ಮೆಹಬೂಬ್ ನಗರ; ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಪತ್ನಿ ತನ್ನ ಗಂಡನನ್ನು ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ (Murder) ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ಮೆಹಬೂಬ್ ನಗರದ ಜೋಗುಳಾಂಬಾ ಗದ್ವಾಲ್‌ನಲ್ಲಿ ನಡೆದಿದೆ.
ಜೋಗುಳಾಂಬಾ ಗದ್ವಾಲ್ ಜಿಲ್ಲೆಯ ತೇಜೇಶ್ವರ್ (32 ವರ್ಷ) ಮೃತ ದುರ್ದೈವಿ. ಐಶ್ವರ್ಯ ಕೊಲೆ ಆರೋಪಿ ಪತ್ನಿ ಎಂದು ಗುರುತಿಸಲಾಗಿದೆ.
ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ, ಕುಟುಂಬ ಸದಸ್ಯರು ಈ ವರ್ಷದ ಫೆಬ್ರವರಿ 13 ರಂದು ಆಂಧ್ರ ಪ್ರದೇಶದ ಕರ್ನೂಲ್‌ನ ಐಶ್ವರ್ಯ ಅವರನ್ನು ವಿವಾಹವಾಗಲು ನಿಶ್ಚಯಿಸಿದ್ದರು.
ಆದರೆ ಮದುವೆಗೆ ಐದು ದಿನಗಳ ಮೊದಲೇ ಯುವತಿ ಐಶ್ವರ್ಯ ನಾಪತ್ತೆಯಾಗಿದ್ದರು. ಕರ್ನೂಲ್‌ನ ಪ್ರಮುಖ ಬ್ಯಾಂಕಿನ ಉದ್ಯೋಗಿಯೊಂದಿಗೆ ಆಕೆಗೆ ಸಂಬಂಧವಿದ್ದು, ಅವರ ಬಳಿಗೆ ಹೋಗಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಐಶ್ವರ್ಯ ಫೆಬ್ರವರಿ 16 ರಂದು ಮನೆಗೆ ಮರಳಿದ್ದಾಳೆ.
ಈ ವೇಳೆ ತೇಜೇಶ್ವರ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದು, ತಾನು ಯಾರನ್ನೂ ಪ್ರೀತಿಸುತ್ತಿಲ್ಲ ಮತ್ತು ವರದಕ್ಷಿಣೆ ನೀಡಲು ತನ್ನ ತಾಯಿ ಎದುರಿಸುತ್ತಿರುವ ತೊಂದರೆಯನ್ನು ಸಹಿಸಲಾರದೆ ತನ್ನ ಸ್ನೇಹಿತನ ಮನೆಗೆ ಹೋಗಿದ್ದಾಳೆ ಎಂದು ಹೇಳಿದ್ದಳಂತೆ
ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅತ್ತಿದ್ದಾಳೆ. ಇದರಿಂದ, ಐಶ್ವರ್ಯ ಅವರನ್ನು ನಂಬಿದ ತೇಜೇಶ್ವರ್ ಅವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ.
ಆತನ ಹೆತ್ತವರಿಗೆ ಇದು ಇಷ್ಟವಾಗದಿದ್ದರೂ, ಅವರು ಆಕೆಯ ಮನವೊಲಿಸಿ ಮೇ 18 ರಂದು ಐಶ್ವರ್ಯಳನ್ನು ಮದುವೆಯಾದರು.
ಮದುವೆ ನಂತರ ಐಶ್ವರ್ಯ ತನ್ನ ಗಂಡನನ್ನು ನಿರ್ಲಕ್ಷಿಸಿ ಯಾವಾಗಲೂ ಫೋನ್‌ನಲ್ಲಿ ಮಾತನಾಡುತ್ತಿದ್ದಳು, ಆದ್ದರಿಂದ ಮದುವೆಯಾದ ಎರಡನೇ ದಿನದಿಂದಲೇ ಇಬ್ಬರಿಗೂ ಸಮಸ್ಯೆಗಳು ಶುರುವಾಗಿದೆ. ಇದರ ನಡುವೆ, ಜೂನ್ 17 ರಂದು ತೇಜೇಶ್ವರ್ ಏಕಾಏಕಿ ಕಾಣೆಯಾದಾಗ.. ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ
ಪೊಲೀಸರು ಹುಡುಕಾಟದ ಅರಂಭಿಸಿದಾಗ, ತೇಜೇಶ್ವರ್ ಅವರ ಶವ ಆಂಧ್ರ ಪ್ರದೇಶದ ಪನ್ಯಂ ಪೊಲೀಸರಿಗೆ ಪತ್ತೆಯಾಗಿದೆ. ಈ ಕುರಿತು ತೇಜೇಶ್ವರ್ ಅವರ ಕುಟುಂಬ ಸದಸ್ಯರು ಐಶ್ವರ್ಯ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು, ಪೊಲೀಸರು ಐಶ್ವರ್ಯ ಮತ್ತು ಅವರ ತಾಯಿ ಸುಜಾತಾ ಅವರನ್ನು ಪ್ರಶ್ನಿಸಿದಾಗ, ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು.
