Harithalekhani story: ಹಿಂದೂ ಧರ್ಮದ ಎರಡು ಪ್ರಮುಖ ಮಹಾಕಾವ್ಯಗಳಲ್ಲಿ ಮಹಾಭಾರತವೂ ಒಂದು. ಮಹಾಭಾರತದ ನಿರೂಪಣೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದ ಕಥೆಯನ್ನು ಒಳಗೊಂಡಿದೆ.
ಇದನ್ನು ಹೊರತುಪಡಿಸಿ ಹೆಚ್ಚು ಪುರಾಣ ಕಥೆಗಳು ಹಾಗೂ ಬೋಧನೆಗಳು ಮಹಾಭಾರತದಲ್ಲಿ ಅಡಕವಾಗಿದೆ. ಇಲ್ಲಿ ಕಂಡುಬರುವ ಕಥೆಗಳನ್ನು ಬೇರೆ ಗ್ರಂಥಗಳಲ್ಲೂ ಕಾಣಬಹುದು, ಆದರೆ ಇಲ್ಲಿ ಕಂಡುಬರದ ಕಥೆಗಳನ್ನು ಬೇರೆಲ್ಲಿಯೂ ನೋಡಲಾರೆವು. ಇಂತಹ ಈ ಮಹಾನ್ ಗ್ರಂಥದಿಂದ ಆಯ್ದ ನಿಮಗೆ ಮತ್ತೊಂದು ಅಪರಿಚಿತವಾದ ಕತೆಗಳನ್ನು ತಿಳಿಯೋಣ.
ಭೀಮನ ಭುಜಬಲದ ಪರಾಕ್ರಮದಿಂದ ಸಾವಿನ ನಿರೀಕ್ಷೆಯಲ್ಲಿದ್ದ ದುರ್ಯೋಧನ, ಯುದ್ಧಭೂಮಿಯಲ್ಲಿ ನಿಶ್ಚೇಚಿತನಾಗಿ ಮಲಗಿದ್ದನು. ಅವನನ್ನು ಉಳಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವೆಂದು ತಿಳಿಯಿತು.
ಅವನ ಅವಸ್ಥೆಯನ್ನು ನೋಡಿದ ಕೃಷ್ಣ, “ನಿನ್ನ ಮನಸ್ಸನ್ನು ಆಕ್ರಮಿಸಿರುವ ಸಮಸ್ಯೆಗಳು ನನಗೆ ತಿಳಿದಿದೆ. ನಾನು ಅವುಗಳನ್ನು ಪರಿಹರಿಸುತ್ತೇನೆ” ಎಂದು ಹೇಳಿದನು.
ಕೃಷ್ಣ ಗುರುತಿಸಿದ ಸಮಸ್ಯೆಗಳೆಂದರೆ, ಹಸ್ತಿನಾಪುರದ ಸುತ್ತಲೂ ಕೋಟೆ ನಿರ್ಮಿಸದಿರುವುದು, ಯುದ್ಧದಲ್ಲಿ ಹೋರಾಡಲು ವಿದುರನ ಮನವೊಲಿಸದಿರುವುದು, ದ್ರೋಣಾಚಾರ್ಯನ ಮರಣದ ನಂತರ ಅಶ್ವಥಾಮನನ್ನು ಸೇನಾಧಿಪತಿ ಆಗಿ ಮಾಡದಿರುವುದು.
ಇದನ್ನು ಕೇಳಿದ ದುರ್ಯೋಧನ, ಕರ್ಣನ ನೆನೆದು ಕೆಲವೇ ನಿಮಿಷಗಳಲ್ಲಿ ತನ್ನ ದೇಹವನ್ನು ತೊರೆದನು.
(ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)