ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ಸಮೀಪದ ಬಂಡೇಪಾಳ್ಯ ಕೆಳಗಿನ ಜೂಗಾನಹಳ್ಳಿ ದೇವರಬೆಟ್ಟದ ವಿಶ್ವ ಶನೇಶ್ವರಸ್ವಾಮಿ (Vishwa Shaneshwara Swamy) ದೇವಾಲಯದಲ್ಲಿ ಶನೇಶ್ವರ ಜಯಂತಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯದಲ್ಲಿ ಮಹಾಭಿಷೇಕ ಅಲಂಕಾರ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.
ಜೂ.1ರಂದು ನಡೆಯಲಿರುವ ರಥೋತ್ಸವದ ಅಂಗವಾಗಿ ಅಂಕರಾರ್ಪಣೆ, ಕಳಸ ಸ್ಥಾಪನೆ, ಧ್ವಜಾರೋಹಣ ನಡೆಯಿತು.
ಅಂದು ಅಭಿಷೇಕ, ಜೇಷ್ಠದೇವಿ ನೀಲಾದೇವಿ ಸಮೇತ ವಿಶ್ವಶನೇಶ್ವರ ಸ್ವಾಮಿ ಕಲ್ಯಾಣೋತ್ಸವ, ಶೇಷವಾಹನೋತ್ಸವ, ಪ್ರಕಾರೋತ್ಸವ ಹಾಗೂ ಮಧ್ಯಾಹ್ನ 12 ಗಂಟೆಗೆ ಅಭಿಜಿನ್ ಶುಭ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.
ಇದೇ ದಿನ ಸಂಜೆ ವಸಂತೋತ್ಸವ, ಉಯಲೋ ತ್ಸವ, ಶಯನೋತ್ಸವ ಆಯೋಜಿಸಲಾಗಿದೆ ಎಂದು ದೇವಾಲಯದ ಧರ್ಮದರ್ಶಿ ಶ್ರೀಧರ್ ಶರ್ಮ ಗುರೂಜಿ ತಿಳಿಸಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						