ದೊಡ್ಡಬಳ್ಳಾಪುರ: 9 ತಿಂಗಳ ತುಂಬು ಗರ್ಭಿಣಿಗೆ ಸೂಕ್ತ ಚಿಕಿತ್ಸೆ ದೊರಕದ ಕಾರಣ ತಾಯಿ ಮತ್ತು ಮಗು ಸಾವನಪ್ಪಿರುವ ಘಟನೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ (Government hospital) ನಡೆದಿದ್ದು, ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.
ಮೃತ ಗರ್ಭಿಣಿಯನ್ನು ಸಿಂಗೇನಹಳ್ಳಿ ನಿವಾಸಿ ಸುಶ್ಮಿತ (24 ವರ್ಷ) ಎಂದು ಗುರುತಿಸಲಾಗಿದೆ.
ಗುಂಡಪ್ಪನಾಯಕನಹಳ್ಳಿ ಗ್ರಾಮದ ಸುಶ್ಮಿತ ಎನ್ನುವರನ್ನು ಗೊಲ್ಲರಪಾಳ್ಯದ ಮಹೇಶ್ ಎನ್ನುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಗರ್ಭಿಣಿಯಾದ ಹಿನ್ನೆಲೆಯಲ್ಲಿ ಸುಶ್ಮಿತ ಅವರು ಡೆಲಿವರಿಗೆಂದು ದೊಡ್ಡಬಳ್ಳಾಪುರದಲ್ಲಿ ವಾಸವಿದ್ದ ಪೋಷಕರ ತವರು ಮನೆಗೆ ಬಂದಿದ್ದರು.
ಮೊದಲ ಮಗುವಾದ ಕಾರಣ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಸೂಚನೆ, ಚಿಕಿತ್ಸೆ ಪಡೆಯುತ್ತಿದ್ದ ಸುಶ್ಮಿತ ಅವರಿಗೆ ಆಗಸ್ಟ್. 14 ಕ್ಕೆ ಡಿಲಿವರಿ ದಿನಾಂಕವನ್ನು ವೈದ್ಯರು ನೀಡಿದ್ದರಂತೆ.
ಆದರೆ ನಿನ್ನೆ ಸುಶ್ಮಿತ ಅವರಿಗೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಉಂಟಾಗಿದ್ದು, ಆಸ್ಪತ್ರೆಗೆ ತೆರಳಿದ್ದಾರೆ, ಈ ವೇಳೆ ವೈದ್ಯರು ಇಲ್ಲದ ಕಾರಣ ಶುಶ್ರೋಕಿಯ ಬಳಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಹೇಳಿದ್ದರಂತೆ.
ವೈದ್ಯರ ಸಲಹೆ ಮೇರೆಗೆ ಮಾತ್ರೆ ನೀಡಿದ ಶುಶ್ರೋಷಕಿ ಏನು ಆಗಲ್ಲ ನಡೆಯಿರಿ ಎಂದಿದ್ದರಂತೆ. ಬಳಿಕ ಮನೆಗೆ ಬಂದ ಸುಶ್ಮಿತ ಇಂದು ಬೆಳಗ್ಗಿನ ಜಾವ ಸಾವನಪ್ಪಿದ್ದಾರೆ.
ಇದರಿಂದ ಕೆರಳಿದ ಪೋಷಕರು ತಾಯಿ-ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ, ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಒಂದು ವರ್ಷದಿಂದ ನಡೆಯದ ARS ಸಭೆ
ಈ ಘಟನೆ ಬೆನ್ನಲ್ಲೇ ದೊಡ್ಡಬಳ್ಳಾಪುರ ಆಸ್ಪತ್ರೆಯ ಸರಿದಾರಿಗೆ ತರಬೇಕಾದ ಆರೋಗ್ಯ ರಕ್ಷಾ ಸಮಿತಿ (ARS) ಸಭೆ ಒಂದು ವರ್ಷದಿಂದ ನಡೆಯದೆ ಇರುವುದು ಬೆಳಕಿಗೆ ಬಂದಿದೆ.
