Ghost Town Dhanushkodi

ಹರಿತಲೇಖನಿ ದಿನಕ್ಕೊಂದು ಕಥೆ: ಘೋಸ್ಟ್ ಟೌನ್ ಧನುಷ್ಕೋಡಿ

Harithalekhani; ಭಾರತದ ದಕ್ಷಿಣ-ಪೂರ್ವ ದಿಕ್ಕಿನ ತುದಿಯಲ್ಲಿರುವ ಹಿಂದೂಗಳ ಒಂದು ಪವಿತ್ರ ತೀರ್ಥಕ್ಷೇತ್ರವೆಂದರೆ ಧನುಷ್ಕೋಡಿ (Dhanushkodi) ! ಈ ಸ್ಥಾನವು ಪವಿತ್ರ ರಾಮಸೇತುವಿನ ಉಗಮಸ್ಥಾನವಾಗಿದೆ.

ಕಳೆದ 50 ವರ್ಷಗಳಿಂದ ಹಿಂದೂಗಳ ಈ ಪವಿತ್ರ ತೀರ್ಥಕ್ಷೇತ್ರದ ಸ್ಥಿತಿ ಧ್ವಂಸಗೊಂಡ ಒಂದು ನಗರದಂತಾಗಿದೆ. 22 ಡಿಸೆಂಬರ್ 1964 ರಂದು ಈ ನಗರವು ಒಂದು ಚಂಡಮಾರುತಕ್ಕೆ ತುತ್ತಾಗಿ ಧ್ವಂಸವಾಯಿತು.

ಅನಂತರ ಕಳೆದ 50 ವರ್ಷಗಳಲ್ಲಿ ಈ ತೀರ್ಥಕ್ಷೇತ್ರವನ್ನು ಪುನರುಜ್ಜೀವನ ಮಾಡುವುದಿರಲಿ, ಸರಕಾರ ಈ ನಗರವನ್ನು ‘ಭೂತಗಳ ನಗರ’ (ghost town) ಎಂದು ಘೋಷಿಸಿ ಹೀಯಾಳಿಸಿತು.

ಅದು ಭಾರತದ ಭಯಾನಕ ಸ್ಥಳ..ಅದನ್ನ ಘೋಸ್ಟ್ ಟೌನ್ ಅಂತಲೇ ಕರೀತಾರೆ.. ಪ್ರಕೃತಿಯ ಸೊಬಗಿನಿಂದ ಕೂಡಿರುವ ಸ್ಥಳ ಇವತ್ತಿಗೆ ಹಾಳು ಕೊಂಪೆಯಾಗಿದೆ..ಅದು ಧನುಷ್ಕೋಡಿ.. ರಾಮೇಶ್ವರಂ ದ್ವೀಪದ ದಕ್ಷಿಣದ ತುತ್ತತುದಿಯಲ್ಲಿರುವ ಒಂದು ಗ್ರಾಮವಾಗಿದ್ದು, ಭಾರತದ ತಮಿಳುನಾಡು ರಾಜ್ಯದ ಪೂರ್ವ ತೀರದಲ್ಲಿದೆ ..ನಮ್ಮ ಸರ್ಕಾರಕ್ಕೆ ಈ ಜಾಗವನ್ನು ಪುನರ್ ನಿರ್ಮಿಸುವ ಈರ್ಷೆ ಇಲ್ಲ..ಇಲ್ಲಿಗೆ ಪ್ರವಾಸಿಗರು ಬರುತ್ತಾರಾದರೂ ರಾತ್ರಿ ಹೊತ್ತು ಉಳಿದುಕೊಳ್ಳುವ ಧೈರ್ಯ ಮಾಡಲ್ಲ.. !

ರಾಮಸೇತು ಸೇತುವೆ ಗೊತ್ತಲ್ಲ ? ಅದು ಶುರುವಾಗೋದು ಧನುಷ್ಕೋಡಿಯಿಂದಲೆ.. ಧನುಷ್ಕೋಡಿಯು ಶ್ರೀಲಂಕಾದ ತಲೈಮನ್ನಾರ್ ನ ಪಶ್ಚಿಮದಿಂದ ಸುಮಾರು 18 ಮೈಲಿಗಳ ಅಂತರದಲ್ಲಿದೆ..

ಈ ಊರು ಭಾರತ ಮತ್ತು ಶ್ರೀಲಂಕಾಕ್ಕೆ ಕೊಂಡಿಯಂತಿದೆ..ಅವತ್ತು ರಾಮ ಲಂಕೆಗೆ ಹೋಗೋವಾಗ ಈ ಸೇತುವೆ ದಾಟಿ ಹೋಗಿದ್ದನಂತೆ.. ಈ ಧನುಷ್ಕೋಡಿ ರಾಮೇಶ್ವರಂನ ಕಟ್ಟ ಕಡೆಯ ಊರು ಎಂದು ಗುರುತಿಸಿಕೊಂಡಿದೆ

ಈ ಘಟನೆಗೆ 50 ವರ್ಷಗಳು ಪೂರ್ಣಗೊಂಡ ನಿಮಿತ್ತ ಬಂಗಾಲ, ಅಸ್ಸಾಂ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಇತ್ಯಾದಿ ರಾಜ್ಯಗಳ ಹಿಂದುತ್ವವಾದಿ ಸಂಘಟನೆಗಳ ಮುಖಂಡರ ಒಂದು ಸಮೂಹವು ಧನುಷ್ಕೋಡಿಗೆ ಭೇಟಿ ನೀಡಿತು.

ಅದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿ ಸಹ ಭಾಗವಹಿಸಿದ್ದರು. ಈ ಭೇಟಿಯಲ್ಲಿ ಗಮನಕ್ಕೆ ಬಂದಿರುವ ಧನುಷ್ಕೋಡಿಯ ಭೀಕರ ವಾಸ್ತವವನ್ನು ಈ ಲೇಖನದ ಮೂಲಕ ಮಂಡಿಸುತ್ತಿದ್ದೇನೆ.

ತಮಿಳುನಾಡು ರಾಜ್ಯದ ಪೂರ್ವದಡದಲ್ಲಿ ರಾಮೇಶ್ವರಮ್ ಈ ತೀರ್ಥಕ್ಷೇತ್ರವಿದೆ. ರಾಮೇಶ್ವರಮ್‌ನ ದಕ್ಷಿಣದಲ್ಲಿ 11 ಕಿ. ಮೀ. ದೂರದಲ್ಲಿ ಧನುಷ್ಕೋಡಿ ನಗರವಿದೆ. ಇಲ್ಲಿಂದ ಶ್ರೀಲಂಕಾ ಕೇವಲ 18 ಮೈಲು (ಸುಮಾರು 20 ಕಿ.ಮೀ.) ದೂರದಲ್ಲಿದೆ !

ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಪವಿತ್ರ ಸಂಗಮದಲ್ಲಿ ನೆಲೆಸಿದ ಕೇವಲ 50 ಗಜ (ಸುಮಾರು 150 ಅಡಿ) ಅಗಲವಿರುವ ಧನುಷ್ಕೋಡಿಯು ಮರಳಿನಿಂದ ತುಂಬಿದ ಸ್ಥಾನವಾಗಿದೆ.

ಉತ್ತರಭಾರತದಲ್ಲಿ ಕಾಶಿಗೆ ಎಷ್ಟು ಧಾರ್ಮಿಕ ಮಹತ್ವ ಇದೆಯೋ, ದಕ್ಷಿಣ ಭಾರತದಲ್ಲಿ ರಾಮೇಶ್ವರಮ್‌ಗೆ ಅಷ್ಟೇ ಮಹತ್ವ ಇದೆ. ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ರಾಮೇಶ್ವರಮ್ ಸಹ ಒಂದು ಧಾಮವಾಗಿದೆ.

ಪುರಾಣ ಇತ್ಯಾದಿ ಧಾರ್ಮಿಕ ಗ್ರಂಥಗಳಿಗನುಸಾರ ಕಾಶಿಯ ಶ್ರೀ ವಿಶ್ವೇಶ್ವರನ ಯಾತ್ರೆಯು ಶ್ರೀ ರಾಮೇಶ್ವರಮ್‌ನ ದರ್ಶನವಾಗದೆ ಪೂರ್ಣಗೊಳ್ಳುವುದಿಲ್ಲ.

ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದಲ್ಲಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಕಾಶಿಯ ತೀರ್ಥಯಾತ್ರೆಯು ಪೂರ್ಣಗೊಳ್ಳುತ್ತದೆ.

ರಾಮೇಶ್ವರಮ್ ಮತ್ತು ಧನುಷ್ಕೋಡಿ ಇವುಗಳ ಧಾರ್ಮಿಕ ಮಹಾತ್ಮೆ!

