ದೊಡ್ಡಬಳ್ಳಾಪುರ: ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದವರಾದ ನಿವೃತ್ತ ಎಸಿಪಿ ಕನಕಕುಮಾರ್ ಬಿ.ಸಿ (Kanakakumar B.C) ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಹೃದಯ ಸಂಬಂಧಿ ಕಾರಣದಿಂದ ಇಂದು ಇಹಲೋಕವನ್ನು ತ್ಯಜಿಸಿದರು ಎಂದು ತಿಳಿದು ಬಂದಿದೆ.
ಕನಕಕುಮಾರ್ ಅವರು ಮಡದಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಚಿಕ್ಕಬಳ್ಳಾಪುರ, ಯಲಹಂಕ, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಕನಕಕುಮಾರ್ ಅವರು ಜನಸ್ನೇಹಿ ಅಧಿಕಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಇಂದು ಸಂಜೆ 7 ಗಂಟೆಯ ವರೆಗೆ ಯಲಹಂಕ ಡಿಯೋ ರೆಸಿಡೆನ್ಸಿ ಲೇಔಟ್ನಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ (ಜೂ.14)ರಂದು ಬೆಳಗ್ಗೆ 11ಗಂಟೆಗೆ ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ದತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.