ಐಶ್ವರ್ಯ ಅವರ ತಾಯಿ ಸುಜಾತಾ ಕರ್ನೂಲ್‌ನ ಪ್ರಮುಖ ಬ್ಯಾಂಕಿನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಾರೆ. ಅದೇ ಬ್ಯಾಂಕಿನ ಉದ್ಯೋಗಿಯೊಂದಿಗೆ ಅವರು ವಿವಾಹೇತರ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ಉದ್ಯೋಗಿ ಕ್ರಮೇಣ ಐಶ್ವರ್ಯ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರು ಎಂದು ತಿಳಿದುಬಂದಿದೆ. ತೇಜೇಶ್ವರ್ ಅವರನ್ನು ಮದುವೆಯಾದ ನಂತರ ಐಶ್ವರ್ಯ ಬ್ಯಾಂಕ್ ಉದ್ಯೋಗಿಯೊಂದಿಗೆ 2,000 ಬಾರಿ ಮಾತನಾಡಿದ್ದಾರೆ ಎಂದು ಪೊಲೀಸರು ಕರೆ ಡೇಟಾದಲ್ಲಿ ಪತ್ತೆಹಚ್ಚಿದ್ದಾರೆ.
ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತೇಜೇಶ್ವರ್ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದಾಗಿ ಭರವಸೆ ನೀಡಿ ಅವರನ್ನು ಕೊಲೆ ಮಾಡಲು ಅವರು ಯೋಜನೆ ರೂಪಿಸಿದ್ದರು ಎಂದು ವರದಿಯಾಗಿದೆ.
ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಬ್ಯಾಂಕ್ ಸಿಬ್ಬಂದಿ ತೇಜೇಶ್ವರ್ ಅವರನ್ನು ಕೊಲ್ಲಲು ಕೆಲವರಿಗೆ ಸುಪಾರಿ ನೀಡಿದ್ದಲ್ಲದೆ, ಅವರ ಚಾಲಕನನ್ನು ಅವರೊಂದಿಗೆ ಕಳುಹಿಸಿದ್ದರಂತೆ.
ಪೂರ್ವ ಯೋಜನೆಯಂತೆ, ಜೂನ್ 17 ರಂದು ಕೆಲವರು ತೇಜೇಶ್ವರ್ ಅವರನ್ನು ಭೇಟಿಯಾಗಿ, 10 ಎಕರೆ ಜಮೀನು ಖರೀದಿಸುತ್ತಿರುವುದಾಗಿ ಹೇಳಿ ಜಮೀನು ನೋಡಲು ಕಾರಿನಲ್ಲಿ ಗದ್ವಾಲ್‌ಗೆ ಕರೆದೊಯ್ದಿದ್ದಾರೆ.
ಈ ವೇಳೆ ಕಾರಿನಲ್ಲಿಯೇ ತೇಜೇಶ್ವರ್ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿ, ಅವರ ಕತ್ತು ಸೀಳಿ, ಅವರ ಶವವನ್ನು ಪಣ್ಯಂ ಬಳಿಯ ಸುಗಳಿಮೆಟ್ಟುವಿನಲ್ಲಿ ಎಸೆದು ಕಿರಾತಕರು ಪರಾರಿಯಾಗಿದ್ದಾರೆ.
ಇನ್ನೂ ಈ ಹತ್ಯೆಯ ಪ್ರಮುಖ ಆರೋಪಿ ಬ್ಯಾಂಕ್ ಉದ್ಯೋಗಿ ಪ್ರಸ್ತುತ ಪರಾರಿಯಾಗಿದ್ದಾನೆ. ಈ ಮಧ್ಯೆ, ಪೊಲೀಸರು ಈಗಾಗಲೇ ಐಶ್ವರ್ಯ ಮತ್ತು ಸುಜಾತಾ ಅವರನ್ನು ಬಂಧಿಸಿದ್ದಾರೆ.