ದೊಡ್ಡಬಳ್ಳಾಪುರ; ದ್ವಿಚಕ್ರ ವಾಹನ ಸವಾರನ ರಕ್ಷಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಪಲ್ಟಿ ಹೊಡೆದಿರುವ ಘಟನೆ (Accident) ತಾಲೂಕಿನ ಅರಳು ಮಲ್ಲಿಗೆ ಸಮೀಪದ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.
ನೆಲಮಂಗಲದಿಂದ ವಿಜಯಪುರದ ಕಡೆದ ಹಾರ್ಡ್‌ವೇರ್ ಸರಕಗಳನ್ನು ತುಂಬಿಕೊಂಡು ಗೂಡ್ಸ್ ವಾಹನ ತೆರಳುತ್ತಿತ್ತು ಎನ್ನಲಾಗಿದೆ.
ಈ ವೇಳೆ ಅರಳುಮಲ್ಲಿಗೆ ಪೆಟ್ರೋಲ್ ಬಂಕ್ ಬಳಿ ಏಕಾಏಕಿ ಅಡ್ಡಬಂದ ದ್ವಿಚಕ್ರ ವಾಹನ ಸವಾರನ ರಕ್ಷಿಸಲು ಮುಂದಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ ಹೊಡೆದಿದೆ.
ಘಟನೆಯಲ್ಲಿ ಗೂಡ್ಸ್ ವಾಹನ ಚಾಲಕನಿಗೆ ತೀವ್ರವಾದ ಪೆಟ್ಟಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.