ದೊಡ್ಡಬಳ್ಳಾಪುರ: ಇದೇ ತಿಂಗಳ 27 ರಂದು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಬ್ರೈನೊಬ್ರೈನ್ ಅಬಾಕಸ್ ಸಂಸ್ಥೆಯು ಆಯೋಜಿಸಿದ್ದ 166 ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಪ್ರತಿಷ್ಠಿತ ಎಂ.ಎಸ್.ವಿ. ಪಬ್ಲಿಕ್ ಶಾಲೆಯ (MSV Public School) ಮಕ್ಕಳು ಉತ್ತಮ ಸಾಧನೆ ತೋರಿದ್ದು, ಟ್ರೋಫಿ, ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
ಹಲವಾರು ಕೇಂದ್ರಗಳ ಸಾವಿರಾರು ಮಕ್ಕಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮಕ್ಕಳ ಈ ಸಾಧನೆ ಶ್ಲಾಘನೀಯವಾದದ್ದು, ಮಕ್ಕಳ ಶ್ರದ್ಧೆ – ಸಾಧನೆ ಪೋಷಕರಿಗೆ ಹಾಗೂ ಶಾಲೆಗೆ ಹೆಮ್ಮೆ ತಂದಿದೆ. ಮಕ್ಕಳ ಸಾಧನೆ ಇನ್ನೂ ಉನ್ನತ ಮಟ್ಟಕ್ಕೆ ತಲುಪಲಿ ಎಂದು ಶಾಲೆಯ ಅಧ್ಯಕ್ಷರಾದ ಸುಬ್ರಮಣ್ಯ ರವರು ಹಾರೈಸಿದರು.
166 ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಎಂ.ಎಸ್.ವಿ. ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು 5 ಚಾಂಪಿಯನ್ ಟ್ರೋಫಿ, 5 ಚಿನ್ನದ ಪದ ಹಾಗೂ 1 ಬೆಳ್ಳಿಯ ಪದಕ ಪಡೆದಿದ್ದಾರೆ.
ಚಾಂಪಿಯನ್ ಟ್ರೋಫಿ ವಿಜೇತರು: ರೇಣುಕಾ ಜಿ.ಆರ್.,ಹುಮ್ಮೆ ಐರಾ ಅಬ್ದುಲ್ ಕಾಲಿಕ್, ದೀಪಕ್ ಎಂ.ಎಚ್., ಡಿಪಲ್ ಜಿ.ಆರ್.
ಚಿನ್ನದ ಪದ ವಿಜೇತರು: ಪ್ರಣಿತ ಎನ್., ನೇಹ ಮಾಹಿ ಸನಾ, ಭುವನ್ ಇ., ಧನ್ವಿಕ್ ಅಭಿರಾಮ್, ಉದ್ಬವ್ ಗೌಡ.
ಬೆಳ್ಳಿಯ ಪದಕ ವಿಜೇತರು: ಲಿತನ್ ಕುಮಾರ್.
ಈ ವೇಳೆ ಪ್ರಾಂಶುಪಾಲರಾದ ರೇಮ್ಯ ಬಿ.ವಿ ಹಾಗೂ ಶಿಕ್ಷಕ ವೃಂದ ಸಾಧನೆಗೈದ ಮಕ್ಕಳನ್ನು ಅಭಿನಂದಿಸಿದರು.