Bangalore, the heart of Karnataka, belongs to everyone: DCM D.K. Shivakumar

ಕರ್ನಾಟಕದ ಹೃದಯ ಬೆಂಗಳೂರು ಎಲ್ಲರಿಗೂ ಸೇರಿದ್ದು: ಡಿಸಿಎಂ ಡಿ.ಕೆ‌. ಶಿವಕುಮಾರ್

ಬೆಂಗಳೂರು; “ಕರ್ನಾಟಕದ ಎಲ್ಲಾ ಭಾಗಗಳ ಜನರ ಹೃದಯವೇ ಬೆಂಗಳೂರು. ಬೆಂಗಳೂರು ನಗರ ‌ಇಲ್ಲಿನ ಸುತ್ತಮುತ್ತಲ ಜನರಿಗೆ ಸೇರಿದ್ದಲ್ಲ, ದಕ್ಷಿಣ ಕನ್ನಡ, ಗುಲ್ಬರ್ಗ, ರಾಯಚೂರು, ಉಡುಪಿ ಹೀಗೆ ಎಲ್ಲರಿಗೂ ಸೇರಿದ್ದು. ನೀವೆಲ್ಲರೂ ಸೇರಿ ಬೆಂಗಳೂರನ್ನು ಉಳಿಸಿ ಬೆಳೆಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಹೇಳಿದ್ದಾರೆ.

ನಗರದ ನಂದಿ ಲಿಂಕ್ ಗ್ರೌಂಡ್ ನಲ್ಲಿ ಭಾನುವಾರ ನಡೆದ ಕುಂದಾಪ್ರ ಕನ್ನಡ ಹಬ್ಬ- 2025ರಲ್ಲಿ ಭಾಗವಹಿಸಿ ಮಾತನಾಡಿದರು.

“ಕರಾವಳಿ ಭಾಗದವರೇ ಹೆಚ್ಚಿನ ವಿದ್ಯಾಸಂಸ್ಥೆಗಳು, ಹೋಟೆಲ್, ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಿರುವುದು. ಈ ಭಾಗ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಈ ಕಾರಣಕ್ಕೆ ಈಗಾಗಲೇ ಸದನದಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನ ಮಾಡುವುದಾಗಿ ಘೋಷಣೆ ಮಾಡಲಾಗಿದೆ” ಎಂದರು.

“ನಿಮ್ಮ ಭಾಗಕ್ಕೆ ವಿಮಾನ ನಿಲ್ದಾಣದ‌ ಬಗ್ಗೆ ಆನಂತರ ಚರ್ಚೆ ಮಾಡೋಣ. ನೀವು ಹೊರಗೆ ವಲಸೆ ಹೋಗುವುದನ್ನು ತಪ್ಪಿಸಿ ನೀವಿದ್ದಲಿಯೇ ಉದ್ಯೋಗ ಸೃಷ್ಟಿ ‌ಮಾಡುವುದು ಮೊದಲ ಆದ್ಯತೆ. ನಿಮ್ಮ ಊರಿನಲ್ಲಿಯೇ ನಿಮ್ಮ ಪರಂಪರೆಯನ್ನು ಜಗತ್ತಿಗೆ ಪರಿಚಯ ಮಾಡಬೇಕು. ಈ ಡಿ.ಕೆ.ಶಿವಕುಮಾರ್ ಉಡುಪಿ ಹಾಗೂ ಕುಂದಾಪುರದ ಜನತೆಯ ಜೊತೆಯಲ್ಲಿ ಸದಾ ಇರುತ್ತಾನೆ‌ ಎನ್ನುವ ಸಂದೇಶ ನೀಡುತ್ತೇನೆ. ನಿಮ್ಮ ಆಶೀರ್ವಾದ ಇದ್ದರೆ ನಮ್ಮ ಸಹಕಾರ ಇರುತ್ತದೆ” ಎಂದು ಹೇಳಿದರು.

“ಗ್ರೇಟರ್ ಬೆಂಗಳೂರು ಮಾಡುವುದರಿಂದ ಕನ್ನಡಿಗರಿಗೆ ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಟೀಕೆ ಮಾಡಿದರು‌. ನಾನು ಅವರಿಗೆ ಹೇಳಿದೆ, ನೀವೆಲ್ಲರೂ ಮೂರ್ಖರು ಬೆಂಗಳೂರು ಕರ್ನಾಟಕದ ಎಲ್ಲಾ ಜನತೆಯ ಹೃದಯ ಭಾಗ ಇದ್ದಂತೆ. ಇಲ್ಲಿರುವ ಹೊರಗಿನವರಿಗೆ ನೀವು ಪರಕೀಯರು ಎನ್ನುವ ಭಾವನೆ ಬೇಡ” ಎಂದರು.

“ಈ ಊರಿಗೆ ಜಡ್ಜ್, ಲಾಯರ್, ಉದ್ಯಮಿ – ಹೀಗೆ ಯಾರೇ ಬಂದರೂ ಹೊರಗೆ ಹೋಗುವುದಿಲ್ಲ. ಈ ಹಿಂದೆ ಅನುಕೂಲಸ್ಥರು ಮುಂಬೈ, ಸೌದಿಗೆ ತೆರಳಿದ್ದಾರೆ. ಈಗಿನ ಯುವ ಜನತೆ ಬೆಂಗಳೂರಿಗೆ ಬರುತ್ತಿದ್ದಾರೆ” ಎಂದರು.

