ದೊಡ್ಡಬಳ್ಳಾಪುರ: ತುಂಬು ಗರ್ಭಿಣಿಗೆ ಸೂಕ್ತ ಚಿಕಿತ್ಸೆ ದೊರಕದ ಕಾರಣ ತಾಯಿ ಮತ್ತು ಸಾವನಪ್ಪಿರುವ ಘಟನೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದ (Doctor’s negligence) ಆರೋಪ ಕೇಳಿ ಬಂದಿದೆ.
ಮೃತ ಗರ್ಭಿಣಿಯನ್ನು ಸಿಂಗೇನಹಳ್ಳಿ ನಿವಾಸಿ ಸುಶ್ಮಿತ (24 ವರ್ಷ) ಎಂದು ಗುರುತಿಸಲಾಗಿದೆ.
ಗುಂಡಪ್ಪನಾಯಕನಹಳ್ಳಿ ಗ್ರಾಮದ ಸುಶ್ಮಿತ ಎನ್ನುವರನ್ನು ಸಿಂಗೇನಹಳ್ಳಿಯ ಮಹೇಶ್ ಎನ್ನುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಗರ್ಭಿಣಿಯಾದ ಹಿನ್ನೆಲೆಯಲ್ಲಿ ಸುಶ್ಮಿತ ಅವರು ಡೆಲಿವರಿಗೆಂದು ದೊಡ್ಡಬಳ್ಳಾಪುರದಲ್ಲಿ ವಾಸವಿದ್ದ ಪೊಷಕರ ತವರು ಮನೆಗೆ ಬಂದಿದ್ದರು.
ಮೊದಲ ಮಗುವಾದ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಸೂಚನೆ, ಚಿಕಿತ್ಸೆ ಪಡೆಯುತ್ತಿದ್ದ ಸುಶ್ಮಿತ ಅವರಿಗೆ ಆಗಸ್ಟ್. 7 ಕ್ಕೆ ಡಿಲಿವರಿ ದಿನಾಂಕವನ್ನು ವೈದ್ಯರು ನೀಡಿದ್ದರಂತೆ.
ಆದರೆ ನಿನ್ನೆ ಸುಶ್ಮಿತ ಅವರಿಗೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಉಂಟಾಗಿದ್ದು, ಆಸ್ಪತ್ರೆಗೆ ತೆರಳಿದ್ದಾರೆ, ಈ ವೇಳೆ ವೈದ್ಯರು ಇಲ್ಲದ ಕಾರಣ ಶುಶ್ರೋಕಿಯ ಬಳಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಹೇಳಿದ್ದರಂತೆ.
ವೈದ್ಯರ ಸಲಹೆ ಮೇರೆಗೆ ಮಾತ್ರೆ ನೀಡಿದ ಶುಶ್ರೋಕಿ ಏನು ಆಗಿಲ್ಲ ನಡೆಯಿರಿ ಎಂದಿದ್ದರಂತೆ. ಆದರೆ ಇಂದು ಬೆಳಗ್ಗಿನ ಜಾವ ಸುಶ್ಮಿತ ಸಾವನಪ್ಪಿದ್ದಾರೆ.
ಇದರಿಂದ ಕೆರಳಿದ ಪೋಷಕರು ತಾಯಿ-ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ, ಪ್ರತಿಭಟನೆಗೆ ಮುಂದಾಗಿದ್ದಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಹಾಗೂ ಸಿಬ್ಬಂದಿಗಳು ದೌಡಾಯಿಸಿದ್ದಾರೆ.