಸುತ್ತಿದ್ದಾರೆ ಎಂಬ ಆರೋಪ ಸಂಘಟನೆಗಳ ಮುಖಂಡರದ್ದು.
ಇದೇ ಕಾರಣಕ್ಕೆ 108 ಆಂಬುಲೆನ್ಸ್ ಸೌಲಭ್ಯ ದೊರಕಿಸಲು ಯಾರು ಕ್ರಮಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶಕ್ಕೆ ಕಾರಣವಾಗಿದೆ.
ಕೂಡಲೇ ದೊಡ್ಡಬಳ್ಳಾಪುರ ತಾಲೂಕು ಆಡಳಿತ ಜಾಗೃತಗೊಂಡು, ಕಾಣೆಯಾಗಿರುವ 108 ಆಂಬುಲೆನ್ಸ್‌ಗಳನ್ನು ತಾಲೂಕಿಗೆ ತರಿಸಬೇಕು. ಖಾಸಗಿ ಆಂಬುಲೆನ್ಸ್ ನಿಲ್ಲುವ ಸ್ಥಳಗಳಲ್ಲಿ ಸರ್ಕಾರಿ 108 ಆಂಬುಲೆನ್ಸ್ ನಿಲ್ಲುವಂತಹ ವ್ಯವಸ್ಥೆ ಮಾಡಬೇಕು.
ಇಲ್ಲವಾದಲ್ಲಿ ಹೇಳುವುದಿಲ್ಲ, ಹೇಳುವುದಿಲ್ಲ.. ಸಾಕ್ಷಿ ಅಮೇತ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಎಚ್ಚರಿಕೆ ನೀಡಿದ್ದಾರೆ.