ನವದೆಹಲಿ; ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಹತ್ಯೆಗೈದ ಪಾಪಿ ಪಾಕಿಸ್ತಾನದ ಉಗ್ರರ ವಿರುದ್ಧ ಪ್ರತಿಕಾರವಾಗಿ ಭಾರತೀಯ ಸೇನೆ (Indian Army) ಆಪರೇಷನ್ ಸಿಂಧೂರ (Operation Sindoora) ಕಾರ್ಯಾಚರಣೆ ಆರಂಭಿಸಿ, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಮರ್ಮಾಘಾತವನ್ನು ಉಂಟುಮಾಡಿತ್ತು.
ಆದರೆ ಕೇಂದ್ರದ ಮೋದಿ ಸರ್ಕಾರ (Modi government) ಭಾರತೀಯ ಸೇನೆ ಆಪರೇಷನ್ ಸಿಂಧೂರದ (Operation Sindoora) ಮೂಲಕ ದಿಟ್ಟ ಹೋರಾಟ ನಡೆಸುತ್ತಿದ್ದರೆ, ಇತ್ತ ರಾತ್ರೋರಾತ್ರಿ ಕದನ ವಿರಾಮ (Ceasefire) ಘೋಷಣೆ ಮಾಡಿಬಿಟ್ಟಿತು.
ಕೇಂದ್ರದ ಸರ್ಕಾರದ ಈ ಏಕಾಏಕಿ ನಿಲುವು ದೇಶವಾಸಿಗಳಲ್ಲಿ, ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿ, ಮೋದಿ ಸರ್ಕಾರ ವಿರೋಧ ಪಕ್ಷಗಳಿಂದ ವಾಗ್ದಾಳಿ ಎದುರಿಸಿದೆ.
ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಮಿತ್ರ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಗಳು ಕೇಂದ್ರ ಸರ್ಕಾರವನ್ನು ಮಗ್ಗಲ ಮುಳ್ಳಾಗಿ ಕಾಡುತ್ತಿದೆ. ಪದೇ ಪದೆ ಸುದ್ದಿಗೋಷ್ಠಿ ನಡೆಸಿ, ಭಾರತ-ಪಾಕ್ ನಡುವೆ ಯುದ್ದ ನಿಲ್ಲಲು ನಾನೆ ಕಾರಣ ಎಂಬಂತೆ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ.
ಇದು ಭಾರತದ ಸಾರ್ವಭೌಮತ್ವ, ರಕ್ಷಣೆ ವಿಚಾರದಲ್ಲಿ ಟ್ರಂಪ್ ಮೂಗು ತೂರಿಸಲು ಅವಕಾಶ ಕೊಟ್ಟವರು ಯಾರು..? ಆತನ ವ್ಯಾಪಾರ ವಹಿವಾಟು ಆಸೆ ತೋರಿಸಿದ್ದು ಯಾರಿಗೆ..? ಎಂಬ ಪ್ರಶ್ನೆಗೆ ಕಾರಣವಾಗಿ ವಿರೋಧ ಪಕ್ಷಗಳ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರಿಸಲಾಗದ ಸ್ಥಿತಿ ಎದುರಾಗಿದೆ.
ಇನ್ನೂ ನಿನ್ನೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪರೇಷನ್ ಸಿಂಧೂರ ನಿಂತಿಲ್ಲ, ಇದು ವಿರಾಮವಷ್ಟೇ ಎಂದಿದ್ದಾರೆ. ಆದರೆ ಬೆನ್ನಲ್ಲೇ ಇಂದು ಕೂಡ ಟ್ರಂಪ್ ಮತ್ತೆ ಮೂಗು ತೂರಿಸಿದ್ದು, ನನ್ನಿಂದ ಭಾರತ-ಪಾಕ್ ಇಬ್ಬರೂ ಈಗ ಚೆನ್ನಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
#WATCH | US President Donald Trump says, "I think the deal I'm most proud of is the fact that we're dealing with India, we're dealing with Pakistan, and we were able to stop potentially a nuclear war through trade as opposed through bullets. You know, normally they do it through… pic.twitter.com/63wkY2O054
— ANI (@ANI) May 31, 2025
ಸುದ್ದಿಗಾರರೊಂದಿಗೆ ಮಾತನಾಡಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಭಾರತದೊಂದಿಗೆ ವ್ಯವಹರಿಸುತ್ತಿದ್ದೇವೆ, ಪಾಕಿಸ್ತಾನದೊಂದಿಗೆ ವ್ಯವಹರಿಸುತ್ತಿದ್ದೇವೆ ಮತ್ತು ಸಂಭಾವ್ಯ ಪರಮಾಣು ಯುದ್ಧವನ್ನು ವ್ಯಾಪಾರದ ಮೂಲಕ ನಿಲ್ಲಿಸಲು ಸಾಧ್ಯವಾಯಿತು ಎಂಬ ಅಂಶದ ಬಗ್ಗೆ ನನಗೆ ಅತ್ಯಂತ ಹೆಮ್ಮೆಯಿದೆ ಎಂದು ನಾನು ಭಾವಿಸುತ್ತೇನೆ.
ಸಾಮಾನ್ಯವಾಗಿ ಅವರು ಅದನ್ನು ಗುಂಡುಗಳ ಮೂಲಕ ಮಾಡುತ್ತಾರೆ. ನಾವು ಅದನ್ನು ವ್ಯಾಪಾರದ ಮೂಲಕ ಮಾಡುತ್ತೇವೆ. ಹಾಗಾಗಿ ನನಗೆ ಅದರ ಬಗ್ಗೆ ತುಂಬಾ ಹೆಮ್ಮೆ ಇದೆ.
ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಪಾಕಿಸ್ತಾನ ಮತ್ತು ಭಾರತದ ನಡುವೆ ನಮಗೆ ತುಂಬಾ ತೀವ್ರರೂಪದ ಸಂಭಾವ್ಯ ಯುದ್ಧ ನಡೆಯುತ್ತಿತ್ತು. ಮತ್ತು ಈಗ, ನೀವು ನೋಡಿದರೆ, ಅವರು ಚೆನ್ನಾಗಿದ್ದಾರೆ ಎಂದಿದ್ದಾರೆ.