“ಮೂಲವನ್ನು ಮರೆತರೆ ಫಲವನ್ನು ಮರೆತಂತೆ ಎಂದು ಹಿರಿಯರು ಹೇಳಿದ್ದಾರೆ. ದೇವರು ವರ ಮತ್ತು ಶಾಪ ಎರಡನ್ನೂ ನೀಡುವುದಿಲ್ಲ ಆದರೆ ಅವಕಾಶವನ್ನು ಮಾತ್ರ ನೀಡುತ್ತಾನೆ. ನೆಲ,‌ ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಕುಂದಾಪುರ ಕನ್ನಡಿಗರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದೇ ಕರ್ನಾಟಕದ ಸೌಭಾಗ್ಯ. ನಿಮ್ಮ ಸಂಘದ ಹಿರಿಯರು ಎಲ್ಲರನ್ನು ಒಟ್ಟಿಗೆ ಸೇರಿಸಿ ಕರ್ನಾಟಕದ ಹೃದಯ ಭಾಗದಲ್ಲಿ ನೀವು ಇದ್ದೀರಾ ಎಂದು ಸಂದೇಶ ನೀಡಿದ್ದೀರಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು” ಎಂದು ಶ್ಲಾಘಿಸಿದರು.

“ನಿಮಗೆ ಪಾರಂಪರಿಕವಾಗಿ ಕಲೆ ಮೈಗೂಡಿಕೊಂಡು ಬಂದಿದೆ. ಈ ಮೊದಲು ಕೇವಲ ಮಂಗಳೂರು ಎಂದು ಹೇಳುತ್ತಿದ್ದರು. ಆದರೆ ಇಡೀ ಕರಾವಳಿಗೆ ಪ್ರಾಮುಖ್ಯತೆಯಿದೆ. ಉಡುಪಿಯ ಪಂಚಾಯ್ತಿಯೊಂದರಲ್ಲಿಯೇ ಮೂರು ಮೆಡಿಕಲ್ ಕಾಲೇಜಿದೆ. ಇದು ನಿಮ್ಮ ಹೆಗ್ಗಳಿಕೆ” ಎಂದರು.

“ಮೈಸೂರು ದಸರಾದಲ್ಲಿ ಕಂಬಳ ಮಾಡುವ ಆಲೋಚನೆಯಿತ್ತು. ಅದಕ್ಕೆ ಮುಖ್ಯಮಂತ್ರಿಗಳು ಆ ಗಡಿಬಿಡಿಯಲ್ಲಿ ಮಾಡುವುದು ಬೇಡ ಮಧ್ಯದಲ್ಲಿ ಯಾವಾಗಾದರೂ ಮಾಡೋಣ ಎಂದಿದ್ದಾರೆ. ನಿಮ್ಮ ಕಲೆಯಾದ ಯಕ್ಷಗಾನ ಸೇರಿದಂತೆ ನಾಟಕ, ಸಾಹಿತ್ಯ ಯಾವುದೂ ಸಹ ಅಳಿಸಿ ಹೋಗಬಾರದು ಎಂಬುದು ನಮ್ಮ‌‌‌ ಕಾಳಜಿ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆದಷ್ಟು ಬೇಗ ಮಾಡಲಾಗುವುದು. ಸಂಘದವರು ಮತ್ತೊಮ್ಮೆ ನನ್ನ ಭೇಟಿ ಮಾಡಿ” ಎಂದರು.‌

ರಾಜಕೀಯ

ಒಂದೇ ದಿನ ರೂ.1146 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಿಜೆಪಿಗೆ ಸವಾಲೆಸೆದ ಸಿಎಂ ಸಿದ್ದರಾಮಯ್ಯ

ಒಂದೇ ದಿನ ರೂ.1146 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಿಜೆಪಿಗೆ

ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಎರಚುವ ಬಿಜೆಪಿಗೆ ಇದು ನಮ್ಮ ಸರ್ಕಾರದ ಸವಾಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah)

[ccc_my_favorite_select_button post_id="111790"]
ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಯಾಣ

ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ

ಆಗಸ್ಟ್ 4 ರಿಂದ 6ನೇ ತಾರೀಖಿನವರೆಗೆ ಅಮೇರಿಕಾದ ಬೋಸ್ಟನ್ ನಗರದಲ್ಲಿ ನಡೆಯುವ "ಶಾಸಕಾಂಗ ಶೃಂಗಸಭೆ 2025”ರಲ್ಲಿ (Legislative Summit 2025) ಪಾಲ್ಗೊಳ್ಳಲು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಇಂದು ಬೆಳಗಿನ ಜಾವ

[ccc_my_favorite_select_button post_id="111777"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ಜು.25ರಿಂದ 28ರವರೆಗೆ ನಡೆಯಲಿರುವ ಪುರುಷರ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್(Kabaddi Championship) ಪಂದ್ಯಾವಳಿ

[ccc_my_favorite_select_button post_id="111553"]
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ಸ್ಥಳ ಮಹಜರು ಆರಂಭಿಸಿದ ಎಸ್.ಐ.ಟಿ

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ಸ್ಥಳ ಮಹಜರು ಆರಂಭಿಸಿದ ಎಸ್.ಐ.ಟಿ

ಧರ್ಮಸ್ಥಳದ (Dharmasthala) ನೇತ್ರಾವತಿ ಸ್ನಾನಘಟ್ಟದ ಬಳಿಯ ತೆಂಗಿನ ತೋಟದ ಪೊದೆಗಳಲ್ಲಿ ಮಹಜರು ಕಾರ್ಯವನ್ನು ತನಿಖಾಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ

[ccc_my_favorite_select_button post_id="111774"]
ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಧುರೆ ರಸ್ತೆಯಲ್ಲಿನ ಖಾಸಗಿ

[ccc_my_favorite_select_button post_id="111623"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!