ಉತ್ತರಭಾರತದಲ್ಲಿ ಕಾಶಿಗೆ ಎಷ್ಟು ಧಾರ್ಮಿಕ ಮಹತ್ವ ಇದೆಯೋ, ದಕ್ಷಿಣ ಭಾರತದಲ್ಲಿ ರಾಮೇಶ್ವರಮ್‌ಗೆ ಅಷ್ಟೇ ಮಹತ್ವ ಇದೆ. ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ರಾಮೇಶ್ವರಮ್ ಸಹ ಒಂದು ಧಾಮವಾಗಿದೆ.

ಪುರಾಣ ಇತ್ಯಾದಿ ಧಾರ್ಮಿಕ ಗ್ರಂಥಗಳಿಗನುಸಾರ ಕಾಶಿಯ ಶ್ರೀ ವಿಶ್ವೇಶ್ವರನ ಯಾತ್ರೆಯು ಶ್ರೀ ರಾಮೇಶ್ವರಮ್‌ನ ದರ್ಶನವಾಗದೆ ಪೂರ್ಣಗೊಳ್ಳುವುದಿಲ್ಲ.

ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದಲ್ಲಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಕಾಶಿಯ ತೀರ್ಥಯಾತ್ರೆಯು ಪೂರ್ಣಗೊಳ್ಳುತ್ತದೆ.

ಧನುಷ್ಕೋಡಿಯ ಇತಿಹಾಸ ಮತ್ತು ರಾಮಸೇತುವೆಯ ಪ್ರಾಚೀನತೆ !

ರಾಮಸೇತುವಿನ ಈಚೆಗಿನ ಭಾಗಕ್ಕೆ ಧನುಷ್ಕೋಡಿ (‘ಕೋಡಿ’ ಅಂದರೆ ಧನುಷ್ಯದ ತುದಿ) ಎಂದು ಹೇಳುತ್ತಾರೆ; ಏಕೆಂದರೆ ಹದಿನೇಳುವರೆ ಲಕ್ಷ ವರ್ಷಗಳ ಹಿಂದೆ ರಾವಣನ ಲಂಕೆಗೆ (ಶ್ರೀಲಂಕಾಗೆ) ಪ್ರವೇಶ ಮಾಡಲು ಶ್ರೀರಾಮನು ತನ್ನ ‘ಕೋದಂಡ’ ಧನುಷ್ಯದ ತುದಿಯಿಂದ ಸೇತುವೆಯನ್ನು ನಿರ್ಮಿಸಲು ಈ ಸ್ಥಾನವನ್ನು ಆಯ್ದುಕೊಂಡನು.

ಅಲ್ಲಿ ರಾಮಸೇತುವಿನ ಭಗ್ನಾವಶೇಷದ ರೂಪದಲ್ಲಿ ದೊಡ್ಡ ದೊಡ್ಡ ಬಂಡೆಕಲ್ಲುಗಳು ದ್ವೀಪಗಳಂತೆ ಇಂದಿಗೂ ಕಾಣಲು ಸಿಗುತ್ತವೆ. ರಾಮಸೇತುವೆ ನಳ ಮತ್ತು ನೀಲ ಇವರ ವಾಸ್ತುಶಾಸ್ತ್ರದ ಒಂದು ಅದ್ಭುತ ಮಾದರಿಯಾಗಿದೆ.

ಈ ರಾಮಸೇತುವಿನ ಅಗಲ ಮತ್ತು ಉದ್ದ ಇವುಗಳ ಪ್ರಮಾಣ ಒಂದಕ್ಕೆ ಹತ್ತರಷ್ಟಿದೆ, ಎಂಬ ಸವಿಸ್ತಾರ ವರ್ಣನೆ ವಾಲ್ಮೀಕಿ ರಾಮಾಯಣದಲ್ಲಿದೆ. ಪ್ರತ್ಯಕ್ಷ ಅಳೆದಾಗಲೂ ಅವುಗಳ ಅಗಲ 3.5 ಕಿ. ಮೀ. ಇದ್ದು ಮತ್ತು ಉದ್ದ 35 ಕಿ.ಮೀ.ನಷ್ಟಿದೆ.

