ಮಾಸ್ಕೋ: ರಷ್ಯಾದ ವಿಮಾನ (Russian Plane) ಚೀನಾ ಗಡಿಯ ಪೂರ್ವ ಅಮುರ್ ಪ್ರದೇಶದಲ್ಲಿ ಪತನಗೊಂಡಿದ್ದು, 5 ಮಕ್ಕಳು ಸೇರಿ ವಿಮಾನದಲ್ಲಿದ್ದ ಎಲ್ಲಾ 49 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಸೈಬೀರಿಯಾ ಮೂಲದ ಅಂಗಾರ ಎಂಬ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ ಎಎನ್-24 ಸಂಖ್ಯೆಯ ವಿಮಾನ ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿತು.
ಇದಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವುದು ತಿಳಿದುಬಂದಿದೆ.
ವಿಮಾನದಲ್ಲಿ 5 ಮಕ್ಕಳು ಸೇರಿದಂತೆ 43 ಪ್ರಯಾಣಿಕರು, 6 ಸಿಬ್ಬಂದಿ ಇದ್ದರು. ಈ ಘಟನೆಯು ರಷ್ಯಾದ ವಿಮಾನಯಾನ ಇತಿಹಾಸ ದಲ್ಲಿ ಆತಂಕಕಾರಿ ಘಟನೆಯಾಗಿದೆ.
ತನಿಖೆ ತೀವ್ರ: ವಿಮಾನವು ಖಬರೋನ್ಸ್- ಬ್ಲಾಗೊವೆಶ್ಚನ್ಸ್-ಟಿಂಡಾ ಮಾರ್ಗದಲ್ಲಿ ಸಂಚರಿಸುತ್ತಿತ್ತು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ತಿಳಿಸಿದ್ದಾರೆ.
49 Dead After Russian An‑24 Plane Crash in Far East
— 🇺🇦 Sahaidachnyi – ukrainian William Wallace (@zakarpatfan) July 24, 2025
▪️ Aircraft carrying 43 passengers (incl. 5 children) + 6 crew crashed near Tynda, Amur region, close to China border
▪️ All 49 confirmed dead, wreckage found burning in forest ~15 km from airport pic.twitter.com/uqfjz4k7A4
ಈ ಘಟನೆಯ ಕಾರಣದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ, ಆದರೆ ತಾಂತ್ರಿಕ ದೋಷ, ಪಕ್ಷಿಗಳ ಡಿಕ್ಕಿ, ಅಥವಾ ಇತರ ಬಾಹ್ಯ ಕಾರಣಗಳಿರಬಹುದು ಎಂದು ಊಹಿಸಲಾಗುತ್ತಿದೆ.
ತುರ್ತು ರಕ್ಷಣಾ ತಂಡಗಳು ಈಗಾಗಲೇ ತನಿಖೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.