ದೊಡ್ಡಬಳ್ಳಾಪುರ: ನಗರ ಹಾಗೂ ಹೊರವಲಯದಲ್ಲಿರುವ ಶಾಲೆ – ಕಾಲೇಜು ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ಪುಂಡರ ಬೈಕ್ ವ್ಹೀಲಿಂಗ್ (Bike wheeling) ಹಾವಳಿಗೆ ಕಡಿವಾಣ ಹಾಕಬೇಕೆಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಪದಾಧಿಕಾರಿಗಳು ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಮುಖಂಡರು, ದೊಡ್ಡಬಳ್ಳಾಪುರ ಪ್ರೌಢಶಾಲೆ, ಪಿಯುಸಿ ಕಾಲೇಜು ಬಳಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಬೈಕ್ ವ್ಹೀಲಿಂಗ್ ಮಾಡುತ್ತಾ ಹೆಣ್ಣು ಮಕ್ಕಳಿಗೆ ಹಿಂಸೆ ಹೆಚ್ಚಾಗಿದೆ. ಹೆಣ್ಣು ಮಕ್ಕಳು ಈ ಹಿಂಸೆಯನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದಾರೆ.
ಕೂಡಲೆ ಪೊಲೀಸ್ ಅಧಿಕಾರಿಗಳು ಶಾಲೆ- ಕಾಲೇಜುಗಳ ಬಳಿ ಅನಾವಶ್ಯಕವಾಗಿ ಬೀಡು ಬಿಡುವ, ಬೈಕ್ ವ್ಹೀಲಿಂಗ್ ಮಾಡುವ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ
ಪ್ರಮುಖವಾಗಿ ಬೆಳಿಗ್ಗೆ 8:30ರಿಂದ 10ಗಂಟೆಯವರೆಗೆ, ಮಧ್ಯಾನ್ಹ 3:30 ರಿಂದ ಸಂಜೆ 5:00 ಗಂಟೆಯವರೆಗೆ ಪೋಲೀಸ್ ಸಿಬ್ಬಂದಿಗಳನ್ನು ಈ ವ್ಯಾಪ್ತಿಯಲ್ಲಿ ಗಸ್ತು ತಿರುಗುವಂತೆ ನೇಮಿಸಬೇಕೆಂದರು.
ಈ ವೇಳೆ ಮಹಿಳಾ ಘಟಕದ ಪದಾಧಿಕಾರಿಗಳಾದ ಕುಮುದಾ, ಶಶಿಕಲಾ, ರೇಷ್ಮಾ ಕಾನಂ, ಪದ್ಮ, ರಾಗಿಣಿ, ನಾಗರತ್ನಮ್ಮ, ನಾಗವೇಣಿ, ಮುಖಂಡರಾದ ಪ್ರವೀಣ್ ಮತ್ತು ಮಂಜುನಾಥ್ ಇದ್ದರು.