Harithalekhani: ಒಂದು ದಿನ ವ್ಯಕ್ತಿಯೊಬ್ಬ ತನ್ನ ಮಗ ಹಾಗೂ ಸಾಕಿದ ಕತ್ತೆಯೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದ. ಅಪ್ಪ, ಮಗ ದಾರಿಯಲ್ಲಿ ಹರಟುತ್ತಾ ಕತ್ತೆಯನ್ನು ನಡೆಸಿಕೊಂಡು ಮಾರುಕಟ್ಟೆಯತ್ತ ಸಾಗಿದ್ದರು.
ಮಾರ್ಗಮಧ್ಯದಲ್ಲಿ ನೆರೆಮನೆಯ ಹೆಂಗಸೊಬ್ಬಳು ಎದುರಾದಳು. ‘ಅಲ್ಲಾ, ಸಾಮಾನು ಹೊರುವ ಕತ್ತೆ ಇವರ ಬಳಿ ಇದೆ. ಅಂತಹುದರಲ್ಲಿ ಇವರು ಕಾಲ್ನಡಿಗೆಯಲ್ಲಿ ಬರುತ್ತಿದ್ದಾರಲ್ಲಾ’ ಎಂದು ಆಕೆಗೆ ಅನಿಸಿತು.
ಈ ರೀತಿಯ ಯೋಚನೆ ಬಂದಿದ್ದೇ ತಡ ಆಕೆ, ‘ಏನಿದು!? ನಿಮ್ಮ ಬಳಿ ಕತ್ತೆಯಿದೆ. ಆದರೂ ಹೀಗೆ ನಡೆದು ಸಾಗುತ್ತಿದ್ದೀರಲ್ಲ? ಕತ್ತೆಯನ್ನು ನಿಮ್ಮ ಸ್ವಂತ ಅನುಕೂಲಕ್ಕೆ ಬಳಸಿಕೊಳ್ಳಿ. ಪಾಪ, ಮಗು ನಡೆದು-ನಡೆದು ಬಳಲಿದ್ದಾನೆ. ಅವನನ್ನು ಕತ್ತೆಯ ಮೇಲೆ ಕೂರಿಸಿ ನಡೆಸಬಹುದಲ್ಲಾ’ ಎಂದು ಸಲಹೆ ನೀಡಿದಳು.
ಆಕೆ ಹಾಗೇ ಹೇಳುತ್ತಲೇ ಆ ಬಾಲಕನಿಗೂ ಕತ್ತೆಯ ಮೇಲೆ ಕೂರುವ ಆಸೆಯಾಯಿತು. ಕೂಡಲೇ ತನ್ನಪ್ಪನನ್ನು ಕುರಿತು ಅವನು, ‘ಅಪ್ಪಾ… ಅಪ್ಪಾ… ನನ್ನನ್ನು ಇದರ ಮೇಲೆ ಕೂರಿಸಪ್ಪಾ. ನನಗೂ ಇದರ ಮೇಲೆ ಸವಾರಿ ಮಾಡಬೇಕೆನಿಸಿದೆ’ ಎಂದ. ಸರಿ, ಮಗನನ್ನು ಕತ್ತೆಯ ಮೇಲೆ ಕೂರಿಸಿದ ಅಪ್ಪ. ಇಬ್ಬರೂ ಹರಟುತ್ತಾ ಮುಂದೆ ಸಾಗಿದರು.
ಸ್ವಲ್ಪ ದೂರ ಸಾಗಿದ ನಂತರ ಮತ್ಯಾರೋ ಪರಿಚಿತರು ಸಿಕ್ಕರು. ಬಾಲಕ ಕತ್ತೆಯ ಮೇಲೆ ಸವಾರಿ ಮಾಡುತ್ತಿರುವುದನ್ನು ಕಂಡು, ‘ಅಲ್ಲವೋ ಪುಟ್ಟ, ನಿನ್ನ ತಂದೆಗೆ ವಯಸ್ಸಾಗಿದೆ. ಅವರು ಸವಾರಿ ಮಾಡಿಕೊಂಡು ಬರಬೇಕು. ಅಂತಹುದರಲ್ಲಿ ನೀನು ಸವಾರಿ ಮಾಡುತ್ತಾ ತಂದೆಯನ್ನ ನಡೆಸಿಕೊಂಡು ಬರುತ್ತಿದ್ದೀಯಲ್ಲಾ! ಇದು ಸರೀನಾ?’ ಎಂದರು.
ಈ ಮಾತೂ ಸರಿಯೇ ಎಂದು ಬಾಲಕನಿಗೆ ಅನಿಸಿತು. ಸರಿ, ತಾನು ಕತ್ತೆಯ ಮೇಲಿಂದ ಇಳಿದು, ತಂದೆಗೆ ಸವಾರಿ ಮಾಡಲು ಅವನು ಅವಕಾಶ ಕೊಟ್ಟ. ಈಗ ಸವಾರಿ ಮಾಡುವ ಸರದಿ ತಂದೆಯದು.
