Krishna weighed on a basil leaf

ಹರಿತಲೇಖನಿ ದಿನಕ್ಕೊಂದು ಕಥೆ; ತುಳಸಿ ದಳವೊಂದಕ್ಕೆ ತೂಗಿದ ಕೃಷ್ಣ..!

Harithalekhani: ಒಮ್ಮೆ ಸತ್ಯಭಾಮೆಯು ನಾರದರನ್ನು ಕುರಿತು “ಮಹರ್ಷಿಗಳೇ, ಜನ್ಮಜನ್ಮಾಂತರಕ್ಕೂ ಶ್ರೀಕೃಷ್ಣನೇ ನನಗೆ ಗಂಡನಾಗಬೇಕೆಂಬ ಹಂಬಲವಿದೆ; ಅದು ಈಡೇರಲು ಏನಾದರೂ ದಾರಿಯಿದೆಯೆ” ಎಂದು ಕೇಳಿದಳು.

ಅದಕ್ಕೆ ನಾರದರು, “ಓಹೋ, ಇದೆ ತಾಯೆ, ನೀನು ಪುಣ್ಯಕವೆಂಬ ವ್ರತವನ್ನಾಚರಿಸಿ, ಅದರ ಮುಕ್ತಾಯದಲ್ಲಿ ಶ್ರೀಕೃಷ್ಣನನ್ನು ಯಾರಾದರೂ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟುಬಿಡು. ಆಗ ನಿನ್ನ ಹಂಬಲಕ್ಕೆ ಬೆಂಬಲ ದೊರಕುತ್ತದೆ” ಎಂದರು.

ಸರಿ ಆ, ವ್ರತ ನಡೆದೆ ಹೋಯಿತು. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ನಾರದರಿಗೆ ಪತಿದೇವರನ್ನು ದಾನಮಾಡಿದ್ದೂ ಆಗಿ ಹೋಯಿತು.

ಆಗ ಶ್ರೀಕೃಷ್ಣನು ನಾರದರನ್ನು ಕುರಿತು, “ಈಗ ನಾನು ಏನು ಮಾಡಬೇಕು ಸ್ವಾಮಿ” ಎಂದು ಕೇಳಿದನು. ಅದಕ್ಕೆ ನಾರದರು, “ಏನು ಮಾಡಬೇಕು ಎನ್ನುತ್ತೀಯಲ್ಲಪ್ಪಾ, ಇನ್ನು ಅರಮನೆಯಲ್ಲಿ ಇರು ವಂತಿಲ್ಲ, ಹಿಡಿದುಕೋ ಈ ತಂಬೂರಿ, ನಡೆ ಹಾಡುತ್ತ ನನ್ನ ಹಿಂದೆ, ನೀನಿನ್ನು ನನ್ನ ಅನುಚರನಲ್ಲವೆ”? ಎಂದರು.

ಆಗ ಸತ್ಯಭಾಮೆಗೆ ಸಿಡಿಲೆರಗಿದಂತಾಯಿತು, ದಿಕ್ಕು ತೋರದಾಯಿತು.

“ಇದೆಂತಹ ಕೆಲಸ ಮಾಡಿಬಿಟ್ಟೆ” ಎಂದು ತನ್ನ ತಪ್ಪಿನ ಅರಿವಾಯಿತು. “ಈಗ ನೀವೇ ಏನಾದರೂ ಮಾರ್ಗವನ್ನು ತೋರಿಸಿ ನಾರದರೇ, ಸ್ವಾಮಿಯನ್ನು ಕಳೆದುಕೊಳ್ಳಲುಂಟೇ” ಎಂದು ಅಂಗಲಾಚಿದಳು.

ಆಗ ನಾರದರು “ನಾನೇನೋ ಕೃಷ್ಣನನ್ನು ನಿನಗೇ ಮರಳಿಸಿಬಿಡುತ್ತೇನೆ. ಆದರೆ ದಾನವಾಗಿ ಕೊಟ್ಟುದನ್ನು ಮರಳಿ ಪಡೆದರೆ ‘ದತ್ತಾಪಹಾರ’ ಎಂಬ ದೋಷ ನಿನಗೆ ಅಂಟಿಕೊಳ್ಳುತ್ತದೆಯಲ್ಲ, ಅದಕ್ಕೇನು ಮಾಡುತ್ತೀಯೆ ತಾಯೆ” ಎಂದರು.

“ಅದಕ್ಕೂ ನೀವೇ ಏನಾದರೂ ಪರಿಹಾರ ಸೂಚಿಸಬೇಕು ನಾರದರೆ” ಎಂದು ಸತ್ಯಭಾಮೆ ಅವರಿಗೆ ಶರಣಾದಳು.

ಆಗ ನಾರದರು “ತಾಯೆ, ತುಲಾಭಾರದ ಮೂಲಕ ಕೃಷ್ಣನ ತೂಕಕ್ಕೆ ಸಮನಾಗುವ ನಿನ್ನ ಆಭರಣಗಳನ್ನು ತೂಗಿಸಿ ನನಗೆ ದಾನಮಾಡು, ನಾನು ನಿನಗೆ ಕೃಷ್ಣನನ್ನು ಹಿಂದಕ್ಕೆ ಕೊಡುತ್ತೇನೆ. ಆಗ ದೋಷವೆಲ್ಲ ಪರಿಹಾರವಾಗುತ್ತದೆ” ಎಂದು ಸಲಹೆ ಕೊಟ್ಟರು.