ಶ್ರೀರಾಮ-ರಾವಣರ ಮಹಾಯುದ್ಧದ ಮೊದಲು ಧನುಷ್ಕೋಡಿ ನಗರದಲ್ಲಿಯೇ ರಾವಣನ ತಮ್ಮನಾದ ವಿಭೀಷಣನು ಪ್ರಭು ರಾಮಚಂದ್ರನಿಗೆ ಶರಣಾಗಿದ್ದನು. ಶ್ರೀಲಂಕಾದ ಯುದ್ಧ ಸಮಾಪ್ತಿಯಾದ ನಂತರ ಇದೇ ನಗರದಲ್ಲಿ ಪ್ರಭು ರಾಮಚಂದ್ರನು ವಿಭೀಷಣನನ್ನು ಶ್ರೀಲಂಕಾದ ಸಾಮ್ರಾಟನೆಂದು ರಾಜ್ಯಾಭಿಷೇಕ ಮಾಡಿದ್ದನು.

ಇದೇ ಸಮಯದಲ್ಲಿ ಲಂಕಾಧಿಪತಿ ವಿಭೀಷಣನು ಪ್ರಭು ರಾಮಚಂದ್ರನಿಗೆ ‘ಭಾರತದ ಶೂರ-ಪರಾಕ್ರಮಿ ರಾಜರು ರಾಮಸೇತುವಿನ ಮೂಲಕ ಪದೇ ಪದೇ ಶ್ರೀಲಂಕಾದ ಮೇಲೆ ಆಕ್ರಮಣ ಮಾಡಿ ಶ್ರೀಲಂಕಾದ ಸ್ವಾತಂತ್ರ್ಯವನ್ನು ನಾಶ ಮಾಡುವರು. ಆದ್ದರಿಂದ ತಾವು ಈ ಸೇತುವೆಯನ್ನು ನಾಶಗೊಳಿಸಿರಿ’, ಎಂದು ಹೇಳಿದನು.

ಆಗ ತನ್ನ ಭಕ್ತನ ಪ್ರಾರ್ಥನೆಯನ್ನು ಕೇಳಿ ಕೋದಂಡಧಾರಿ ಪ್ರಭು ರಾಮಚಂದ್ರ ರಾಮಸೇತುವಿನ ಮೇಲೆ ಬಾಣ ಹೊಡೆದು ಅದನ್ನು ನೀರಿನಲ್ಲಿ ಮುಳುಗಿಸಿದನು. ಆದ್ದರಿಂದ ಈ ಸೇತುವೆ 2 – 3 ಅಡಿ ನೀರಿನ ಕೆಳಗೆ ಹೋಯಿತು. ಇಂದು ಕೂಡ ಯಾರಾದರೂ ರಾಮಸೇತುವಿನ ಮೇಲೆ ನಿಂತರೆ ಅವರ ಸೊಂಟದ ವರೆಗೆ ನೀರು ಇರುತ್ತದೆ.

ಬ್ರಿಟೀಷರ ಕಾಲದಲ್ಲಿ ಧನುಷ್ಕೋಡಿ ಒಂದು ದೊಡ್ಡ ಪಟ್ಟಣವಾಗಿತ್ತು ಹಾಗೂ ರಾಮೇಶ್ವರಮ್ ಒಂದು ಸಣ್ಣ ಗ್ರಾಮವಾಗಿತ್ತು. ಅಲ್ಲಿಂದ ಶ್ರೀಲಂಕಾಗೆ ಹೋಗಿ ಬರಲು ದೋಣಿಯ ವ್ಯವಸ್ಥೆ ಇತ್ತು.

ಆ ಕಾಲದಲ್ಲಿ ಶ್ರೀಲಂಕಾಗೆ ಹೋಗಲು ಪಾಸ್‌ಪೋರ್ಟ್ ಬೇಕಾಗಿರಲಿಲ್ಲ. ಧನುಷ್ಕೋಡಿಯಿಂದ ಥಲಾಯಿಮನ್ನಾರ (ಶ್ರೀಲಂಕಾ) ಹೀಗೆ ನೌಕೆಯ ಪ್ರವಾಸದ ಟಿಕೇಟ್ ಕೇವಲ 17 ರೂಪಾಯಿಗಳಿದ್ದವು. ಈ ನೌಕೆಗಳ ಮೂಲಕ ವ್ಯಾಪಾರಿ ವಸ್ತುಗಳ ಕೊಡುಕೊಳ್ಳುವಿಕೆಯೂ ನಡೆಯುತ್ತಿತ್ತು.

‘1793 ರಲ್ಲಿ ಅಮೇರಿಕಾದ ಧರ್ಮಸಂಸತ್ತಿಗಾಗಿ ಹೋಗಿದ್ದ ಸ್ವಾಮಿ ವಿವೇಕಾನಂದರು ಶ್ರೀಲಂಕಾದ ಮಾರ್ಗದಿಂದ ಭಾರತಕ್ಕೆ ಹಿಂತಿರುಗಿದರು. ಅವರು ಈ ಧನುಷ್ಕೋಡಿಯ ಭೂಮಿಯಲ್ಲಿಯೇ ಇಳಿದಿದ್ದರು.