ಇಬ್ಬರೂ ಸ್ವಲ್ಪದೂರ ಮುಂದೆ ಹೋದರು. ಮತ್ತೊಬ್ಬ ವ್ಯಕ್ತಿ ಎದುರಾದ. ‘ಪಾದ! ಬಾಲಕ ನಡೆದುಕೊಂಡು ಬರುತ್ತಿದ್ದಾನೆ. ತಂದೆಯಾದವನು ಸವಾರಿ ಮಾಡಿಕೊಂಡು ಬರುತ್ತಿದ್ದಾನೆ. ಇವನಿಗೆ ಸ್ವಲ್ಪವೂ ಕರುಣೆಯೇ ಇಲ್ಲವೇ?’ ಎನ್ನುತ್ತಾ ತಂದೆಯನ್ನು ಆತ ಕೇಳಿಯೇಬಿಟ್ಟ.
‘ಅಲ್ಲಯ್ಯಾ ನೀನು ಕತ್ತೆಯ ಮೇಲೇರಿ ಬರುತ್ತಾ, ಮಗನನ್ನು ನಡೆಸಿಕೊಂಡು ಬರುತ್ತಿರುವೆಯಲ್ಲಾ! ನಿನಗೆ ಮನಸ್ಸಾದರೂ ಹೇಗೆ ಬಂತು?’ ಈಗ ಮೂರನೇ ಸ್ನೇಹಿತನ ಸರದಿ. ‘ನೋಡುತ್ತೀರಿ, ಅದಕ್ಕೆ ಹೇಗೆ ಜೀವ ಬರುವಂತೆ ಮಾಡುತ್ತೀನಿ’ ಎಂದು ಮಂತ್ರ ಹೇಳಲು ಆತ ಮುಂದಾದಾಗ, ಅಲ್ಲೇ ಇದ್ದ ನಾಲ್ಕನೇ ಸ್ನೇಹಿತ ‘ಏ ಬೇಡ ಕಣೋ, ಇದು ಸಿಂಹದಂತೆ ಕಾಣುತ್ತಿದೆ.
ಇದಕ್ಕೇನಾದರೂ ಜೀವ ಬಂದರೆ, ನಾವ್ಯಾರೂ ಉಳಿಯುವುದಿಲ್ಲ. ಇದನ್ನು ಇಲ್ಲಿಗೇ ಬಿಟ್ಟುಬಿಡಿ’ ಎಂದ. ಇದನ್ನು ಕೇಳಲು ತಯಾರಿಸಲಿಲ್ಲ ಆ ಸ್ನೇಹಿತ ‘ಏ ಸುಮ್ಮನಿರೋ ಪೆದ್ದ. ನಿನಗೇನು ಗೊತ್ತು, ನಿನಗೇನಾದರೂ ವಿಜ್ಞಾನ ಗೊತ್ತಿದೆಯಾ?’ ಎಂದು ಜೋರು ಮಾಡಿ ಸುಮ್ಮನಾಗಿಸಿದ.
‘ಸರಿ ನಿಮ್ಮಿಷ್ಟ’ ಎನ್ನುತ್ತಾ ನಾಲ್ಕನೆಯವನು ಸುಮ್ಮನಾದ. ಅದರೆ, ಮೂರನೆಯವನು ಮಂತ್ರ ಉಚ್ಚರಿಸುವ ಮೊದಲೇ ಪಕ್ಕದಲ್ಲಿ ಇದ್ದ ಮರವೇರಿ ಸುರಕ್ಷಿತವಾಗಿ ಕುಳಿತುಕೊಂಡುಬಿಟ್ಟ. ಇದನ್ನು ಕಾಣುತ್ತಲೇ ಗಹಗಹಿಸಿ ನಗುತ್ತಾ ಆತನನ್ನು ಉಳಿದ ಮೂವರೂ ಅಪಹಾಸ್ಯ ಮಾಡಿದರು.
ಮೂರನೆಯವನು ಪಟಪಟನೆ ಮಂತ್ರ ಹೇಳುತ್ತಲೇ ಸಿಂಹಕ್ಕೆ ಜೀವ ಬಂತು. ತಕ್ಷಣ ಸಿಂಹವು ಆ ಮೂವರ ಮೇಲೂ ಆಕ್ರಮಣ ಮಾಡಿತು. ಅವರೆಲ್ಲ ಸಿಂಹಕ್ಕೆ ಬಲಿಯಾದರು. ಈ ಎಲ್ಲವನ್ನೂ ಮರದ ಮೇಲಿಂದ ವೀಕ್ಷಿಸುತ್ತಿದ್ದ ಸುಬದ್ಧಿಗೆ ದುಃಖವಾಯಿತು.
ಎಷ್ಟು ಹೇಳಿದರೂ ಅನ್ಯಾಯವಾಗಿ ತನ್ನ ಸ್ನೇಹಿತರು ಪ್ರಾಣ ಕಳೆದುಕೊಂಡರಲ್ಲಾ ಎಂದು ಮರುಕಪಟ್ಟ. ಸಿಂಹ ಹೊರಟುಹೋದ ಸ್ವಲ್ಪ ಹೊತ್ತಿನ ನಂತರ ಮರದ ಮೇಲಿಂದ ಇಳಿದು ತನ್ನ ಹಳ್ಳಿಗೆ ಹಿಂತಿರುಗಿದ.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು. (AI ಚಿತ್ರ ಬಳಸಲಾಗಿದೆ)