ದೊಡ್ಡಬಳ್ಳಾಪುರ: ತುರ್ತು ಸಂದರ್ಭಗಳಲ್ಲಿ ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಂಬ್ಯುಲೆನ್ಸ್ ಪೈಲಟ್‌ಗಳ (Ambulance drivers) ಪಾತ್ರ ಮಹತ್ವದ್ದಾಗಿದೆ.
ಈ ಹಿನ್ನೆಲೆಯಲ್ಲಿ ಮೇ.27 ರಂದು ರಾಷ್ಟ್ರೀಯ ಆಂಬ್ಯುಲೆನ್ಸ್ ಪೈಲಟ್ಸ್ ದಿನಾಚರಣೆ ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆ ಅವರಣದಲ್ಲಿ ರಾಷ್ಟ್ರೀಯ ಆಂಬ್ಯುಲೆನ್ಸ್ ಪೈಲಟ್ಸ್ ದಿನಾಚರಣೆಯನ್ನು ಆಚರಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ 108′ ಆಂಬ್ಯುಲೆನ್ಸ್ ಕಾರ್ಯನಿರ್ವಾಹಕ ನಿರಂಜನ್, ಜಿಲ್ಲಾ ಮುಖ್ಯಸ್ಥ ಕಪಿಲ್, ಪೈಲೆಟ್‌ಗಳಾದ ನಾಗರಾಜು, ಬುಡೇನ್, ಮಂಜುನಾಥ್, ರಫಿಕ್, ಸತೀಶ್, ಗಂಗಾಧರ್, ರಮಾರೂಡ, ವೆಂಕಟಾಚಲ ಮತ್ತಿತರರಿದ್ದರು.