ತ್ರಿಶೂರ್: ಕೇರಳದ ಶಾಲೆಗಳಲ್ಲಿ ಹೊಸ ರೀತಿಯ ಸೀಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಆ ಮೂಲಕ ಇನ್ಮೇಲೆ Last Bencher ಮಕ್ಕಳು ಶಾಲೆಯಲ್ಲಿ ಇರವುದಿಲ್ಲ.
ಹೌದು ಶಾಲೆ ಕಾಲೇಜುಗಳಲ್ಲಿ ಮೊದಲ ಬೆಂಚ್‌ನಲ್ಲಿ ಕುಳಿತುಕೊಳ್ಳುವವರು ಬುದಿವಂತರು, ಕೊನೆಯ ಬೆಂಚ್‌ನಲ್ಲಿ ಕುಳಿತುಕೊಳ್ಳುವವರು ಶಿಕ್ಷಣದಲ್ಲಿ ಹಿಂದುಳಿದವರು ಹಾಗೂ ತುಂಟರು ಎಂಬ ಭಾವನೆ ಹಿಂದಿನಿಂದಲೂ ಬೇರೂರಿಬಿಟ್ಟಿದೆ.
ಅನೇಕ ಕಡೆ ಲಾಸ್ಟ್ ಬೆಂಚರ್ಸ್ ಎಂದು ಹೀಯಾಳಿಸುವುದೂ ಉಂಟು ಆದರೆ ಅದೇ ರೀತಿ ಫಸ್ಟ್ ಬೆಂಚರ್ಸ್ ಜೀವನದಲ್ಲಿ ಹಿಂದುಳಿದಾಗ, ನಾವ್ ಲಾಸ್ಟ್ ಬೆಂಚರ್ಸ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರನ್ನು ಕಾಣಬಹುದು.
ಅಂತೆಯೇ ಲಾಸ್ಟು ಬೇಂಚಿನ ಪಾರ್ಟಿ ನಮ್ಮದೂ, ನಮ್ದೇ ಹಾವಳಿ ಯಾರೇನ್ ಕೇಳೋದು ಎಂಬ ಕನ್ನಡ ಸಿನಿಮಾದ ಕಿರಿಕ್ ಪಾರ್ಟಿಯ ಗೀತೆಯೂ ಪ್ರಸಿದ್ಧವಾಗಿದೆ.
ಇದೀಗ ಕೇರಳ ಸರ್ಕಾರ ಅಂತಹ ಬೆಳವಣಿಗೆಗೆ ಅಂತ್ಯ ಹಾಡಲು ಮುಂದಾಗಿದೆ. ಕೇರಳದ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಗೊಳಿಸುವ ಸಲುವಾಗಿ ಇಲ್ಲಿನ ಹಲವು ಶಾಲೆಗಳ ತರಗ ತಿಗಳಲ್ಲಿ ಬೆಂಚುಗಳ ವಿನ್ಯಾಸವನ್ನೇ ಬದಲಿಸಲಾಗಿದೆ.
ಸಾಮಾನ್ಯವಾಗಿ ಸಾಲಲ್ಲಿ ಒಂದರ ಹಿಂದೊಂದು ಇರುತ್ತಿದ್ದ ಡೆಸ್ಟ್‌ಗಳನ್ನೀಗ ಶಿಕ್ಷಕರು ಸುತ್ತ ಅರ್ಧವೃತ್ತಾಕಾರದಲ್ಲಿ ಜೋಡಿಸಲಾಗುತ್ತಿದೆ. ಈ ಮೂಲಕ ‘ಲಾಸ್ಟ್ ಬೆಂಚರ್ಸ್’ ಎಂಬ ಪದಕ್ಕೆ ಕಡಿವಾಣ ಹಾಕಿ, ಎಲ್ಲರಿಗೂ ಸಮಾನ ಶಿಕ್ಷಣದ ಅವಕಾಶ ಎಂಬ ಸಂದೇಶ ಸಾರುವತ್ತ ಗಮನ ಹರಿಸಿದೆ.