1964 ರ ವರೆಗೆ ಧನುಷ್ಕೋಡಿ ಒಂದು ಪ್ರಖ್ಯಾತ ಪ್ರವಾಸೀ ಸ್ಥಳ ಹಾಗೂ ತೀರ್ಥಕ್ಷೇತ್ರವಾಗಿತ್ತು. ಭಕ್ತರಿಗಾಗಿ ಅಲ್ಲಿ ಹೊಟೇಲ್‌ಗಳು, ಬಟ್ಟೆಯ ಅಂಗಡಿಗಳು ಹಾಗೂ ಧರ್ಮಶಾಲೆಗಳಿದ್ದವು. ಆ ಸಮಯದಲ್ಲಿ ಅಲ್ಲಿ ಹಡಗು ನಿರ್ಮಾಣ ಕೇಂದ್ರ, ರೈಲು ನಿಲ್ದಾಣ, ರೈಲ್ವೆಯ ಸಣ್ಣ ಆಸ್ಪತ್ರೆ, ಅಂಚೆ ಕಚೇರಿ ಮತ್ತು ಮೀನು ಸಾಕಣೆಯಂತಹ ಕೆಲವು ಸರಕಾರೀ ಕಚೇರಿಗಳಿದ್ದವು.

1964ರ ಚಂಡಮಾರುತದ ಮೊದಲು ಚೆನೈ ಮತ್ತು ಧನುಷ್ಕೋಡಿಯ ನಡುವೆ ಮದ್ರಾಸ್ ಎಗ್ಮೋರದಿಂದ ಬೋಟ್ ಮೇಲ್ ಹೆಸರಿನ ರೈಲು ಸೇವೆ ಇತ್ತು. ಅಲ್ಲಿಂದ ದೋಣಿ ಮೂಲಕ ಶ್ರೀಲಂಕಾಗೆ ಹೋಗುವ ಪ್ರವಾಸಿಗಳಿಗೆ ಅದು ಉಪಯುಕ್ತವಾಗುತ್ತಿತ್ತು.

1964 ರಲ್ಲಿ ಭೀಕರ ಚಂಡಮಾರುತದಿಂದಾಗಿ ಧನುಷ್ಕೋಡಿ ಧ್ವಂಸವಾಯಿತು. 17 ಡಿಸೆಂಬರ್ 1964 ರಂದು ದಕ್ಷಿಣ ಅಂಡಮಾನ ಸಮುದ್ರದಲ್ಲಿ 5 ಡಿಗ್ರಿ ಪೂರ್ವದಲ್ಲಿ ಅದರ ಕೇಂದ್ರವಿತ್ತು. ಡಿಸೆಂಬರ್ 19ರಂದು ಅದು ಚಂಡಮಾರುತದ ರೂಪ ಧಾರಣೆ ಮಾಡಿ ಪ್ರಚಂಡ ವೇಗದಲ್ಲಿ ಡಿಸೆಂಬರ್ 22 ರಂದು ರಾತ್ರಿ ಗಂಟೆಗೆ 270 ಕಿ. ಮೀ. ವೇಗದಲ್ಲಿ ಶ್ರೀಲಂಕಾವನ್ನು ದಾಟಿಕೊಂಡು ಅದು ಧನುಷ್ಕೋಡಿಯ ತೀರದಲ್ಲಿ ಬಂದು ಅಪ್ಪಳಿಸಿತು.

ಈ ಚಂಡಮಾರುತದ ಜೊತೆಗೆ 20 ಅಡಿಗಳಷ್ಟು ಎತ್ತರದ ತೆರೆ ಧನುಷ್ಕೋಡಿ ನಗರದ ಪೂರ್ವದಿಕ್ಕಿನಲ್ಲಿರುವ ಪವಿತ್ರ ಸಂಗಮದ ಮೇಲಿಂದ ನಗರದ ಮೇಲೆ ಆಕ್ರಮಣ ಮಾಡಿ ಸಂಪೂರ್ಣ ಧನುಷ್ಕೋಡಿ ನಗರವನ್ನು ನಾಶಗೊಳಿಸಿತು.

ಕೃಪೆ: ಶ್ರೀ ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿ

ಆಧಾರ: ಸಾಪ್ತಾಹಿಕ ಸನಾತನ ಪ್ರಭಾತ

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!