ದೊಡ್ಡಬಳ್ಳಾಪುರ; ಸ್ವಯಂ ರಕ್ಷಣೆಯ ಕ್ರೀಡೆಯಾದ ಟೇಕ್ವಾಂಡೋ ನಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆ (MSV Public School) 7ನೇ ತರಗತಿ ಪೂರ್ವಿಕ್ ಗೌಡ ಆರ್ ‘ಇಂಡಿಯಾ ಬುಕ್ ಆಫ಼್ ರೆಕಾರ್ಡ್ಸ್ “ ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.
ಕೇವಲ 11 ವರ್ಷ 6 ತಿಂಗಳು ವಯಸ್ಸಿನ ಪೂರ್ವಿಕ್ ಗೌಡ, 6 ನಿಮಿಷಗಳಲ್ಲಿ 792 ತಡೆರಹಿತ ’ಕಟ್ ಕಿಕ್’ ಗಳನ್ನು ಮಾಡುವ ಮೂಲಕ “ಗರಿಷ್ಠ ಕಟ್ ಕಿಕ್ – ಮಕ್ಕಳ ವಿಭಾಗ” (Maximum Advanced Cut Kicks performed by a child) ದಲ್ಲಿ ತನ್ನ ಹೆಸರನ್ನು ಸ್ಥಾಪಿಸಿದ್ದಾನೆ
ವಿದ್ಯಾರ್ಥಿಗಳು ಮೊಬೈಲ್, ಇಂಟರ್ನೆಟ್ ಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡುತ್ತಿರುವ ಇಂದಿನ ಕಾಲದಲ್ಲಿ, ಸ್ವಯಂ ರಕ್ಷಣೆಯ ತಂತ್ರವಾಗಿರುವ ಟೇಕ್ವಾಂಡೋ ನಲ್ಲಿ ತನ್ನ ವಿಶಿಷ್ಠ ಸಾಧನೆಯಿಂದ ತನ್ನ ಪೋಷಕರಿಗೆ, ಗುರುಗಳಿಗೆ ಹಾಗೂ ಶಾಲೆಗೆ ಹೆಮ್ಮೆ ತಂದಿದ್ದಾನೆ.
ಇದು ಈ ಮಗುವಿನ ಕಠಿಣ ಪರಿಶ್ರಮಕ್ಕೆ ಸಂದ ಪುರಸ್ಕಾರ ಎಂದು ಸಂಸ್ಥೆಯ ಅಧ್ಯಕ್ಷರಾದ ಎ ಸುಬ್ರಮಣ್ಯ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೇವಲ ಟೇಕ್ವಾಂಡೋ ಅಲ್ಲದೇ ನೃತ್ಯ ಹಾಗೂ ಇತರ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವ ಪೂರ್ವಿಕ್ ಗೌಡ ಇತರ ಮಕ್ಕಳಿಗೆ ಮಾದರಿ ಎಂದು ಪ್ರಾಂಶುಪಾಲರಾದ ರೆಮ್ಯ ಬಿ.ವಿ ಅವರು ಹೇಳಿದ್ದಾರೆ.
ಇಂದು ಶಾಲೆ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎ ಸುಬ್ರಮಣ್ಯ, ಪ್ರಾಂಶುಪಾಲರಾದ ರೆಮ್ಯಾ ಬಿ ವಿ ಮತ್ತು ಸಿಬ್ಬಂದಿ ಮಾಸ್ಟರ್ ಪೂರ್ವಿಕ್ ಗೌಡ ಆರ್. ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.