ಬೆಂಗಳೂರು: ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಇಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸುವ ಮೂಲಕ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದರು.
ಸಿಇಟಿ ಪರೀಕ್ಷೆಗೆ 3.11 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಆನ್ ಲೈನ್ ಮೂಲಕವೂ ಪರೀಕ್ಷೆಯ ಫಲಿತಾಂಶ ತಿಳಿಯಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಪೋರ್ಟಲ್ https://cetonline.karnataka.gov.in/kea ಗೆ ಹೋಗಿ.
ಮುಖಪುಟದಲ್ಲಿ “KCET ಫಲಿತಾಂಶಗಳು 2024” ಎಂದು ಲೇಬಲ್ ಮಾಡಲಾದ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ ನೋಡಬಹುದಾಗಿದೆ.
ಆದರೆ ತಾಂತ್ರಿಕ ದೋಷದಿಂದಾಗಿ ಅನೇಕ ಕಡೆಗಳಲ್ಲಿ ಪಲಿತಾಂಶ ನೋಡಲು ಸಾಧ್ಯವಾಗುತ್ತಿಲ್ಲ.
ವಿದ್ಯಾರ್ಥಿಗಳು ಫಲಿತಾಂಶ ನೋಡಲು ಮುಂದಾದರೆ (Server Error, The Service is unavailable) ಎಂದು ತೋರಿಸುತ್ತಿದೆ.
ಇದರಿಂದಾಗಿ ಫಲಿತಾಂಶ ನೋಡಲು ಕಾತುರದಿಂದ ಕಾಯ್ದಿದ್ದ ವಿದ್ಯಾರ್ಥಿಗಳು, ಮತ್ತೆ ಕಾಯುವಂತಾಗಿದೆ.