ವಾಷಿಂಗ್ಟನ್: ಅಮೇರಿಕಾ ದೇಶದಲ್ಲಿನ ಶಿಕ್ಷಣ ಇಲಾಖೆಯ ಸುಧಾರಣೆಗೆ ಕಾರಣ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಸರ್ಕಾರ ಶಿಕ್ಷಣ ಇಲಾಖೆಯಲ್ಲಿ 1,400 ಶಿಕ್ಷಕರನ್ನು (teachers) ವಜಾಗೊಳಿಸಿದೆ.
ಈ ಬೆನ್ನಲ್ಲೇ ಟ್ರಂಪ್ ನಿರ್ಧಾರಗಳಿಗೆ ಸುಪ್ರೀಂ ಕೋರ್ಟ್ ಸಹಮತ ವ್ಯಕ್ತಪಡಿಸಿದೆ. ಆ ಮೂಲಕ ಶಿಕ್ಷಣ ಇಲಾಖೆಯಲ್ಲಿ 1,400 ಉದ್ಯೋಗಿಗಳನ್ನು ವಜಾಗೊಳಿಸಿರುವ ಟ್ರಂಪ್ ಸರಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ಸಿಕ್ಕಂತಾಗಿದೆ.
ಇದಕ್ಕೆ ಮುನ್ನ 1400 ಶಿಕ್ಷಕರ ವಜಾ ಕ್ರಮವು ಶಿಕ್ಷಣ ಇಲಾಖೆಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದ ಕೆಳಹಂತದ ನ್ಯಾಯಾಲಯ ಟ್ರಂಪ್ ಸರಕಾರದ ಆದೇಶ ಜಾರಿಗೆ ತಡೆ ನೀಡಿತ್ತು. ಬಳಿಕ ಟ್ರಂಪ್ ಆಡಳಿತ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.