ನವದೆಹಲಿ; ಮಾಜಿ ಮಾಡೆಲ್ ಮತ್ತು ಬಹುಭಾಷಾ ನಟ ಮುಕುಲ್ ದೇವ್ (Mukul Dev) ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆಂದು ಮಿತ್ರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಉಪೇಂದ್ರ ನಟನೆಯ ರಜಿನಿ ಸೇರಿದಂತೆ ತೆಲುಗು, ಹಿಂದಿ, ಪಂಜಾಬಿ ಸೇರಿದಂತೆ ಭಾರತೀಯ ಸಿನಿಮಾ ಹಾಗೂ ದೂರದರ್ಶನದಾದ್ಯಂತ ತಮ್ಮ ಅಭಿನಯಕ್ಕೆ ಹೆಸರುವಾಸಿಯಾದ ದೇವ್ ಭಾರತೀಯ ಮನರಂಜನಾ ಉದ್ಯಮದಲ್ಲಿ ಪರಿಚಿತ ಮುಖವಾಗಿದ್ದರು.
ಅವರು 1996 ರಲ್ಲಿ ಮಮ್ಕಿನ್ ಎಂಬ ಟಿವಿ ಸರಣಿಯೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅದೇ ವರ್ಷ ದಸ್ತಕ್‌ನಲ್ಲಿ ಸುಶ್ಮಿತಾ ಸೇನ್ ಅವರೊಂದಿಗೆ ನಟಿಸಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.
ಇತ್ತೀಚಿನ ವರ್ಷಗಳಲ್ಲಿ ಅವರು ಸನ್ ಆಫ್ ಸರ್ದಾರ್, ಆರ್… ರಾಜ್‌ಕುಮಾರ್ ಮತ್ತು ಜೈ ಹೋ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು.
ಮುಖುಲ್ ದೇವ್ ಅಗಲಿಕೆಗೆ ಅಭಿಮಾನಿಗಳು, ಸಹ ಕಲಾವಿದರು, ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.