ಈ ಕುರಿತಂತೆ ಮಾತನಾಡಿರುವ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಂ.ಮಂಜುನಾಥ್, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ಕುರಿತಂತೆ ಪದೇ ಪದೇ ಆರೋಪಗಳು ಕೇಳಿ ಬರುತ್ತಿದೆ.
ಸರ್ಕಾರದ ಆದೇಶದ ಅನ್ವಯ ಆಡಳಿತ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳ ಸಭೆಯನ್ನು ಆರೋಗ್ಯ ರಕ್ಷಾ ಸಮಿತಿ ರಚಿಸಿ ಒಂದು ವರ್ಷವಾದರು ನಡೆಸಿಲ್ಲ.
ಇದರ ಬಗ್ಗೆ ಆಡಳಿತಾಧಿಕಾರಿ ಡಾ.ರಮೇಶ್ ಅವರಿಗೆ ಕೇಳಿದರೆ ಶಾಸಕ ಧೀರಜ್ ಮುನಿರಾಜು ಸಮಯ ನೀಡುತ್ತಿಲ್ಲ ಎನ್ನುತ್ತಾರೆ. ಇದರಿಂದ ಆಸ್ಪತ್ರೆಯಲ್ಲಿನ ಸ್ಥಿತಿಗತಿ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ
ಇನ್ನೂ ಗರ್ಭಿಣಿ ಸಾವನಪ್ಪಿರುವ ಘಟನೆ ಹರಿತಲೇಖನಿ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಕುರಿತಂತೆ ಅನೇಕ ಓದುಗರು ಪ್ರತಿಕ್ರಿಯೆ ನೀಡಿದ್ದು ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.
1 ಇದಕ್ಕೆ ಪರಿಹಾರ ಬೇಕೇ ಬೇಕು ಇಲ್ಲ ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಸರಿಯಾಗಿ ಆಸ್ಪತ್ರೆ ಯಲ್ಲಿ ಸೌಲಭ್ಯ ಇಲ್ಲ ಏನೇ ಎಮರ್ಜೆನ್ಸಿ ಅಂತ ಬಂದ್ರೆ ಬೇರೆ ಕಡೆ ಟ್ರಾನ್ಸ್ಪರ್ ಅಂತ ಬರ್ಕೊಡ್ತಾರೆ ಆ ಇದಕ್ಕೆ ಏನಕ್ಕೆ ಈ ಗೌರ್ಮೆಂಟ್ ಆಸ್ಪತ್ರೆ ಎಮರ್ಜೆನ್ಸಿ ಅಂತ ಬಂದ್ರೆ ನೋಡೋ ಡಾಕ್ಟರ್ ಒಬ್ಬರು ಇಲ್ಲ ಸರಿಯಾದ ಚಿಕೆಸ್ತೆ ಕೊಡಲ್ಲ ಬೇಜವ್ದಾರಿ ಡಾಕ್ಟರ್ ಇರೋದು ಇದಕ್ಕೆ ಯಾರು ದೊಡ್ಡಬಳ್ಳಾಪುರ M L A ಅವರು ಬಂದು ಇದಕ್ಕೆ ಸರಿಯಾದ ಮಾರ್ಗ ಕೊಡ್ಸಬೇಕು ಯಾರು ಎಮರ್ ಜೆನ್ಸಿ ಅಂತ ಬಂದ್ರೆ ನೋಡೋ ಡಾಕ್ಟರ್ ಬೇಕು ಯಾರು ಇರಲ್ಲ ಅದಕ್ಕೆ ಸರಿಯಾದ ಚಿಕಿಸ್ತೆ ಕೊಡೋ ಡಾಕ್ಟರ್ ಇಲ್ಲ ಬಂದ್ರೆ ಬೇರೆ ಕಡೆ ಟ್ರಾನ್ಪರ್ ಮಾಡ್ತಾರೆ ಹೋಗೋ ದಾರಿಯಲ್ಲಿ ಅವನು ಸತ್ತು ಹೆಣ ಹಾಗಿ ಬಿದ್ದು ಹೋಗರ್ತಾನೆ ಇಷ್ಟೆ ಜೀವನ ಒಂದು ಪ್ರಾಣದ ಬೆಲೆ ಇವರಿಗೆ ಏನ್ ಗೊತ್ತು ಅವರ ಕುಟಂಬಕ್ಕೆ ಆ ತರ ಆಗಿದ್ದರೆ ಏನ್ ಮಾಡ್ತಾರೇ ಹೇಳಿ ಇಲ್ಲಿ ಇರೋ ಡಾಕ್ಟರ್ ಯಲ್ಲ ಬರ್ತಾರೆ ಆವಾಗ ಚಿಕಿಸ್ತೆ ಚೆನ್ನಾಗಿ ನಡೆಯುತ್ತೆ ಅಲ್ವಾ ಬೇರೆ ಕಡೆ ಯಲ್ಲ icu ಇರುತ್ತೆ ಇಲ್ಲಿ ಇಲ್ಲ ಯಾಕ್ ಅಂದ್ರೆ ಅಡ್ರನ್ನ ನೋಡೋ ಡಾಕ್ಟರ್ ಇಲ್ಲ ಅಂತ ಹೇಳ್ತಾರೆ ನಾನು ಹೋಗಿ ವಾಪಸ್ ಬಂದಿದ್ದಿನೀ ಇದೆನ ನಮ್ಮ ದೊಡ್ಡಬಳ್ಳಪುರ ಎಲ್ಲ ಲಂಚ ಲಂಚ ಪ್ರಾಣಕ್ಕೆ ಬೆಲೆ ಇಲ್ಲ ಹೋಗಿ ಹೋಗಿ ತೂ: Manjunath manju
2 ಕೆಲವು ವೈದ್ಯರಿಗೆ ಜವಾಬ್ದಾರಿಯ ಅರಿವೇ ಇರಲ್ಲ…. ಉದಾಸೀನ, ತಾತ್ಸಾರ ಮಾಡ್ತಾರೆ ಅದರ ಪರಿಣಾಮವೇ ಈ ಕೃತ್ಯ: Bala Krishna
3 ನಮ್ಮ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಿಂತ ನರ್ಸ್ಗಳು ಡಿ ಎಚ್ ಓ ಅಧಿಕಾರಿಗಳಿಂದ ತುಂಬಾ ಅಹಂಕಾರ ದರ್ಪ ಅಧಿಕಾರ ಚಲಾಯಿಸುವುದರಲ್ಲಿ ಮುಂದೆ ವೈದ್ಯರು ಏನೇ ಆದರೂ ಸರಿ ಇಲ್ಲಿ ನರ್ಸ್ಗಳ ಪಾತ್ರ ತುಂಬಾ ಇದೆ ಅವರಿಗಿರುವ ಅಹಂಕಾರ ಬೇಜವಾಬ್ದಾರಿತನ ಅಸಡ್ಡೆ ಇನ್ಯಾವ ಆಸ್ಪತ್ರೆಗಳಲ್ಲೂ ಇಲ್ಲ ಹಾಗಾಗಿ ಮಾನ್ಯ ಶಾಸಕರು ಹಾಗೂ ಮೇಲಾಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ತಮ್ಮಲ್ಲಿ ಸವಿನಯ ಮನವಿ: Shiva Kumar M
4 ತಾಲೂಕು ಆರೋಗ್ಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಡಾಕ್ಟರ್ ಗಳ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಅಂದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಆ ಜಾಗಕ್ಕೆ ಸೂಕ್ತವಾದವರು ಬಂದು ಕ್ರಮ ಕೈಗೊಳ್ಳುತ್ತಾರೆ: Vinod Vinu.
