ಅಭಿಮನ್ಯುವಿನ (Abhimanyu) ಪತ್ನಿ ವತ್ಸಲಾ (Vatsala) ಬಲರಾಮನ (Balarama) ಮಗಳು. ದುರ್ಯೋಧನನ ಮಗ ಲಕ್ಷಣನನ್ನು ವತ್ಸಲಾ ಮದುವೆಯಾಗಬೇಕೆಂದು ಬಲರಾಮ ಬಯಸಿದ್ದನು. ಆದರೆ ಅಭಿಮನ್ಯು ಮತ್ತು ವತ್ಸಲಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
ಅಭಿಮನ್ಯು, ತನ್ನ ಸಹೋದರ ಘಟೋತ್ಕಚನ ಸಹಾಯ ತೆಗೆದುಕೊಂಡು ಲಕ್ಷಣನನ್ನು ಎದುರಿಸಿ,ವತ್ಸಲಾಳನ್ನು ವರಿಸಿದನು. ಈ ಎಲ್ಲದರಿಂದ ಲಕ್ಷಣ ಅಸಮಾಧಾನಗೊಂಡು, ತಾನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು.
ಕುರುಕ್ಷೇತ್ರ ಯುದ್ಧದಲ್ಲಿ ತನ್ನ ತಂದೆಗೆ ವಿಜಯವನ್ನು ದೊರಕಿಸಲು ಅರ್ಜುನ ಮತ್ತು ಉಲೂಪಿ (ನಾಗ ರಾಜಕುಮಾರಿ)ಯ ಪುತ್ರ ಐರಾವಣ, ಕಾಳಿ ದೇವಿಗೆ ತನ್ನನ್ನು ಅರ್ಪಣೆ ಮಾಡಿಕೊಂಡ. ಆದರೆ ಅವನು ಸಾಯುವ ಮುನ್ನ ಒಂದು ಹುಡುಗಿಯನ್ನು ಮದುವೆಯಾಗಲು ಬಯಸಿದನು.
ಇದನ್ನರಿತ ಶ್ರೀಕೃಷ್ಣನು, ಮೋಹಿನಿಯ ರೂಪವನ್ನು ಪಡೆದುಕೊಂಡು, ಐರಾವಣನನ್ನು ಮದುವೆಯಾಗಿ ಅವ ಮರಣಿಸಿದ ನಂತರ ವಿಧವೆಯಂತೆ ಕಣ್ಣೀರಿಟ್ಟನಂತೆ..!
(ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)