ಶ್ರೀನಗರ: ಅಮರನಾಥ ಯಾತ್ರೆ (Amarnath Yatra) ಆ.3ರ ಭಾನುವಾರವೇ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜು.3ರಂದು ಪ್ರಾರಂಭವಾಗಿದ್ದು, ರಕ್ಷಾ ಬಂಧನ ಸಂದರ್ಭ ಆ.9ರಂದು ಮುಕ್ತಾಯ ಗೊಳ್ಳಬೇಕಿತ್ತು. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಭಾರೀ ಮಳೆಯಾಗಿದ್ದರಿಂದ ರೈಲ್ವೆ ಹಳಿಗಳು ತೀವ್ರವಾಗಿ ಹಾನಿಗೊಳಗಾಗಿದ್ದವು.
`ಪಹಲ್ಯಾಮ್ ಮತ್ತು ಬಾಲ್ಟಾಲ್ ಮಾರ್ಗದುದ್ದಕ್ಕೂ ಹಳಿ ನಿರ್ವ ಹಣೆ ಅಗತ್ಯವಾಗಿದೆ. ಅವುಗಳ ದುರಸ್ತಿ, ನಿರ್ವಹಣೆ ನಡೆಸಬೇಕಾಗಿರುವುದರಿಂದ ಈ ಬಾರಿಯ ಅಮರನಾಥ ಯಾತ್ರೆಯನ್ನು ಒಂದು ವಾರ ಮೊದಲೇ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಬಿಧುರಿ ಸ್ಪಷ್ಟಪಡಿಸಿದ್ದಾರೆ.
ಭಾನುವಾರದಿಂದಲೇ ಹಳಿ ದುರಸ್ತಿಗೆ ಕಾರ್ಮಿಕರು ಮತ್ತು ಯಂತ್ರೋ ಪಕರಣಗಳನ್ನು ಬಳಸಲಾಗುತ್ತಿದೆ. ಹಾಗಾಗಿ, ಯಾತ್ರೆ ಪುನರಾರಂಭ ಅಸಾಧ್ಯ ಎಂದರು.
ಈ ವರ್ಷ 4.14 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಅಮರನಾಥ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.