5 ನಾ ನೋಡಿರೋ ಹಾಸ್ಪಿಟಲ್ಗಳಲ್ಲಿ ಇದು ತುಂಬಾ worsht hospital: Any Balu.
6 ಅದು ಗೌರ್ಮೆಂಟ್ ಅಲ್ಲ ಅದು ಪ್ರತಿವೊಂದಕ್ಕೂ ದುಡ್ಡು ಕೊಡತಾ ಇರಬೇಕು ಇಲ್ಲ ಅಂದ್ರೇ ಚಿಕಿತ್ಸೆ ಅಷ್ಟುಕ್ಕೆ ಅಷ್ಟೇ; Mala M Narayan.
7 D H O. T H O ವರಮಹಾಲಕ್ಷ್ಮಿ ಹಬ್ಬಕ್ ಊರಿಗೆ ಹೋಗಿದ್ದಾರೆ ಅನ್ಕೊಂತೀನಿ, ಏನ್ರೀ ಇದು ನಮ್ಮ ಕರ್ಮ: Raju Rajkumar.
8 ಇದರಲ್ಲಿ ರಾಜಕೀಯ ಬಿಟ್ಟು ಸರಿಯಾದ ಕ್ರಮ ನ್ಯಾಯ ಕೊಡಿಸಿ ಸರ್; Ravichandra GN Chandru.
9 ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದ ಜೀವ ಎಷ್ಟೋ ಜನರ ಜೀವ ಹೋಗುತ್ತಿವೆ
ನ್ಯಾಯ ಎಲ್ಲಿದೆ, ಪ್ರಾಣ ಉಳಿಸುವ ಬದಲು ಪ್ರಾಣ ತೆಗೆಯುತ್ತಿದ್ದಾರೆ; Shruthi GS
10 ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡಿ ಮಾಡಿ ದೇಹ/ದುರಹಂಕಾರ ಬೆಳೆದು ಕೆಲಸ ಮಾಡಲು ಕಳ್ಳತನ……ಹಾಗಾಗಿ ಇವರಿಗೆ ಸ್ಥಳದಿಂದ ಸ್ಥಳಕ್ಕೆ ವರ್ಗಾವಣೆ ಮಾಡುತ್ತಾ ಇದ್ದರೆ ಒಂದೇ ಕಡೆ ಪಳಗದೆ ಶೃದ್ದೆಯೆಂದ ಕೆಲಸ ಮಾಡುತ್ತಾ ಸೇವೆ ಮಾಡುತ್ತಾರೆ: Shiva Kumar Ghati Shivu
11 Duddu anta saytare prati yobbbaru; Mahesh Kavya.
12 ಮಹಿಳಾ ಆಯೋಗಕ್ಕೆ ದೂರು ಕೊಡಿ ನೀರು ಇಲ್ಲದೆ ಜಾಗಕ್ಕೆ ಎತ್ತಂಗಡಿ ಮಾಡ್ಲಿ ಅವರನ್ನ..ಅವಾಗ ಗೊತ್ತಾಗುತ್ತೆ: Shivakumar Shivu.
13 ಸಾಮಾನ್ಯ ಜನರ ಜೀವ ತೆಗೆಯುತ್ತಿರುವ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಇವರ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ..
ಕೇವಲ ಸಂಬಳ ಎಣಿಸಿದರೆ ಸಾಲದು.. ಸಾಮಾನ್ಯರ ಜೀವನದ ಬಗ್ಗೆ ಗಮನ ನೀಡಬೇಕಿದೆ; Shruthi Gs
14 ಇದಕ್ಕೆಲ್ಲ ಕಾರಣ ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷತನ ಇದು ಮೊದಲೇನಲ್ಲ ಪದೇ ಪದೇ ನಡೆಯುತ್ತಿರುವ ದುರ್ಘಟನೆ: Manjunatha GL