ಸತ್ಯಭಾಮೆಗೆ ಹೋದಜೀವ ಬಂದಂತಾಯಿತು. ಲಗುಬಗೆಯಿಂದ ಕೃಷ್ಣನನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಕೂರಿಸಿ, ತನ್ನ ಆಭರಣಗಳನ್ನೆಲ್ಲ ತಂದು ಇನ್ನೊಂದು ತಟ್ಟೆಗೆ ಅಡಕಿದಳು. ಅವಳ ಆಭರಣವೆಲ್ಲ ಬರಿದಾಯಿತೇ ಹೊರತು, ಕೃಷ್ಣನ ತೂಕಕ್ಕೆ ಅದು ಸಮನಾಗಲಿಲ್ಲ.

“ಈಗ ನೀವೇ ಏನಾದರೂ ಮಾಡಬೇಕು ನಾರದರೇ” ಎಂದು ಸತ್ಯಭಾಮೆಯು ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟಳು.

ಆಗ ನಾರದರು, “ರುಕ್ಮಿಣಿಯನ್ನೊಮ್ಮೆ ಕೇಳಿ ನೋಡು ತಾಯೆ, ಅವಳ ಆಭರಣಗಳನ್ನೂ ತೂಗಿಸು” ಎಂದರು. ಸತ್ಯಭಾಮೆಗೆ ಅದು ಇಷ್ಟವಿಲ್ಲದಿದ್ದರೂ ಪತಿದೇವರನ್ನು ಕಳೆದುಕೊಳ್ಳಬೇಕಲ್ಲಾ ಎಂಬ ಸಂಕಟದಿಂದ ಅಸಹಾಯಕಳಾಗಿ “ನೀನೂ ಬಾ ರುಕ್ಮಿಣಿ, ಸಹಾಯ ಮಾಡು” ಎಂದಳು.

ಆಗ ರುಕ್ಮಿಣಿಯು “ಹದಿನಾಲ್ಕು ಲೋಕಗಳ ಸಂಪತ್ತನ್ನೆಲ್ಲ ತಂದು ಸುರಿದರೂ ಈ ಸ್ವಾಮಿಗೆ ಸಮನಾಗಿ ಅದು ತೂಗಬಲ್ಲದೇ? ಅಕ್ಕ, ಜಗತ್ತಿಗೆಲ್ಲ ಸೇರಿದ ಅವನನ್ನು ನಾನೇ ಕಟ್ಟಿ ಹಾಕಿಕೊಳ್ಳುತ್ತೇನೆಂದರೆ, ಅದು ನಡೆಯುವುದುಂಟೆ? ಅಕ್ಕ, ಅದೆಲ್ಲ ಈಗ ಬೇಡ” ಎನ್ನುತ್ತ ರುಕ್ಮಿಣಿಯು ಒಂದು ತುಳಸಿ ದಳದ ಮೇಲೆ ‘ಶ್ರೀಕೃಷ್ಣ’ ಎಂದು ಬರೆದು, ಸತ್ಯಭಾಮೆಯ ತಟ್ಟೆಯೊಳಕ್ಕೆ ಹಾಕುತ್ತ “ದೇವ ದೇವೋತ್ತಮನೆ, ದೇವತಾ ಸಾರ್ವಭೌಮ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೇ ನನಗೆ ನಿನ್ನ ಮೇಲೆ ಭಕ್ತಿ ನನ್ನ ಹೃದಯದಲ್ಲೇನಾದರೂ ಇದ್ದರೆ, ನೀನು ಸಮನಾಗಿ ತೂಗಿಬಿಡು ಸ್ವಾಮಿ” ಎಂದು ನಮಸ್ಕರಿಸಿದಳು.

ಒಂದು ಕೃಷ್ಣನಾಮವೇ ಸಾಕಾಗಿ, ತಕ್ಕಡಿ ಸಮನಾಗಿ ತೂಗಿಬಿಟ್ಟಿತು, ಆಗಲೇ ಸತ್ಯಭಾಮೆಯ ಗರ್ವವು ಇಳಿಯಿತು, ಭಗವಂತನನ್ನು ಸಿರಿ ಸಂಪತ್ತಿನಿಂದ ತೂಗಲು ಎಂದು ಸಾಧ್ಯವಿಲ್ಲ ನಿಜ ಭಕ್ತಿಗೆ ಅವನು ಒಲಿಯುತ್ತಾನೆ ಎಂಬ ನಿಜ ವಾಸ್ತವ ಸತ್ಯಭಾಮೆಗೆ ಅಂದು ಅರ್ಥವಾಯಿತು.

ಕೃಪೆ: ವಂದಗದ್ದೆ ಗಣೇಶ (ಸಾಗರ) ಪೌರಾಣಿಕ ಕಥೆಗಳು

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ (News channel) ಧರ್ಮಸ್ಥಳ ಪ್ರಕರಣ ಸಂಬಂಧಿಸಿ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ

[ccc_my_favorite_select_button post_id="119114"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!